Advertisement
ದನಕರುಗಳ ಮೇವಿಗೆ ಜಾಗವೇ ಇಲ್ಲ. ಇದ್ದರೂ ತುಂಬಾ ವಿರಳ. ಗೋಮಾಳದಲ್ಲಿ ಸ್ವಚ್ಛಂದವಾಗಿ ಮೇಯುತ್ತಿದ್ದ ರಾಸುಗಳು ಹೊಲ-ಗದ್ದೆ, ತೋಟ, ರಸ್ತೆ ಬದಿ ಸೇರಿದಂತೆ ಅಲ್ಲಿ-ಇಲ್ಲಿ ಮೇಯುವಂತಹಾ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಇದನ್ನೂ ಓದಿ:ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್
ಮಲೆನಾಡಲ್ಲಿ ಯತೇಚ್ಛವಾಗಿ ಅರಣ್ಯವಿದೆ. ಅರಣ್ಯದಲ್ಲಿ ಮೇವಿಗೆ ಹೋದರೆ ರಾಸುಗಳು ವಾಸಪ್ ಮನೆಗೆ ಬರುವುದು ಅನುಮಾನ. ಕಾಡುಪ್ರಾಣಿಗಳಿಗೆ ಆಹಾರವಾಗುತ್ತದೆ. ಇದ್ದ ಗೋಮಾಳವೂ ಒತ್ತುವರೆಯಾಗಿರೋದು ರೈತರು ರಾಸುಗಳನ್ನ ಸಾಕುವುದು ಕಷ್ಟಸಾಧ್ಯವಾಗಿದೆ. ಇನ್ನು ಒಂದು ಹಳ್ಳಿ, ಗ್ರಾಮ ಪಂಚಾಯಿತಿ ಅಂದಾಗ ಇಷ್ಟೆ ಪ್ರಮಾಣದ ಗೋಮಾಳ ಇರಬೇಕೆಂದು ಕಾನೂನು ಇದೆ. ಆದರೆ, ಆ ಪ್ರಮಾಣದಲ್ಲಿ ಗೋಮಾಳ ಇಲ್ಲದಂತಾಗಿದೆ.
ಅಧಿಕಾರಿಗಳು ಸರ್ಕಾರದ ಆದೇಶವನ್ನ ಮಲೆನಾಡ ತಣ್ಣನೆಯ ಗಾಳಿಯಲ್ಲಿ ತೂರಿ ಗೋಮಾಳ ಒತ್ತುವರಿಗೂ ದಾಖಲೆ ಮಾಡಿ ಕೊಟ್ಟಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಮೊದಮೊದಲು ಗೋಮಾಳವನ್ನು ಒತ್ತುವರಿ ಮಾಡಿ ತೋಟ ಮಾಡುತ್ತಿದ್ದರು. ತದನಂತರ ಅಧಿಕಾರಿಗಳು ರೆಕಾರ್ಡ್ ಮಾಡಿಕೊಡುತ್ತಿದ್ದರು. ಆದರೆ, ಈಗ ಮೊದಲು ಗೋಮಾಳಕ್ಕೆ ದಾಖಲೆ ಮಾಡಿಕೊಡುತ್ತಿದ್ದಾರೆ. ನಂತರ ಅಲ್ಲಿ ತೋಟ ಮಾಡುತ್ತಿದ್ದಾರೆಂಬ ಆರೋಪವೂ ಇದೆ.
ರಾಸುಗಳ ಭೂಮಿಯನ್ನು ಉಳಿಸಬೇಕಾದವರೇ ಇಂದು ಹಣದ ಆಸೆಗೆ ದಾಖಲೆ ಮಾಡಿಕೊಡುತ್ತಿರುವುದರಿಂದ ರಾಸುಗಳ ಮೇವಿಗೆ ಜಾಗವಿಲ್ಲದಂತಾಗಿದೆ. ರಾಸುಗಳು ಎಲ್ಲೆಂದರಲ್ಲಿ ಮೇಯಲು ಹಾಗೂ ದನಗಳ್ಳರ ಪಾಲಾಗುತ್ತಿವೆ. ಹಾಗಾಗಿ, ತಾಲೂಕು ಹಾಗೂ ಜಿಲ್ಲಾಡಳಿತ ಗೋಮಾಳದ ಭೂಮಿಯತ್ತ ಗಮನ ಹರಿಸಿ ರಾಸುಗಳನ್ನು ಜಾಗವನ್ನು ಉಳಿಸಬೇಕೆಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.