Advertisement
1,555ಕ್ಕೆ ಏರಿಕೆ:ಜಿಲ್ಲೆಯಲ್ಲಿ 1,554 ಪ್ರಕರಣಗಳು ಏರಿಕೆ ಕಂಡಿದ್ದು 76 ಹೊಸ ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ 25, ಬಾಗೇಪಲ್ಲಿ 8, ಚಿಂತಾಮಣಿ 11, ಗೌರಿಬಿದನೂರು 16, ಗುಡಿಬಂಡೆ 10 ಹಾಗೂ ಶಿಡ್ಲಘಟ್ಟದಲ್ಲಿ 6 ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ನಾಗಲೋಟ ಮುಂದುವರೆದಿದೆ.
ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಕೋವಿಡ್ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರಲ್ಲಿ ಇಬ್ಬರು ಹಾಗೂ ಗೌರಿಬಿದನೂರಲ್ಲಿ ಒಬ್ಬರು ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದು ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್-19 ಸಾವಿನ ಪ್ರಮಾಣ 33ಕ್ಕೆ ಏರಿಕೆ ಕಂಡಿದೆ. ಆ ಪೈಕಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ 14, ಗೌರಿಬಿದನೂರು 9, ಬಾಗೇಪಲ್ಲಿ 3, ಚಿಂತಾಮಣಿ 4, ಶಿಡ್ಲಘಟ್ಟ 2 ಹಾಗೂ ಗುಡಿಬಂಡೆಯಲ್ಲಿ 1 ಸಾವಿನ ಪ್ರಕರಣ ಸಂಭವಿಸಿದೆ. ಒಟ್ಟು 1,555 ಪ್ರಕರಣಗಳ ಮಂಗಳವಾರ 95 ಮಂದಿ ಸೇರಿ ಒಟ್ಟು 910 ಮಂದಿ ಡಿಸ್ಚಾರ್ಜ್ ಆಗಿದ್ದು ಇನ್ನೂ 611 ಸಕ್ರಿಯ ಪ್ರಕರಣಗಳು ಇವೆ.