Advertisement

ಮನೆಯೊಳಗಿರುವ ಜನರಿಗೆ ಈಗ ಹಾವುಗಳ ಕಾಟ!

08:06 AM May 01, 2020 | Hari Prasad |

ಚಿಕ್ಕಬಳ್ಳಾಪುರ: ಹೊರಗೆ ಬರ್ಬೇಡಿ ಕೋವಿಡ್ ವೈರಸ್ ಕಾಟವಿದೆ ಎಂದು ಸರಕಾರ ಹೇಳಿದ ಕಾರಣ ಮನೆಯೊಳಗೇ ಕುಳಿತಿರುವ ಚಿಕ್ಕಬಳ್ಳಾಪುರದ ನಾಗರಿಕರಿಗೆ ಈಗ ಹೊಸದೊಂದು ತಲೆನೋವು ಪ್ರಾರಂಭವಾಗಿದೆ.

Advertisement

ಲಾಕ್ ಡೌನ್ ನಿಂದ‌ ಆರಾಮಾಗಿರುವ ನಾಗರಿಕರಿಗೆ ಈಗ ಹಾವುಗಳ ಕಾಟ ಶುರುವಾಗಿವೆ. ಅದೂ ಒಂದಲ್ಲ‌ ಎರಡಲ್ಲ, ಬರೋಬರಿ 8 ಹಾವುಗಳು ಒಂದೆ ಸಮನೆ ಕಾಣಿಕೊಂಡು ಜನ ಕಂಗಾಲಾಗುವಂತೆ ಮಾಡಿವೆ.

ಚಿಕ್ಕಬಳ್ಳಾಪುರ ನಗರದ 20 ನೇ ವಾರ್ಡಿನ ಮುಸ್ಟೂರು ರಸ್ತೆಯ ಪ್ರಶಾಂತನಗರದಲ್ಲಿ ನಿನ್ನೆ ನಾಲ್ಕು ನಾಗರ ಹಾವುಗಳು ಬಂದು ಜನರನ್ನು ಆತಂಕಕ್ಕೀಡು ಮಾಡಿದ್ದವು.

ಇನ್ನೇನು ನೆಮ್ಮದಿಯಿಂದ ಇದೀವಿ ಅನ್ನೊಷ್ಟರಲ್ಲಿ ಬುಧವಾರ ಐದು ಹಾವುಗಳು ಕಾಣಿಸಿಕೊಳ್ಳುವ ಮೂಲಕ ಈ ಹಾವುಗಳು ಇದೀಗ ವಸತಿ ಪ್ರದೇಶದ ಜನರ ನಿದ್ದೆಕೆಡಿಸಿವೆ.


ಇಂದು ಮೂರು ಬಾರಿ ಗಾತ್ರದ ಕೇರಿ ಹಾವುಗಳು ಒಂದು ಮಂಡಲ ಹಾವು ಕಾಣಿಸಿಕೊಂಡವು. ಕಳೆದ ಮೂರು ದಿನಗಳ ಹಿಂದೆ ಬಿದ್ದ ಮಳೆಯಿಂದ ಸಾಕಷ್ಡು ಬಿಸಿಗೆ ಹಾವುಗಳು ಜನರು ರಸ್ತೆಯಲ್ಲಿ ಓಡಾಡುವಂತೆ ಓಡಾಡುವ ಮೂಲಕ ಈ ಭಾಗದ ಜನರನ್ನು ತಲ್ಲಣಗೊಳಿಸಿದವು.

Advertisement

ಕಂದವಾರದ ಉರಗ ಪ್ರೇಮಿ ಸೈಯದ್ ಖಾಸಿಂ (ಸ್ನೇಕ್ ಬಾಬು) ಅವರನ್ನು ಕರೆಯಿಸಿ ಕಾಣಿಸಿಕೊಂಡ ಎಲ್ಲಾ  ಹಾವುಗಳನ್ನುಒಂದೊಂದಾಗಿ ಹಿಡಿದು ನಗರ ಹೊರಹೊಲಯದ ಕಣಿವೆ ಪ್ರದೇಶದ ಕಾಡಿನಲ್ಲಿಸುರಕ್ಷಿತವಾಗಿ ಬಿಡಲಾಯಿತು.

ಉರಗ ತಜ್ಞ ಸ್ನೇಕ್ ಬಾಬು ಅವರೊಂದಿಗೆ ಉರುಗ ಪ್ರೇಮಿಗಳಾದ ಕಂದವಾರದ ಭಾಷ, ಬಾಬಾಜಾನ್ ಸಹ ಈ ಹಾವುಗಳನ್ನು ಹಿಡಿಯುವಲ್ಲಿ ನೆರವಾದರು.

ಉರಗಗಳನ್ನು ಸುರಕ್ಷಿತವಾಗಿ ಹಿಡಿದು ಈ ಭಾಗದ ಜನರ ನೆಮ್ಮದಿಗೆ ಕಾರಣವಾದ ಉರಗ ಪ್ರೇಮಿ ಸ್ನೇಕ್ ಬಾಬು ಅವರ ಈ ಕಾರ್ಯ ಇದೀಗ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next