Advertisement
ಜಿಲ್ಲಾ ಕೇಂದ್ರದಲ್ಲಿ ಸಮರ್ಪಕವಾಗಿ ಜನ ಹಾಗೂ ವಾಹನ ಸಂಚಾರದ ದಟ್ಟಣೆಗೆ ಅನುಸಾರವಾಗಿ ಇನ್ನೂ ರಸ್ತೆಗಳು ಅಗಲೀಕರಣ ಆಗಿಲ್ಲ. ಆದರೆ, ಇರುವ ರಸ್ತೆಗಳಲ್ಲಿನ ಫುಟ್‌ಪಾತ್‌ನ್ನು ರಾಜಾರೋಷವಾಗಿ ಒತ್ತುವರಿ ಆಗಿ ಪಾದಚಾರಿಗಳ ಗೋಳೂ ಹೇಳ್ಳೋವರು ಕೇಳ್ಳೋವರೇ ಇಲ್ಲದಂತಾಗಿದೆ.
Related Articles
Advertisement
ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆಯಲ್ಲೂ ಸಂಕಷ್ಟ :
ಜಿಲ್ಲಾ ಕೇಂದ್ರವಾಗಿ 16 ವರ್ಷ ಕಳೆದರೂ ಜಿಲ್ಲಾ ಕೇಂದ್ರದ ಮುಖ್ಯ ರಸ್ತೆಗಳು, ಉಪ ರಸ್ತೆಗಳು ಇನ್ನೂ ಓಬಿರಾಯನ ಕಾಲದಲ್ಲಿಯೆ ಇವೆ. ಬಿಬಿ ರಸ್ತೆ, ಎಂಜಿ ರಸ್ತೆಗಳು ನಿರೀಕ್ಷಿತ ಮಟ್ಟದಲ್ಲಿ ಅಗಲೀಕರಣ ಆಗಿಲ್ಲ. ಇನ್ನೂ ನಗರ ಬೆಳೆದರೂ ಬಜಾರ್ ರಸ್ತೆ ಹಾಗೂ ಗಂಗಮ್ಮ ಗುಡಿ ರಸ್ತೆ ಅಗಲೀಕರಣಕ್ಕೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಕೈ ಹಾಕುವ ಧೈರ್ಯ ತೋರುತ್ತಿಲ್ಲ. ಹೀಗಾಗಿ ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆಗಳಲ್ಲಿ ಪುಟಾಪಾತ್ ಎನ್ನುವದೇ ಮಾಯವಾಗಿದೆ. ಈ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸಂಚರಿಸುವುದು ದೊಡ್ಡ ಸವಾಲಿನ ಕೆಲಸ. ಬೆಳಗ್ಗೆ ಶಾಲಾ, ಕಾಲೇಜುಗಳ ಸಮಯದಲ್ಲಿ ಅಂತೂ ಈ ಎರಡು ರಸ್ತೆಗಳಲ್ಲಿ ವಾಹನ ದಟ್ಟಣೆಗೆ ಜನ ತೀವ್ರ ಹೈರಾಣದರೂ ಕೇಳ್ಳೋರಿಲ್ಲ. ಮತದ ಬುಟ್ಟಿ ಛಿದ್ರವಾಗುತ್ತದೆಂದು ಜನಪ್ರತಿನಿಧಿಗಳು ಈ ಎರಡು ರಸ್ತೆಗಳ ಅಗಲೀಕರಣಕ್ಕೆ ತಮ್ಮ ಧೈರ್ಯ ತೋರುತ್ತಿಲ್ಲ. ಈಗಿನ ಉತ್ಸಾಹಿ ಶಾಸಕರಾದ ಪ್ರದೀಪ್ ಈಶ್ವರ್ ಕೂಡ ಈ ರಸ್ತೆಗಳ ಅಗಲೀಕರಣದ ತಂಟೆಗೆ ಬರುವುದಿಲ್ಲ ಎಂದಿದ್ದಾರೆ.
