Advertisement
ಮೊದಲ ವೀರಗಲ್ಲು ಬಳಪದ ಕಲ್ಲಿನದಾಗಿದ್ದು 3.8ಅಡಿ ಎತ್ತರ-2.0ಅಡಿ ಅಗಲ-0.6 ಅಡಿ ದಪ್ಪವಾಗಿದೆ.ನಾಲ್ಕು ಫಲಕಗಳಿದ್ದು ಕೆಳಗಿನ ಫಲಕದಲ್ಲಿ ನಾಲ್ವರುಭಲ್ಲೆಧಾರಿ ಅಶ್ವಾರೋಹಿ ಶತ್ರು ಸೈನಿಕರೊಂದಿಗೆ ಕಾಳಗಮಾಡುತ್ತಿರುವ ಧನುರ್ಧಾರಿ ಯೋಧನ ಚಿತ್ರಣ.
Related Articles
Advertisement
ಶಿಲ್ಪ ಲಕ್ಷಣದ ಹಿನ್ನೆಲೆಯಲ್ಲಿಈ ವೀರಗಲ್ಲು ಹೊಯ್ಸಳರ ಕಾಲದ ಸ್ಮಾರಕವೆಂದುಊಹಿಸಿದ್ದಾರೆ. ಶ್ರೀಮಠದ ಎದುರು ಬಲಭಾಗದಲ್ಲಿರುವಮೂರನೇ ಸ್ಮಾರಕವಾದ ಬಳಪದ ಕಲ್ಲಿನ ಈವೀರಮಹಾಸತಿಕಲ್ಲು 1.83.ಅಡಿ ಎತ್ತರ,1.37ಅಡಿ ಅಗಲ,0.25 ದಪ್ಪ ಅಳತೆಯದಾಗಿದೆ.
ಸ್ಮಾರಕದ ಆಯತಾಕಾರದಕೋಷ್ಟಕದ ಬಲಗಡೆ ಬಿಲ್ಗಾರ ಯೋಧನೊಬ್ಬ ಎಡಗೈನಲ್ಲಿಬಿಲ್ಲು, ಎತ್ತಿದ ಬಲಗೈನಲ್ಲಿ ಬಾಣ ಹಿಡಿದಿದ್ದು ಬಲಗಡೆಸೊಂಟದಲ್ಲಿ ಕಠಾರಿ ಧರಿಸಿದ್ದಾನೆ. ಅವನ ಎಡಗಡೆವೀರ ಬಿಲ್ಗಾರನ ಮಡದಿ ಸರ್ವಾಲಂಕೃತಳಾಗಿ ಇಳಿಸಿದಎಡಗೈನಲ್ಲಿ ಮಂಗಳ ಸೂಚಕವಾದ ಕನ್ನಡಿ, ಆಶೀರ್ವಾದಭಂಗಿಯಲ್ಲಿನ ಬಲಗೈನ ಹಸ್ತದಲ್ಲಿ ಕಲಶ ಹಿಡಿದ ಚಿತ್ರಣವಿದೆ.
ಸ್ಮಾರಕಗಳ ಬಗ್ಗೆ ಸಂಶೋಧಕ ಪಾಂಡುರಂಗಅಧ್ಯಯನ ನಡೆಸಿದ್ದು, ಮಠದ ಧರ್ಮದರ್ಶಿಮಹೇಶ್, ಅರ್ಚಕ ಶಿವಮೂರ್ತಯ್ಯ, ಟಿ.ಪಿ.ಪ್ರಭಾಕರ್ ಮತ್ತು ಎಚ್.ಕೆ. ಮಯೂರ್, ಇತಿಹಾಸತಜ್ಞ ಎಚ್.ಎಸ್. ಗೋಪಾಲರಾವ್, ಆರ್. ಶೇಷಶಾಸ್ತ್ರಿ,ಎಂ.ಜಿ. ಮಂಜುನಾಥ್ ಸಹಕಾರ ನೀಡಿದ್ದಾರೆ ಎಂದುತಿಳಿಸಿದರು.