ಚಿಕ್ಕಬಳ್ಳಾಪುರ: ಮಹಾಮಾರಿ ಕೋವಿಡ್-19 ಸೋಂಕು ಜಿಲ್ಲೆಗೆ ಹರಡುವಲ್ಲಿ ಮಹಾರಾಷ್ಟ್ರದ ಮುಂಬೈ, ಆಂಧ್ರದ ಹಿಂದೂಪುರ ಬಳಿಕ ಈಗ ತೆಲಂಗಾಣ ರಾಜ್ಯ ಚಿಕ್ಕಬಳ್ಳಾಪುರಕ್ಕೆ ಕಂಟಕವಾಗಿದ್ದು, ತೆಲಂಗಾಣದಿಂದ ಬಂದವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿರುವುದು ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ.
ಜಿಲ್ಲೆಯಲ್ಲಿ ಭಾನುವಾರ ಹೊಸ 6 ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 166ಕ್ಕೆ ತಲುಪಿದಂತಾಗಿದೆ. ಹೊಸದಾಗಿ ಪತ್ತೆಯಾಗಿರುವ 6 ಪ್ರಕರಣ ಪೈಕಿ ಚಿಂತಾಮಣಿಯಲ್ಲಿ 24 ವರ್ಷದ ವ್ಯಕ್ತಿ, 4 ಮಹಿಳೆಯರು ಸೇರಿ 5 ಮಂದಿ, ಶಿಡ್ಲಘಟ್ಟದಲ್ಲಿ 1 ಮಹಿಳೆ ಸೇರಿ ಒಟ್ಟು 6 ಮಂದಿ ಸೋಂಕಿತರು ಕಂಡು ಬಂದಿದ್ದು, ಅವರು ಜಿಲ್ಲಾ ಕೋವಿಡ್-19 ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೆಲಂಗಾಣ ಸಂಪರ್ಕ: ಜಿಲ್ಲೆಯಲ್ಲಿ ಇದುವರೆಗೂ ಆಂಧ್ರಪ್ರದೇಶದ ಹಿಂದೂಪುರ ಹಾಗೂ ಮಹಾರಾಷ್ಟ್ರದ ಮುಂಬೈನಿಂದ ಬಂದ ನಾಗರಿಕರಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗಿ ಕಂಡು ಬಂದಿದ್ದು, ಇದೀಗ ಚಿಂತಾಮಣಿಗೆ ಬಂದಿರುವ ಇಬ್ಬರು ಮಹಿಳೆಯರಲ್ಲಿ ಸೋಂಕು ಹರಡಲು ತೆಲಂಗಾಣ ಮೂಲವಾಗಿದೆ. ಹೊಸದಾಗಿ ಪತ್ತೆಯಾಗಿರುವ 6 ಪ್ರಕರಣ ಗಳಲ್ಲಿ ಇಬ್ಬರಿಗೆ ಸೋಂಕು ಹರಡಿರುವ ಮೂಲವೇ ಇನ್ನೂ ಪತ್ತೆ ಆಗಿಲ್ಲ.
ಚಿಂತಾಮಣಿ ಯಲ್ಲಿ ಈ ಹಿಂದೆ ಕಂಡು ಬಂದಿದ್ದ 6 ಸೋಂಕಿ ತರು ಸಂಪೂರ್ಣವಾಗಿ ಚೇತರಿಕೆ ಕಂಡು ಡಿಸ್ಚಾರ್ಜ್ ಆದ ಬೆನ್ನಲ್ಲೇ ಹೊಸದಾಗಿ 5 ಪ್ರಕರಣ ಕಂಡು ಬಂದಿದ್ದು, ನಗರಕ್ಕಿಂತ ಗ್ರಾಮೀಣ ಭಾಗದ ಜನರಲ್ಲಿ ಸೋಂಕು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ ಮೊದಲಿಗೆ 24 ವರ್ಷದ ವ್ಯಕ್ತಿಯಲ್ಲಿ ಕಂಡ ಸೋಂಕು ಈಗ 4ಕ್ಕೆ ಏರಿದೆ. ಮೊದಲ ಸೋಂಕಿತ ವ್ಯಕ್ತಿಯಿಂದ ಇಬ್ಬ ರಿಗೆ ಸೋಂಕು ಹರಡಿದ್ದು, ಈಗ ಶಿಡ್ಲಘಟ್ಟ ಪಟ್ಟಣದಲ್ಲಿ ಮತ್ತೂಂದು ಪ್ರಕರಣ ದಾಖ ಲಾಗಿದೆ.
ಮೂರು ತಿಂಗಳಲ್ಲಿ 166 ಪ್ರಕರಣ: ಕಳೆದ ಮಾ.21 ರಂದು ಗೌರಿಬಿದನೂರು ಪಟ್ಟಣದ 32 ವರ್ಷದ ವ್ಯಕ್ತಿಯಲ್ಲಿ ಕಂಡು ಬಂದಿದ್ದು ಆತ ಸೌದಿಅರೇಬಿಯಾಗೆ ಹೋಗಿ ಬಂದಿದ್ದ. ಇದೀಗ ಜಿಲ್ಲೆಯಲ್ಲಿ ಪತ್ತೆಯಾಗಿ ಜೂ.21ಕ್ಕೆ ಸರಿಯಾಗಿ ಮೂರು ತಿಂಗಳು ಆಗಲಿದ್ದು ಒಟ್ಟು 166 ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮುವರು ಮೃತಪಟ್ಟಿದ್ದರೆ, 147 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ 166 ಕೋವಿಡ್-19 ಪ್ರಕರಣ ವರದಿಯಾಗಿದ್ದು, ಭಾನುವಾರ 6 ಪ್ರಕರಣ ಹೊಸದಾಗಿ ಪತ್ತೆಯಾಗಿವೆ. ಇದುವರೆಗೆ 147 ಮಂದಿ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಕೋವಿಡ್‌ಗೆ ಮೃತಪಟ್ಟಿದ್ದಾರೆ. ಮತ್ತೂಬ್ಬರು ಕೋವಿಡ್ ಅಲ್ಲದ ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 16 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.
-ಡಾ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