Advertisement
ತಾಲೂಕಿನ ಐತಿಹಾಸಿಕ ನಂದಿಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸಿಲ್‌ಕ್ ಪ್ಯಾಕ್ಟರಿ ಇದ್ದು ಅಲ್ಲಿ ಕಾಡು ಹಂಡಿ ಹಿಡಿಯುವ ಸಲುವಾಗಿ ಯಾರೋ ತಂತಿಬೇಲಿಯ ಉರುಳನ್ನು ಅಳವಡಿಸಿದ್ದಾರೆ. ಅಕಸ್ಮಿಕವಾಗಿ ಈ ಉರುಳಿನಲ್ಲಿ ಚಿರತೆ ಬಂದಿದ್ದು ಆಗ ಸಿಲುಕಿಕೊಂಡು ಸ್ಥಳದಲ್ಲಿ ಒದ್ದಾಡಿ ಒದ್ದಾಡಿ ತನ್ನ ಪ್ರಾಣ ಕಳೆದುಕೊಂಡಿದೆ.
ಚಿರತೆಯೊಂದು ಇದೇ ಮೊದಲ ಬಾರಿಗೆ ಈ ರೀತಿ ಮೃತ ಪಟ್ಟಿರುವುದು ಜಿಲ್ಲೆಯ ಇತಿಹಾಸದಲ್ಲಿ ಮೊದಲು ಆಗಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಚಿರತೆಗಳ ಹಾವಳಿ ಇದ್ದರೂ ಅವುಗಳ ದಾಳಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ. ಆದರೆ ಚಿರತೆಯೊಂದು ತಂತಿ ಬೇಲಿಯ ಉರುಳಿನಲ್ಲಿ ಸಿಲುಕಿ ಮೃತ ಪಟ್ಟಿರುವುದು ಇದೇ ಮೊದಲ ಎಂದು ಚಿಕ್ಕಬಳ್ಳಾಪುರದ ವಲಯ ಅರಣ್ಯಾಧಿಕಾರಿ ವಿಕ್ರಮ್ ಉದಯವಾಣಿ ಗೆ ತಿಳಿಸಿದರು. ಮೃತಪಟ್ಟಿರುವ ಚಿರತೆಗೆ ಸುಮಾರು 4 ರಿಂದ 5 ವರ್ಷಗಳಾಗಿದೆಯೆಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.