Advertisement

ಶಿಡ್ಲಘಟ್ಟದ ಶಿಲ್ಪಾ ತಮಿಳುನಾಡು ಸಿಎಂ ವಿಶೇಷಾಧಿಕಾರಿ

06:34 PM May 29, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್‌ ಅಧಿ ಕಾರಿಪ್ರಭಾಕರ್‌ ಅವರ ಪುತ್ರಿ ಐಎಎಸ್‌ ಅಧಿ ಕಾರಿಶಿಲ್ಪಾ ಇದೀಗ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಅವರ ವಿಶೇಷ ಅಧಿ ಕಾರಿ ಆಗಿ ನೇಮಕಗೊಂಡಿದ್ದಾರೆ.

Advertisement

ಐಎಎಸ್‌ ಅಧಿ ಕಾರಿ ಶಿಲ್ಪಾ ಪ್ರಭಾಕರ್‌ 1981ಆ.31ರಂದು ಜನಿಸಿ, ಪ್ರಾಥಮಿಕ ಶಿಕ್ಷಣವನ್ನುಶಿಡ್ಲಘಟ್ಟ ನಗರದ ಸರಸ್ವತಿ ಕಾನ್ವೆಂಟ್‌, ಪ್ರೌಢಮತ್ತು ಪದವಿಪೂರ್ವ ಶಿಕ್ಷಣವನ್ನು ನ್ಯಾಷನಲ್‌ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿಕಾನೂನು ಪದವಿ ಪಡೆದಿದ್ದರು. ಇದಾದ ಬಳಿಕಯುಪಿಎಸ್‌ಸಿ ಪರೀಕ್ಷೆಯಲ್ಲಿ 46ನೇ ಸ್ಥಾನಪಡೆದು ತಮಿಳುನಾಡಿನಲ್ಲಿ ವಿವಿಧ ಹುದ್ದೆಗಳನ್ನುಅಲಂಕರಿಸಿ, 2018ರಲ್ಲಿ ತಿರುವನ್ವೇಲಿ ಜಿಲ್ಲೆಯಮೊದಲ ಮಹಿಳಾ ಡೀಸಿ ಆಗಿ ಅಧಿ ಕಾರಸ್ವೀಕರಿಸಿದ್ದರು.

ಡೀಸಿ ಆಗಿ ಅಧಿ ಕಾರ ಸ್ವೀಕರಿಸಿದಅವರು, ತಮ್ಮ ವ್ಯಾಪ್ತಿಯ ಅಂಗನವಾಡಿಕೇಂದ್ರಗಳನ್ನು ದೇಶದಲ್ಲಿಯೇ ಮಾದರಿಮಾಡಲು ನಿರ್ಧರಿಸಿ, ತಮ್ಮ ಮೂರು ವರ್ಷದಹೆಣ್ಣು ಮಗುವನ್ನು ಅಂಗನವಾಡಿಗೆ ಸೇರಿಸಿ,ಗಮನ ಸೆಳೆದಿದ್ದರು.

ತಿರುಚನಪಲ್ಲಿಯಲ್ಲಿ2010ರಲ್ಲಿ ಸಹಾಯಕ ಜಿಲ್ಲಾಧಿ ಕಾರಿ ಆಗಿ ಸೇವೆಆರಂಭಿಸಿದ ಶಿಲ್ಪಾ ಪ್ರಭಾಕರ್‌, ತಿರುಪತೂರ್‌ಸಬ್‌ ಕಲೆಕ್ಟರ್ಆಗಿ, ಚೆನ್ನೈ ಕಾರ್ಪೊರೇಷನ್ನಲ್ಲಿ ಜಿಲ್ಲಾಧಿ ಕಾರಿ(ಶಿಕ್ಷಣ)ಆಗಿ, ಇಂಡಸ್ಟ್ರೀಸ್ಗೈಡೆನ್ಸ್ಮತ್ತು ಎಕ್ಸಪೋರ್ಟ್ಪ್ರೊಮೋಷನ್ಬ್ಯೂರೋ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿಸೇವೆ ಸಲ್ಲಿಸಿ ಬಳಿಕ 2018ರಲ್ಲಿ ತಿರುವನ್ವೇಲಿಜಿಲ್ಲಾ ಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಕಾರ್ಯವೈಖರಿ ಮೆಚ್ಚಿ ತಮಿಳುನಾಡುನೂತನ ಸಿಎಂ ಸ್ಟಾಲಿನ್‌ ವಿಶೇಷ ಅಧಿ ಕಾರಿ ಆಗಿನೇಮಕ ಮಾಡಿ ಆದೇಶಿಸಿದ್ದಾರೆ. ಇದಕ್ಕೆ ರೇಷ್ಮೆನಾಡು ಶಿಡ್ಲಘಟ್ಟ ತಾಲೂಕಿನ ಜನರು ಸಂತಸವ್ಯಕ್ತಪಡಿಸಿದ್ದು, ಇವರಿಗೆ ಬೋಧನೆ ಮಾಡಿದಶಿಕ್ಷಕರು, ಸಹಪಾಠಿಗಳು ಅಭಿನಂದಿಸಿದ್ದಾರೆ.

Advertisement

ಎಂ..ತಮೀಮ್ಪಾಷ

Tags :
Advertisement

Udayavani is now on Telegram. Click here to join our channel and stay updated with the latest news.

Next