Advertisement

ಕೃಷಿ ಕಾಯ್ದೆತಿದ್ದುಪಡಿ ವಿರುದ್ದ ಹೋರಾಟ ಅಗತ್ಯ

02:10 PM Oct 26, 2021 | Team Udayavani |

ಶೃಂಗೇರಿ: ಕೇಂದ್ರ ಸರಕಾರ ಮಂಡಿಸಿದಕೃಷಿ ಕಾಯ್ದೆಯನ್ನು ಐಕ್ಯ ಹೋರಾಟದಮೂಲಕ ಸೋಲಿಸಬೇಕಿದೆ ಎಂದುನಿವೃತ್ತ ನ್ಯಾಯಮೂರ್ತಿ ಜಸ್ಟೀಸ್‌ನಾಗಮೋಹನದಾಸ್‌ ಹೇಳಿದರು.

Advertisement

ಪಟ್ಟಣದ ಗೌರಿಶಂಕರ್‌ಸಭಾಂಗಣದಲ್ಲಿ ಸೋಮವಾರಸಂಯುಕ್ತ ರೈತ ಕಾರ್ಮಿಕ ಒಕ್ಕೂಟದಿಂದಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿಅವರು ಮಾತನಾಡಿದರು.ದೇಶದ ಯಾವುದೇ ಮೂಲೆಯಲ್ಲಿರೈತರಿಗೆ ತೊಂದರೆಯಾದರೆದೇಶದ ಎಲ್ಲಾ ಭಾಗದ ರೈತರುಧ್ವನಿಗೂಡಿಸಬೇಕು.

ಕೃಷಿ ಕಾಯ್ದೆಯನ್ನುಎಲ್ಲರೂ ಒಟ್ಟಾಗಿ ಕಾಯ್ದೆಯನ್ನುವಿರೋಧಿ ಸಬೇಕು. ನೈತಿಕ, ಸಾಂಸ್ಕೃತಿಕಹಾಗೂ ಆರ್ಥಿಕ ದಿವಾಳಿತನದಿಂದಾಗಿಇಂದು ದೇಶದಲ್ಲಿ ರೈತರು ಆತ್ಮಹತ್ಯೆಗೆಶರಣಾಗಿದ್ದಾರೆ. 2019-20 ರಲ್ಲಿ1074 ಹಾಗೂ ಪ್ರಸಕ್ತ ಸಾಲಿನಲ್ಲಿಕೋವಿಡ್‌ ಸಂದರ್ಭದಲ್ಲಿಯೂ770 ರೈತರು ದೇಶದಲ್ಲಿ ಆತ್ಮಹತ್ಯೆಮಾಡಿಕೊಂಡಿದ್ದಾರೆ.

ಕೃಷಿ ಬಿಕ್ಕಟ್ಟುಉಂಟಾಗಿದ್ದು, ಕೃಷಿ ಉತ್ಪಾದನೆಗೆಮಾರುಕಟ್ಟೆ, ಯೋಜನೆ ಹಾಗೂಸರಿಯಾದ ಬೆಲೆ ಇಲ್ಲ. ಇಂತಹಸಂದರ್ಭದಲ್ಲಿ ರೈತರು ಸಂಕಷ್ಟ,ನೋವು ಅನುಭವಿಸುತ್ತಿರುವಾಗಕೇಂದ್ರ ಸರಕಾರದವರು ಕೃಷಿ ಕಾಯ್ದೆಜಾರಿಗೆ ತಂದು ಗಾಯದ ಮೇಲೆಬರೆ ಎಳೆದಿದ್ದಾರೆ.

ಕೃಷಿ ಕಾಯ್ದೆ,ಭೂಸ್ವಾ ಧೀನ, ಕೃಷಿ ಗುತ್ತಿಗೆ, ಎಪಿಎಂಸಿಕಾಯ್ದೆ ತಿದ್ದುಪಡಿ ಮೂಲಕ ರೈತರನ್ನುಒಕ್ಕಲೆಬ್ಬಿಸಲಾಗುತ್ತಿದೆ ಎಂದರು.ದೇಶಕ್ಕಾಗಿ ನಾವು ಬಳಗದಸಂಸ್ಥಾಪಕ ಅಧ್ಯಕ್ಷ ನಿಖೇತ್‌ ರಾಜ್‌ಮೌರ್ಯ ಮಾತನಾಡಿ, ಪ್ರತಿ ದಿನವೂ ಬೆಲೆ ಏರಿಕೆಯಿಂದ ಜನ ಸಾಮಾನ್ಯರುಜೀವನ ನಡೆಸುವುದೇ ಕಷ್ಟವಾಗಿದೆ.

Advertisement

ನಮ್ಮ ಹೋರಾಟ ಬಡವರ ಪರಧ್ವನಿಯಾಗಿದೆ. ರೈತರ ಹೋರಾಟಹತ್ತಿಕ್ಕುವ ಕೆಲಸ ಕೇಂದ್ರ ಸರಕಾರಮಾಡುತ್ತಿದ್ದು, ದೆಹಲಿ ಗಡಿಯಲ್ಲಿಹೋರಾಟನಿರತ 600ಕ್ಕೂ ಹೆಚ್ಚು ರೈತರುಹೋರಾಟದಲ್ಲಿ ಮೃತಪಟ್ಟಿದ್ದಾರೆ.

ಮಾಧ್ಯಮ ಸ್ವಾತಂತ್ರವನ್ನುಕಸಿದುಕೊಳ್ಳಲಾಗಿದ್ದು, ಇದರಿಂದವಾಸ್ತವತೆ ದೇಶಕ್ಕೆ ತಿಳಿಯುತ್ತಿಲ್ಲ.ನಮ್ಮದೇಶ ಭಾರತವಾಗಿದ್ದು,ಸರಕಾರದೇಶದೊಳಗೆ ಗಡಿ ನಿರ್ಮಿಸಿದೆ.ಅಂಬೇಡ್ಕರ್‌ ಎಲ್ಲರಿಗೂ ಸಮನಾದಹಕ್ಕು ನೀಡಿದ್ದಾರೆ. ಬೀದಿ- ಬೀದಿಗಳಲ್ಲಿಸ್ವಯಂ ಘೋಷಿತ ದೇಶಪ್ರೇಮಿಗಳು”ಭಾರತ್‌ ಮಾತಾ ಕೀ ಜೈ’ ಎನ್ನುತ್ತಿದ್ದಾರೆ.

ಕೇವಲ ಘೋಷಣೆ ಕೂಗುವುದರಿಂದಮಾತ್ರ ದೇಶಪ್ರೇಮ ಹುಟ್ಟುವುದಿಲ್ಲಎಂದರು. ರೈತ ಮತ್ತು ಕಾರ್ಮಿಕಹೋರಾಟ ಸಮಿತಿಯ ಅಧ್ಯಕ್ಷ ಕಲ್ಕುಳಿಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಟಿ.ಡಿ. ರಾಜೇಗೌಡ,ಕಾರ್ಯಧ್ಯಕ್ಷ ಕೆ.ಎಂ. ಗೋಪಾಲ್‌,ಸಂಚಾಲಕರಾದ ವಿಠuಲ ಹೆಗ್ಡೆ,ನಟರಾಜ್‌, ಕಳಸಪ್ಪ, ವೆಂಕಟೇಶ್‌,ವಿಜಯಕುಮಾರ್‌, ಸಂತೋಷ್‌ ಕಾಳ್ಯಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next