Advertisement

ಚಿಕ್ಕಕೊಳತ್ತೂರು  ಶ್ರೀಬಾವಿ ಬಸವಣ್ಣ ಪೂಜಾ ಮಹೋತ್ಸವ ಸಂಪನ್ನ

01:00 AM Mar 20, 2019 | Team Udayavani |

ಶನಿವಾರಸಂತೆ: ಸಮೀಪದ ಚಿಕ್ಕಕೊಳತ್ತೂರು ಗ್ರಾಮದಲ್ಲಿರುವ ಶ್ರೀ ಬಾವಿ ಬಸವಣ್ಣ ದೇವರ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು. ಚಿಕ್ಕಕೊಳತ್ತೂರು ಗ್ರಾಮದ ಗ್ರಾಮ ದೇವರಾದ ಬಾವಿ ಬಸವಣ್ಣ ಈ ಭಾಗದ ಜನರಿಗೆ ಕುಲದೇವತೆ ಕೂಡ ಆಗಿದೆ. ಈ ಗ್ರಾಮದ ಹೆಣ್ಣು ಮಕ್ಕಳನ್ನು ದೂರದ ಊರಿಗೆ ವಿವಾಹ ಮಾಡಿಕೊಟ್ಟ ಮೇಲೆ ವಿವಾಹಿತ ಹೆಣ್ಣು ಮಕ್ಕಳು ತಪ್ಪದೆ ಪ್ರತಿವರ್ಷವೂ ತವರೂರಿಗೆ ಬಂದು ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಬಾವಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದೆ ಗ್ರಾಮದ ಯುವಕರು ಹಾಗೂ ಇಲ್ಲಿಂದ ಬೇರೆ ಊರಿಗೆ ವಲಸೆ ಹೋದವರೂ ಸಹ ತವರೂರಿಗೆ ಬಂದು ವರ್ಷಕ್ಕೊಮ್ಮೆ ನಡೆಯುವ ಬಾವಿ ಬಸವಣ್ಣ ಪೂಜ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

Advertisement

ಅಕ್ಕಪಕ್ಕದ ಗ್ರಾಮಸ್ಥರು, ಭಕ್ತರು ತಮ್ಮ ಇಷ್ಟಾರ್ಥ ಕೋರಿ ಬಾವಿ ಬಸವಣ್ಣ ದೇವರಿಗೆ ಹರಕೆ ಮಾಡಿಕೊಳ್ಳುತ್ತಾರೆ, ಕೆಲವು ರಾಜಕಾರಣಿಗಳು ಸಹ ಇಷ್ಟಾರ್ಥ ಕೋರಿ ಬಾವಿ ಬಸವಣ್ಣ ದೇವರಲ್ಲಿ ಹರಿಕೆ ಸಲ್ಲಿಸುತ್ತಾರೆ ಈ ಎಲ್ಲ  ಭಕ್ತರು ಬಾವಿ ಬಸವಣ್ಣ ದೇವರು ತಮ್ಮ ಬೇಡಿಕೆ ಈಡೇರಿಸಿದ ನಂಬಿಕೆಯಿಂದ ಬಾವಿ ಬಸವಣ್ಣ ಪೂಜಾ ಮಹೋತ್ಸವದಲ್ಲಿ ನೂರ ಒಂದು ಈಡುಗಾಯಿ ಒಡೆ ಯುವ ಮೂಲಕ ಹಾಗೂ ಕೈಹಿಡಿ ಗಳಷ್ಟು ನಾಣ್ಯವನ್ನು ಬಾವಿಯೊಳಗೆ ಉದ್ಭವಗೊಂಡಿದೆ ಎಂದು ಹೇಳಲಾದ ಬಾವಿ ಬಸವಣ್ಣ ದೇವರಿಗೆ ಹರಕೆ ಸಲ್ಲಿಸುತ್ತಾರೆ.

ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಬಾವಿಯೊಳಗಿರುವ ಉದ್ಬವ ಬಸವಣ್ಣ ದೇವರಿಗೆ ಹರಕೆ ರೂಪದಲ್ಲಿ ಹಿಡಿ ನಾಣ್ಯವನ್ನು ಹಾಕುತ್ತಾರೆ. ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಭಕ್ತರು ಬಾವಿಯೊಳಗೆ ಹಾಕಿದ ನಾಣ್ಯವನ್ನು ಮುಂದಿನ ವರ್ಷ ನಡೆಯುವ ಪೂಜಾ ಮಹೋತ್ಸವದ ಖರ್ಚಿಗೆ ಬಳಕೆ ಮಾಡಿಕೊಳ್ಳುತ್ತಾರೆ. 

ಸೋಮವಾರ ಬೆಳಗ್ಗೆಯಿಂದ ಸಂಜೆ ತನಕ ಚಿಕ್ಕಕೊಳತ್ತೂರು ಬಾವಿ ಬಸವಣ್ಣ ದೇವರ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮ ನಡೆಯಿತು. ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸಿದ್ದರು. ಪೂಜಾ ಮಹೋತ್ಸವ ಪ್ರಯುಕ್ತ ಅನ್ನ ಸಂತರ್ಪಣೆ ನಡೆಸಲಾಯಿತು.  ಗ್ರಾಮದ ಪ್ರಮುಖರಾದ ಸಿ.ಕೆ.ಕೊಮರಪ್ಪ, ಸಿ.ಜೆ.ಗಿರೀಶ್‌, ಬೆಳ್ಳಿಗೌಡ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next