Advertisement

ವಿದ್ಯುತ್‌ ಬೇಲಿಗೆ ಸಿಲುಕಿ ಕಾಡಾನೆ ಸಾವು

01:54 PM Dec 08, 2021 | Team Udayavani |

ಚಿಕ್ಕಮಗಳೂರು: ಕಾಡುಪ್ರಾಣಿಗಳಿಂದ ಬೆಳೆರಕ್ಷಣೆಗೆ ಅಕ್ರಮವಾಗಿ ನಿರ್ಮಿಸಿದ್ದ ವಿದ್ಯುತ್‌ಬೇಲಿಗೆ ಸಿಲುಕಿ ಕಾಡಾನೆಯೊಂದು ದಾರುಣವಾಗಿಮೃತಪಟ್ಟ ಘಟನೆ ಸೋಮವಾರ ಸಂಜೆ ತರೀಕೆರೆತಾಲೂಕು ಮೀಸಲು ಅರಣ್ಯ ವ್ಯಾಪ್ತಿಯಲ್ಲಿನಡೆದಿದೆ. ಪ್ರಕರಣದ ಸಂಬಂಧ ತಾಯಿ ಮತ್ತುಮಗನ ವಿರುದ್ಧ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿದೆ.

Advertisement

ತರೀಕೆರೆ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದತ್ಯಾಗದಬಾವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದಕುಟುಂಬವೊಂದು ಜೋಳ ಬೆಳೆದಿತ್ತು.ಕಾಡುಪ್ರಾಣಿಯಿಂದ ಬೆಳೆ ರಕ್ಷಣೆ ಮಾಡಲುಅಕ್ರಮವಾಗಿ ವಿದ್ಯುತ್‌ ಬೇಲಿ ನಿರ್ಮಿಸಿದ್ದರು.ಸೋಮವಾರ ರಾತ್ರಿ ವೇಳೆ ಸುಮಾರು 35ವರ್ಷ ಪ್ರಾಯದ ಒಂಟಿ ಸಲಗ ಜಮೀನಿಗೆನುಗ್ಗಲು ಯತ್ನಿಸಿದ್ದ ಸಂದರ್ಭದಲ್ಲಿ ವಿದ್ಯುತ್‌ಬೇಲಿಗೆ ಸಿಲುಕಿದ್ದು ವಿದ್ಯುತ್‌ ಸ್ಪರ್ಶಿಸಿ ಸ್ಥಳದಲ್ಲೇಮೃತಪಟ್ಟಿದೆ.

ಅಕ್ರಮ ವಿದ್ಯುತ್‌ ಬೇಲಿ ನಿರ್ಮಿಸಿ ಕಾಡಾನೆಸಾವಿಗೆ ಕಾರಣರಾದ ಕೃಷಿಕ ರಘು ಹಾಗೂಆತನ ತಾಯಿ ವಿರುದ್ಧ ತರೀಕೆರೆ ತಾಲೂಕುಲಿಂಗದಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮತ್ತುಅರಣ್ಯ ಇಲಾಖೆ ಅಧಿ ಕಾರಿಗಳು ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದಾರೆ.

ಘಟನೆಯ ಬಳಿಕ ತಾಯಿಮತ್ತು ಮಗ ತಲೆಮರೆಸಿಕೊಂಡಿದ್ದಾರೆ.ಸ್ಥಳಕ್ಕೆ ಶಿವಮೊಗ್ಗ ವನ್ಯಜೀವಿ ವಿಭಾಗದಪಶು ವೈದ್ಯಾಧಿ ಕಾರಿ ವಿನಯ್‌, ಉಪ ಅರಣ್ಯಸಂರಕ್ಷಣಾಧಿ ಕಾರಿ ಘಮ್ಮನಗಟ್ಟಿ, ತರೀಕೆರೆಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ದಿನೇಶ್‌,ಆರ್‌ಎಫ್‌ಒ ಸತೀಶ್‌, ವನ್ಯಜೀವಿ ಪರಿಪಾಲಕಜಿ. ವಿರೇಶ್‌, ಲಿಂಗದಹಳ್ಳಿ ಪೊಲೀಸ್‌ ಇನ್‌ಸ್ಪೆಕ್ಟರ್‌ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತೀಚೆಗೆ ತಣಗಿಬೈಲು ವ್ಯಾಪ್ತಿಯ ಪರಮೇಶ್‌ಎಂಬುವರು ನಿರ್ಮಿಸಿದ್ದ ಅಕ್ರಮ ವಿದ್ಯುತ್‌ಬೇಲಿಗೆ ಸಿಲುಕಿ ಕಾಡಾನೆಯೊಂದು ಮೃತಪಟ್ಟಿತ್ತು.ಆ ಘಟನೆ ಮಾಸುವ ಮುನ್ನವೇ ಮತ್ತೂಂದುಅಂತಹ ಘಟನೆ ನಡೆದಿದ್ದು, ವನ್ಯಜೀವಿ, ಪರಿಸರಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿಕಾಡುಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆಕಾರಣವಾಗುತ್ತಿದ್ದು ಸರ್ಕಾರ ಈ ಸಮಸ್ಯೆಬಗೆಹರಿಸಲು ಮುಂದಾಗಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next