ಪಾದಚಾರಿಗಳಿಗೆ ಎಲ್ಲಿದೆ ಜಾಗ:
ರಸ್ತೆಗಳಲ್ಲಿ ವಾಹನ ಸಂಚಾರ ಇದ್ದರೆ ರಸ್ತೆ ಬದಿಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಫುಟ್‌ಪಾತ್ ಇರುತ್ತದೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಪಾದಚಾರಿಗಳು ವಾಹನ ಜೊತೆಗೆ ರಸ್ತೆಗಳಲ್ಲಿ ಸಂಚರಿಸುವ ದುಸ್ಥಿತಿ ಇದೆ. ರಸ್ತೆಗಳಲ್ಲಿ ನಡೆಯುವಾಗ ವಾಹನ ಅಪಘಾತಗಳು ಸಂಭವಿಸಿ ಸಾಕಷ್ಟು ಬಾರಿ ಪಾದಚಾರಿಗಳಿಗೆ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇನ್ನೂ ಮಹಿಳೆಯರು, ಮಕ್ಕಳು ಕೂಡ ಫುಟ್‌ಪಾತ್ ಒತ್ತುವರಿ ಪರಿಣಾಮ ರಸ್ತೆಗಳಲ್ಲಿ ತಮ್ಮ ಪ್ರಾಣ ಅಂಗೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದರೂ ಅಕ್ರಮವಾಗಿ ಒತ್ತುವರಿ ಆಗಿರುವ ಫುಟ್‌ಪಾತ್ ತೆರವಿಗೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಉಸ್ತುವಾರಿ ಸಚಿವರ ಆದೇಶಕ್ಕೂ ಕಿಮ್ಮತ್ತಿಲ್ಲ :
ವಿಪರ್ಯಾಸದ ಸಂಗತಿಯೆಂದರೆ ಹಲವು ತಿಂಗಳ ಹಿಂದೆಯೆ ಜಿಲ್ಲಾ ಕೇಂದ್ರದಲ್ಲಿ ಫುಟ್‌ಪಾತ್ ಒತ್ತುವರಿ ಆಗಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದಾಗ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಒತ್ತುವರಿ ಆಗಿರುವ ಫುಟ್‌ಪಾತ್ ತೆರವುಗೊಳಿಸುತ್ತಾರೆಂದಿದ್ದರು. ಆದರೆ ಸಚಿವರು ಕೂಡ ಸೂಚನೆ ಕೊಟ್ಟು ತಿಂಗಳುಗಳೇ ಕಳೆದರೂ ಜಿಲ್ಲಾ ಕೇಂದ್ರದಲ್ಲಿ ರಾಜಾರೋಷವಾಗಿ ರಸ್ತೆ ಬದಿ ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಫುಟ್‌ಪಾತ್ ಒತ್ತುವರಿ ತೆರವು ಮಾತ್ರ ಆಗು¤ಲ್ಲ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಫುಟ್‌ಪಾತ್ ಒತ್ತುವರಿ ವ್ಯಾಪಕವಾಗಿದೆ. ಆದರೂ ನಗರಸಭೆ ಆಗಲಿ ಅಥವಾ ಜಿಲ್ಲಾಡಳಿತವಾಗಲಿ ಈ ಬಗ್ಗೆ ಗಮನ ಕೊಡುತ್ತಿಲ್ಲ. ಪಾದಚಾರಿಗಳು ಓಡಾಡುವ ಜಾಗವನ್ನು ಅತಿಕ್ರಮಿಸಿಕೊಂಡಿದ್ದ ರೂ ಹೇಳ್ಳೋವರು ಕೇಳ್ಳೋವರೇ ಇಲ್ಲ. -ಶ್ರೀನಿವಾಸ್, ಸಾರ್ವಜನಿಕ
-ಕಾಗತಿ ನಾಗರಾಜಪ್ಪ