Advertisement

ಮಳೆಗೆ ತುಂಬಿದ ಹಳ್ಳ ಕೊಳ್ಳ

06:48 PM Jul 07, 2021 | Team Udayavani |

ಗೌರಿಬಿದನೂರು: ತಾಲೂಕಿನಬಹುತೇಕಕಡೆಗಳಲ್ಲಿ ಭಾನುವಾರ ಮಧ್ಯರಾತ್ರಿಉತ್ತಮ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.ಮುಂಗಾರು ಆರಂಭವಾದ ಬಳಿಕನಿರೀಕ್ಷಿತ ಮಳೆ ಆಗಿರಲಿಲ್ಲ. ಇದರಿಂದಕೃಷಿ ಚಟುವಟಿಕೆಗಳು ಕೂಡ ಕುಂಠಿತವಾಗಿದ್ದವು.

Advertisement

ಭಾನುವಾರ ರಾತ್ರಿ ಬಿದ್ದಆರಿದ್ರಾ ಮಳೆ ತಾಲೂಕಿನ ಬಹುತೇಕಭಾಗದಲ್ಲಿ ಧಾರಾಕಾರವಾಗಿ ಸುರಿದಿದ್ದು,ಹಳ್ಳ, ಕಟ್ಟೆಗಳು ತುಂಬಿಕೊಂಡಿವೆ. ಕೃಷಿಚಟುವಟಿಕೆಗೂ ಚುರುಕುಗೊಳ್ಳಲುಸಹಕಾರಿ ಆಗಿದೆ.ಕೆಲವೆಡೆಗಳಲ್ಲಿ ಕೃಷಿ ಭೂಮಿಗಳಲ್ಲಿನೀರು ತುಂಬಿದೆ. ಬಿತ್ತನೆ ಕಾರ್ಯಕ್ಕೆಸಾಧ್ಯವಾಗಿಲ್ಲ.

ಬಹುತೇಕ ತಗ್ಗುಪ್ರದೇಶಗಳು ಮಳೆ ನೀರಿನಿಂದಆವೃತವಾಗಿವೆ. ತಾಲೂಕಿನ ತರಿದಾಳುಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿದೆ.20 ವರ್ಷಗಳ ಬಳಿಕ ಕೋಡಿ ಹರಿದಿದೆ.ಇದನ್ನು ನೋಡಲು ಸ್ಥಳೀಯರುಸೋಮವಾರ ಮುಗಿಬಿದ್ದಿದ್ದರು.

ಯುವಕರು ಕೆರೆ ಕೋಡಿಯಲ್ಲಿ ನೀರು ಹರಿಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಳ್ಳುತ್ತಿದ್ದರು.ತೊಂಡೇಬಾವಿ ಹೋಬಳಿಯ ವಿವಿಧಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು,ಕುಮದ್ವತಿ ನದಿಯಲ್ಲಿ ನೀರು ಹರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next