Advertisement
ಮೂಗಲ ಮರಿಯ ಶಿವರಾಜ್ ಅವರ ಮಗ ಚರಣ್(10) ಮತ್ತು ರಾಮಾಂಜಿ ಅವರ ಮಗ ತೇಜಸ್ (11) ಮೃತರು.
ಬರದಿದ್ದರಿಂದ ಟೆಂಪೋದಲ್ಲಿ ಕರೆದ್ಯೊಯುತ್ತಿದ್ದ ವೇಳೆ ಕೆಟ್ಟು ನಿಂತಿದ್ದು, ಬೇರೊಂದು ವಾಹನದಲ್ಲಿ ಆಸ್ಪತ್ರೆಗೆ ತಲುಪಿದ ವೇಳೆ
ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮದ ಯುವಕರು ನಗರದ ಸಾರ್ವಜನಿಕ ಆಸ್ಪತ್ರೆಯ ಕಿಟಕಿ, ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಇದನ್ನೂ ಓದಿ:ಕೆಜಿಎಫ್: ಮೂರ್ತಿ ಭಂಜನ, ಕತ್ತಿ ಹಿಡಿದು ತಿರುಗಿದ ದುಷ್ಕರ್ಮಿ
ಆಸ್ಪತ್ರೆಯಿಂದ ಕ್ಷಣಾರ್ಧದಲ್ಲಿ ನಾಪತ್ತೆಮಕ್ಕಳನ್ನು ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮದ ಯುವಕರು, ಆಸ್ಪತ್ರೆಯ ಕಿಟಕಿ ಬಾಗಿಲುಗಳ ಗಾಜು ಮತ್ತು ಸಹಾಯವಾಣಿ ಕೇಂದ್ರದ ಗಾಜುಗಳನ್ನು ಒಡೆದು ವೈದ್ಯರನ್ನು ಯುವಕರು ನಿಂದಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಆಸ್ಪತ್ರೆಯಿಂದ ಹೊರಟು ಹೋಗಿದ್ದಾರೆಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.
ದಾಂಧಲೆ ನಡೆಸಿದ ಯುವಕರನ್ನು ಪತ್ತೆ ಹಚ್ಚಲು ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಿಸಿ ಕ್ಯಾಮೆರಾ ಕೆಟ್ಟಿರುವುದು ಬೆಳಕಿಗೆ ಬಂದಿದೆ. ಇದು ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. 108 ಇರುವುದೇ ಮೂರು, ಒಂದು ಕೆಟ್ಟಿದೆ
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂತೋಷ್, ತಾಲೂಕಿನಲ್ಲಿ 108 ವಾಹನಗಳು ಇರುವುದು ಮೂರು. ಅದರಲ್ಲಿ ಒಂದು ಕೆಟ್ಟಿರುವುದರಿಂದ ಉಳಿದವುಗಳಿಗೆ ಬಿಡುವಿರುವುದಿಲ್ಲ. ಯಾವುದೇ ಕರೆಗೆ ಸ್ಪಂದಿಸಿ ಅಲ್ಲಿಗೆ ತೆರಳಬೇಕಾದರೆ ತಡವಾಗುತ್ತದೆ. ಆ್ಯಂಬುಲೆನ್ಸ್ ಬಾರದ ಕೋಪಕ್ಕೆ ಆಸ್ಪತ್ರೆಯ ಮೇಲೆ ದಾಳಿ ಮಾಡಿರುವುದು ಸರಿಯಲ್ಲ. ಮುಳಬಾಗಿಲಿನಲ್ಲಿ ಏಳು 108 ವಾಹನಗಳಿವೆ. ಆದರೆ ನಮ್ಮ ತಾಲೂಕಿಗೆ ಕೇವಲ ಮೂರೇ ಮೂರು ವಾಹನಗಳಿರುವುದು ದುರದೃಷ್ಟಕರ.