Advertisement

ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ

04:29 PM Sep 06, 2021 | Team Udayavani |

ಚಿಕ್ಕಬಳ್ಳಾಪುರ: ಶಿಕ್ಷಣ ಅಂದರೆ ವಿದ್ಯಾಭ್ಯಾಸ ಮಾತ್ರಅಲ್ಲ, ಹೆಚ್ಚು ಅಂಕ ಪಡೆದವರಷ್ಟೇ ಜೀವನದಲ್ಲಿ ಸಫ‌ಲರಾಗುತ್ತಾರೆ ಎಂದೂ ಅಲ್ಲ, ವಿದ್ಯಾರ್ಥಿಗಳಲ್ಲಿರುವ ಅಭಿರುಚಿ ಮತ್ತು ಸೂಕ್ತ ಗುಣ ಗುರುತಿಸಿ ಮಾರ್ಗದರ್ಶನನೀಡುವುದೇ ನಿಜವಾದ ಶಿಕ್ಷಣ ಎಂದು ಆರೋಗ್ಯಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಶಿಕ್ಷಕರಿಗೆ ಸಲಹೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ,ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆಯು ಭಾರತ ರತ್ನಡಾ.ಎಸ್‌.ರಾಧಾಕೃಷ್ಣನ್‌ ಅವರ ಜನ್ಮ ದಿನೋತ್ಸವದಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಉದ್ಘಾಟಿಸಿ ಮಾತನಾಡಿದರು.

ಜನ್ಮ ನೀಡುವುದು ತಂದೆ ತಾಯಿ, ಜೀವನ ನೀಡುವುದು ಶಿಕ್ಷಕರು. ನಮ್ಮದು ಗುರು ಪರಂಪರೆಯ ದೇಶ,ಶಿಕ್ಷಣ ವ್ಯವಸ್ಥೆ ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣದಿಂದ ಆಗಲ್ಲ, ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು,ಶಿಕ್ಷಕರು ಮಕ್ಕಳನ್ನು ಜ್ಞಾನ ಸಂಪನ್ನರನ್ನಾಗಿ ಮಾಡಲುಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದುವಿವರಿಸಿದರು.ಸಮ ಸಮಾಜದ ಕಲ್ಪನೆ, ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ಶಾಂತಿ ತೋಟದ ಕಲ್ಪನೆಯವಿಚಾರ ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ವ್ಯಕ್ತಿತ್ವವಿಕಸನ ಆಗುವಂತಹ ಶಿಕ್ಷಣ ನೀಡಬೇಕು ಎಂದುವಿವರಿಸಿದರು.

ಜ್ಞಾನದಿಂದ ಮಾತ್ರ ನೆಮ್ಮದಿ: ಕೇವಲ ಹಣದಿಂದನೆಮ್ಮದಿ, ಸಂತೋಷ ಸಿಗುವುದಿಲ್ಲ, ಅದಕ್ಕೆ ಜ್ಞಾನದಅವಶ್ಯಕತೆ ಇದೆ. ಅಂತಹ ಜ್ಞಾನವನ್ನು ನೀಡುವವರುಶಿಕ್ಷಕರು, ವೈದ್ಯ ವೃತ್ತಿಯಂತೆ ಶಿಕ್ಷಕ ವೃತ್ತಿಯೂ ಅತಿಮುಖ್ಯವಾದದ್ದು. ಆದ್ದರಿಂದ ವೃತ್ತಿ ಮತ್ತು ಪ್ರವೃತ್ತಿಎÇÉಾ ಶಿಕ್ಷಣವೇ ಎಂದು ನಂಬಿದ್ದ ಮಾಜಿ ರಾಷ್ಟ್ರಪತಿ,ಭಾರತ ರತ್ನ ಡಾ.ಎಸ್‌.ರಾಧಾಕೃಷ್ಣನ್‌ ಅವರ ಜನ್ಮದಿನದಂದು ಶಿಕ್ಷಕರ ದಿನ ಆಚರಿಸುತ್ತಿರುವುದುಅರ್ಥಪೂರ್ಣವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಿಕ್ಷಕರನ್ನು ನೋಡಿನಾವು ಹೀಗೇ ಆಗಬೇಕು ಎನ್ನುವ ಭಾವನೆ ಮಕ್ಕಳಲ್ಲಿಮೂಡಬೇಕು, ಅಂತಹವರು ಶ್ರೇಷ್ಠ ಶಿಕ್ಷಕರಾಗುತ್ತಾರೆ.ಶಿಕ್ಷಣ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾವಣೆ ಆಗಬೇಕು ಎನ್ನುವ ನಿಟ್ಟಿನಲ್ಲಿ 2020ರ ರಾಷ್ಟ್ರೀಯ ಶಿಕ್ಷಣನೀತಿ ಜಾರಿಯಾಗುತ್ತಿದೆ.

