Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಧಾರಾಕಾರ ಮಳೆ

08:38 PM Jul 19, 2021 | Team Udayavani |

ಚಿಕ್ಕಬಳ್ಳಾಪುರ: ಸತತ ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಗೆಈ ಬಾರಿಯ ಮುಂಗಾರು ಮಳೆ ಒಂದಷ್ಟು ಆಶಾಭಾವನೆಮೂಡಿಸಿದೆ. ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆಕೆರೆ-ಹಳ್ಳಗಳಿಗೆ ನೀರು ಹರಿದು ರೈತರಿಗೆ ಒಂದು ಕಡೆ ಸಂತಸ,ಮತ್ತೂಂದೆಡೆ ಸಂಕಟ ಆಗಿದೆ.

Advertisement

ವಾರದಿಂದಲೂ ಮೋಡಕವಿದ ವಾತಾವರಣ, ತುಂತುರಾಗಿಬೀಳುತ್ತಿದ್ದ ಮಳೆ ಶನಿವಾರ ರಾತ್ರಿ ಧಾರಾಕಾರವಾಗಿ ಸುರಿಯಿತು.ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಕಡೆಮರಗಳು ನೆಲಕ್ಕೆ ಉರುಳಿವೆ. ಮಣ್ಣಿನ ಮನೆ, ಗೋಡೆಗಳುಕುಸಿದು, ಕಾಗದ ಪತ್ರಗಳು, ದವಸ ಧಾನ್ಯ ನೀರು ಪಾಲಾಗಿದೆ.

ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಚಿಕ್ಕಬಳ್ಳಾಪುರ ತಾಲೂಕಿನ ನವಿಲುಗುರ್ಕಿ, ಬೊಮ್ಮೇನಹಳ್ಳಿಗ್ರಾಮಗಳಲ್ಲಿ2 ಮನೆಗಳ ಗೋಡೆಕುಸಿದಿರುವ ಕುರಿತು ಮಾಹಿತಿಬಂದಿದೆ ಎಂದು ತಹಶೀಲ್ದಾರ್‌ ಗಣಪತಿಶಾಸ್ತ್ರಿ ತಿಳಿಸಿದ್ದಾರೆ.

ಜಲಾವೃತ: ಚಿಕ್ಕಬಳ್ಳಾಪುರದ ಮಂಚನಬಲೆಗೆ ಸಂಪರ್ಕಕಲ್ಪಿಸುವ ಸೇತುವೆ ಮತ್ತು ಶಿಡ್ಲಘಟ್ಟದಿಂದ ಇದೂÉಡುಗೆ ತೆರಳುವಸೇತುವೆ ಜಲಾವೃತಗೊಂಡಿದೆ. ವಾಹನ ಸವಾರರು ಪರದಾಡುವಂತಾಗಿದೆ. ಈ ಸಂಬಂಧ ಸಂಸದರಿಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಂಬಿ ಹರಿದ ಚಿತ್ರಾವತಿ: ಜಿಲ್ಲೆಯ ಬಾಗೇಪಲ್ಲಿ ಮೂಲಕಆಂಧ್ರಕ್ಕೆ ಹೋಗುವ ಚಿತ್ರಾವತಿ ನದಿ, ಕೆಲವು ವರ್ಷಗಳಿಂದ ಬತ್ತಿಹೋಗಿತ್ತು. ಆದರೆ, ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆಜೀವಕಳೆ ಬಂದಿದೆ. ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ.ಇದನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ವಾರಗಳಕಾಲ ಇದೇ ರೀತಿ ಹರಿದರೆ ಸಾವಿರಾರು ಅಡಿಗೆ ಕುಸಿದಿರುವಅಂತರ್ಜಲ ಸುಧಾರಿಸಲಿದೆ ಎಂಬ ನಿರೀಕ್ಷೆ ರೈತರದಾಗಿದೆ.

Advertisement

ಸಂಕಷ್ಟ: ತಾಲೂಕಿನ ಮೈಲಪನಹಳ್ಳಿ ಭಾಗದಲ್ಲಿಕಂದವಾರಕೆರೆಹಿನ್ನೀರಿನ ಪ್ರದೇಶದಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದಸೇವಂತಿ, ಗುಲಾಬಿ, ಬೀನ್ಸ್‌ ಜಲಾವೃತವಾಗಿದೆ. ಚಿಕ್ಕಬಳ್ಳಾಪುರನಗರದ ಸುಬ್ಬರಾಯನ ಪೇಟೆಯಲ್ಲಿ ಹಳೆ ಮನೆಗಳುಕುಸಿದಿವೆ. ಹಾಗೆಯೇ, ತಿಮ್ಮೇಗೌಡನ ಕೆರೆ ಪ್ರದೇಶವಾಗಿದ್ದ 8,9ನೇ ವಾರ್ಡ್‌ಗಳಲ್ಲಿನ ತಗ್ಗಿನಲ್ಲಿದ್ದ ಮನೆಯೊಳಗೆ ನೀರು ನುಗ್ಗಿನಿವಾಸಿಗಳು ಪರದಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next