Advertisement
ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಹಾಗೂ ಬಾಗೇಪಲ್ಲಿ ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 29,296 ಮಂದಿ ಪುರುಷರು, 29,604 ಮಹಿಳೆಯರು ಇತರೆ 4 ಸೇರಿ ಒಟ್ಟು 58,909 ಮತದಾರರ ಪೈಕಿ 023,021 ಮಂದಿ ಮಹಿಳೆಯರು, 22,758 ಮಂದಿ ಮಹಿಳೆಯರು ಇತರೆ 1 ಸೇರಿ ಒಟ್ಟು 45,780 ಮಂದಿ ತಮ್ಮ ಹಕ್ಕು ಚಲಾವಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಶೇ.77.71 ಮತದಾನ ದಾಖಲಾಗಿದೆ.
Related Articles
Advertisement
ಶಾಂತಿಯುತ ಮತದಾನ: ಜಿಲ್ಲೆಯ ಬಾಗೇಪಲ್ಲಿ ಹಾಗೂ ಶಿಡ್ಲಘಟ್ಟ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಚುನಾವಣೆಯ ಕೊನೆ ಗಳಿಗೆಯವರೆಗೂ ಕೂಡ ಮತದಾರರನ್ನು ತಮ್ಮತ್ತ ಸೆಳೆಯಲು ವಿವಿಧ ಆಸೆ, ಆಮಿಷ ತೋರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಮತದಾರರು ಅಭ್ಯರ್ಥಿಗಳೇ ಮತಗಟ್ಟೆಗಳಿಗೆ ಕರೆ ತಂದು ಮತದಾನ ಮಾಡಿಸುತ್ತಿದ್ದರು. ವಯೋ ವೃದ್ಧರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಸೇರಿದಂತೆ ವಿಕಲಚೇತನರು, ಮಹಿಳೆಯರು ಮತಗಟ್ಟೆಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ ಮಾಡಿದರು.ಬಾಗೇಪಲ್ಲಿಯಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸೇರಿದಂತೆ ಮತ್ತಿತರರು ಮತದಾನ ಮಾಡಿದರು.
ಶುಕ್ರವಾರ 210 ಅಭ್ಯರ್ಥಿಗಳ ಭವಿಷ್ಯ ಪ್ರಕಟಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ 31 ವಾರ್ಡ್‌ಗಳಿಗೂ ಸೇರಿ ಒಟ್ಟು 115 ಅಭ್ಯರ್ಥಿಗಳು ಕಣದಲ್ಲಿದ್ದರೆ ಬಾಗೇಪಲ್ಲಿ ಪುರಸಭೆಯ ಒಟ್ಟು 23 ವಾರ್ಡ್‌ಗಳಿಗೆ 95 ಅಭ್ಯರ್ಥಿಗಳು ಅಖಾಡದಲ್ಲಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 210 ಮಂದಿ ಅಭ್ಯರ್ಥಿಗಳು ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆಯಾ ತಾಲೂಕು ಕೇಂದ್ರದಲ್ಲಿಯೇ ಮೇ 31 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ನಡೆದು ಮಧ್ಯಾಹ್ನ 12ಕ್ಕೆ ಫಲಿತಾಂಶ ಹೊರ ಬೀಳಲಿದೆ. ಮತ ಎಣಿಕೆ ಕಾರ್ಯಕ್ಕೆ ತಾಲೂಕು ಆಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಕುತೂಹಲ ಕೆರಳಿಸಿದ ಫಲಿತಾಂಶ
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆಗೆ ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು ರಾಜಕೀಯ ಪಕ್ಷಗಳಿಗೆ ಚುನಾವಣೆ ಫಲಿತಾಂಶ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋತಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಲೋಕಲ್ ಕದನದ ಫಲಿತಾಂಶ ಪ್ರತಿಷ್ಠೆಯಾಗಿದೆ. ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ 31, ಬಿಜೆಪಿ 12, ಜೆಡಿಎಸ್ 31, ಬಿಎಸ್‌ಪಿ 6, ಸಮಾಜವಾದಿ ಪಕ್ಷ 1, ಕೆಜೆಪಿ 1, ಎಸ್‌ಡಿಪಿಐ 1, ಪಕ್ಷೇತರರು 32 ಮಂದಿ ಸೇರಿ ಒಟ್ಟು ಕಣದಲ್ಲಿ 115 ಮಂದಿ ಇದ್ದರೆ ಬಾಗೇಪಲ್ಲಿ ಪುರಸಭೆಯಲ್ಲಿ ಕಾಂಗ್ರೆಸ್ 23, ಬಿಜೆಪಿ 14, ಸಿಪಿಎಂ 20, 30 ಪಕ್ಷೇತರರು ಸೇರಿ ಒಟ್ಟು 95 ಮಂದಿ ಅಭ್ಯರ್ಥಿಗಳಿದ್ದಾರೆ.