Advertisement

ಎಲ್ಲರಿಗೂ ಸಮಾನ ಅವಕಾಶನೀಡುವ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿನ ಹೊಸ ಕಲಿಕಾ ವಿಧಾನಗಳಿಗೆ ಹತ್ತಿರವಾಗಿರುವಶಿಕ್ಷಣ ನೀತಿಯಾಗಲಿದೆ ಎಂದು ಹೇಳಿದರು.

ಎಲ್ಲಾ ತರಗತಿ ಶುರುವಾಗುವಂತಾಗಲಿ: ಸೆ.6 ರಿಂದಆರನೇ ತರಗತಿಗೂ ಮೇಲ್ಪಟ್ಟ ಶಾಲೆಗಳು ಆರಂಭವಾಗುತ್ತಿವೆ, ತಮ್ಮ ಸ್ವಂತಮಕ್ಕಳನ್ನು ನೋಡಿಕೊಳ್ಳುವಂತೆಶಿಕ್ಷಕರು ಜಾಗೃತಿ ವಹಿಸಬೇಕು, ಎಲ್ಲಾ ಮಕ್ಕಳುಕೋವಿಡ್‌ ಮಾರ್ಗಸೂಚಿ ಪಾಲಿಸುವಂತೆನೋಡಿಕೊಳ್ಳಬೇಕು, ಆನ್‌ಲೈನ್‌ಗಿಂತ ಭೌತಿಕತರಗತಿಗಳೇ ಕಲಿಕೆಗೆ ಹೆಚ್ಚು ಪರಿಣಾಮಕಾರಿ, ಎಲ್ಲಾತರಗತಿಗಳು ಭೌತಿಕವಾಗಿ ನಡೆಯುವಂತಹವಾತಾವರಣ ಬೇಗ ಬರಲಿ ಎಂದು ಹಾರೈಸಿದರು.

ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ರಾಜ್ಯ ಮಾವುಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಆರ್‌.ಲತಾ, ಜಿಪಂಸಿಇಒ ಪಿ.ಶಿವಶಂಕರ್‌, ಎಡೀಸಿ ಎಚ್‌.ಅಮರೇಶ್‌,ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್‌, ತಹಶೀಲ್ದಾರ್‌ಗಣಪತಿಶಾಸ್ತ್ರಿ, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷಡಿ.ಎಸ್‌.ಆನಂದರೆಡ್ಡಿ, ಪಟ್ರೇನಹಳ್ಳಿ ಗ್ರಾಪಂ ಅಧ್ಯಕ್ಷಟಿ.ಎಸ್‌ ಜಯಚಂದ್ರ, ಸರ್ಕಾರಿ ನೌಕರರ ಸಂಘದಅಧ್ಯಕ್ಷ ಜಿ.ಹರೀಶ್‌, ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಜಿÇÉಾಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷನಾರಾಯಣಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದಅಧ್ಯಕ್ಷಕೆಂಪಣ್ಣ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next