Advertisement
ಬಾಗೇಪಲ್ಲಿ ರಸ್ತೆ ಅಗಲೀಕರಣಕ್ಕೆ 2009ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಿಸಲು ನ್ಯಾಯಾಲಯ ಆದೇಶಿಸಿದ್ದರೂ, ಉಪ ವಿಭಾಗಾಧಿಕಾರಿಗಳ ಕಚೇರಿ ವಿತರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಸ್ಥಳೀಯ ನ್ಯಾಯಾಲಯದ ಆದೇಶದಂತೆ ದೂರುದಾರರು ಕಚೇರಿಗೆ ಜಪ್ತಿ ಆದೇಶದೊಂದಿಗೆ ಬೆಳಗ್ಗೆ ಆಗಮಿಸಿ ಅಧಿಕಾರಿ, ಸಿಬಂದಿ ಕೂರುವ ಎಲ್ಲ ಕುರ್ಚಿ, ಟೇಬಲ್, ಕಂಪ್ಯೂಟರ್‌ಗಳನ್ನು ತೆಗೆದುಕೊಂಡು ಹೊರಬಂದರು.
2009ರಲ್ಲಿ ಅಡಿಗೆ ಕೇವಲ 240 ರೂ. ಪರಿಹಾರ ನಿಗದಿಗೊಳಿಸಿದ್ದನ್ನು ಜಿಲ್ಲಾ ನ್ಯಾಯಾಲಯದಲ್ಲಿ 7 ಮಂದಿ ಪ್ರಶ್ನಿಸಿದ್ದರು. ಪ್ರಕರಣ ಬಾಗೇಪಲ್ಲಿ ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಒಂದಡಿಗೆ 895 ರೂ. ನಿಗದಿಪಡಿಸಲಾಗಿತ್ತು. ಪರಿಹಾರ ವಿತರಿಸುವಂತೆ ಭೂಸ್ವಾಧೀನ ಅಧಿಕಾರಿಯಾಗಿದ್ದ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಗಳಿಗೆ ಕೋರ್ಟ್ ಆದೇಶಿಸಿತ್ತು. ಆದರೆ, ಪರಿಹಾರವೂ ನೀಡಿರಲಿಲ್ಲ, ವಿಚಾರಣೆಗೂ ಹಾಜರಾಗಿರಲಿಲ್ಲ. ಆದ್ದರಿಂದ ನ್ಯಾಯಾಲಯ ಉಪ ವಿಭಾಗಾಧಿಕಾರಿಗಳ ಕಚೇರಿಯನ್ನೇ ಜಪ್ತಿ ಮಾಡಲು ಆದೇಶಿಸಿದ್ದರ ಮೇರೆಗೆ ಸಂತ್ರಸ್ತರು ಪೀಠೊಪಕರಣ ಜಪ್ತಿ ಮಾಡಿಕೊಂಡದರು.