Advertisement

ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಇನ್ನೂ ಎರಡು ವರ್ಷ ಬೇಕು

07:28 PM Jun 23, 2021 | Team Udayavani |

ಚಿಕ್ಕಬಳ್ಳಾಪುರ: ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಎತ್ತಿನಹೊಳೆ ನೀರಾವರಿ ಯೋಜನೆ ಪೂರ್ಣಕ್ಕೆ ಅಡ್ಡಿಆಗಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿಯೋಜನೆ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನಮಾಡುತ್ತಿದ್ದೇವೆ ಎಂದು ಸಣ್ಣ ನೀರಾವರಿ ಸಚಿವಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.ಆದರೆ, ಭೂ ಸ್ವಾಧೀನ ಪ್ರಕ್ರಿಯೆಗೆ ಕೆಲವೊಂದುತಾಂತ್ರಿಕ ಸಮಸ್ಯೆಯಿದೆ. ಅದನ್ನು ಬಗೆಹರಿಸಲುಕಾರ್ಯಪಡೆ ರಚಿಸಿ ಪ್ರಕ್ರಿಯೆ ಚುರುಕುಗೊಳಿಸಲುವಿಶೇಷವಾಗಿ ಗಮನ ಹರಿಸಲಾಗಿದೆ.

ರೈತರಿಗೆ ಸೂಕ್ತಪರಿಹಾರ ನೀಡಿ ಕಾಮಗಾರಿಗೆ ವೇಗ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು. ಬೈರಗೊಂಡ್ಲುಜಲಾಶಯ ನಿರ್ಮಾಣಕ್ಕೆ ಸಾಕಷ್ಟು ಜಮೀನುಅಗತ್ಯವಿದೆ. ಆದರೆ, ಕೊರಟಗೆರೆ ಮತ್ತುದೊಡ್ಡಬಳ್ಳಾಪುರ ರೈತರಿಗೆ ಪರಿಹಾರಧನ ನೀಡುವವಿಚಾರವಾಗಿ ಸಮಸ್ಯೆ ಎದುರಾಗಿದೆ.

ಇಡೀ ನೀರನ್ನುಒಂದೇ ಜಿಲ್ಲೆಯಲ್ಲಿ ನಿಲ್ಲಿಸಬಹುದೇ ಎನ್ನುವಬಗ್ಗೆಯೂ ಆಲೋಚಿಸುತ್ತಿದ್ದೇವೆ. ಈ ಸಂಬಂಧಚುನಾಯಿತ ಪ್ರತಿನಿಗಳೊಂದಿಗೆ ಸಮಾಲೋಚನೆನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದುಸ್ಪಷ್ಟಪಡಿಸಿದರು.ಶಾಸಕ ವಿ.ಮುನಿಯಪ್ಪ ಅವರ ಮನವಿ ಮೇರೆಗೆಜಿಲ್ಲೆಗೆ ಬಂದಿದ್ದೇನೆ. ಜೊತೆಗೆ ಕೆರೆ ಸಹ ವೀಕ್ಷಣೆಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಯೋಜನೆಯಡಿಎಲ್ಲಾ ಕೆರೆಗಳಿಗೆ, ಅದರಲ್ಲೂ ವಿಶೇಷವಾಗಿ ಶಿಡ್ಲಘಟ್ಟತಾಲೂಕಿನ ಕೆರೆಗಳಿಗೆ ಎಚ್‌.ಎನ್‌.ವ್ಯಾಲಿ ನೀರುಹರಿಸುತ್ತೇವೆ ಎಂದು ಭರವಸೆ ನೀಡಿದರು.

ಈ ವೇಳೆರೈತ ಸಂಘ ಹಾಗೂ ಹಸಿರುಸಂಘದ ರಾಜ್ಯ ಪ್ರಧಾನಕಾರ್ಯದರ್ಶಿಭಕ್ತರಹಳ್ಳಿಬೈರೇಗೌಡ, ಎಚ್‌.ಎನ್‌.ವ್ಯಾಲಿನೀರನ್ನು ಅಕ್ರಮವಾಗಿ ಮೋಟರ್‌ ಪಂಪ್‌ ಅಳವಡಿಸಿಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವರ ಗಮನಕ್ಕೆತಂದರು.ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಮರಳುಕುಂಟೆಕೃÐವ ‌¡ ುೂರ್ತಿ, ಕೆಪಿಸಿಸಿ ಸದಸ್ಯ ವಿ.ಸುಬ್ರಮಣಿ, Ãçತ ೆಸಂಘದ ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ್‌,ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರುಮಂಜುನಾಥ್‌, ನಗರ ‌ ಘಟಕದ ಅಧ್ಯಕ್ಷನಾರಾಯಣಸ್ವಾಮಿ ಉಪಸ್ಥಿತರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next