ಚಿಕ್ಕಬಳ್ಳಾಪುರ: ರ್‍ಯಾಂಕ್ ಪಡೆಯುವ ಮೂಲಕ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆಗೆ ಸಂಭ್ರಮ ಮೂಡಿಸಿದ್ದು, ಈ ಸಂಭ್ರಮದಲ್ಲಿ ಸರ್ಕಾರಿ ವ್ಯವಸ್ಥೆಯ ಎಲ್ಲರೂ ಪಾಲುದಾರರಾಗುವ ಮೂಲಕ ಸಂಭ್ರಮದ ಮೌಲ್ಯವನ್ನು ಹೆಚ್ಚಿಸಬೇಕು ಎಂದು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟ್ರಾರ್ ಡಾಮಿನಿಕ್ ಹೇಳಿದರು.
ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರ್‍ಯಾಂಕ್ ವಿಜೇತ 8 ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಂಶೋಧನೆಯ ಸವಾಲುಗಳು ಕುರಿತ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು, ಇದು ನಮ್ಮ ಕಾಲೇಜು ಎಂದು ಭಾರತೀಯ ಪ್ರಜೆಗಳಾದ ನಾವು ಒಪ್ಪಿಕೊಂಡಿದಿದ್ದರೆ ಸರ್ಕಾರಿ ವ್ಯವಸ್ಥೆಯನ್ನು ಕಡೆಗಣಿಸಿ ನೋಡುವ ಪೂರ್ವಾಗ್ರಹ ಪೀಡಿತ ನೆಲೆ ಇರೋದಿಲ್ಲ. ಅದನ್ನು ತೊಡೆದುಹಾಕಬೇಕಾಗಿದೆ ಎಂದರು.
8 ರ್‍ಯಾಂಕ್: ವಾಣಿಜ್ಯಶಾಸ್ತ ವಿಭಾಗದ ಮುಖ್ಯಸ್ಥರಾದ ಡಾ.ಹರಿಕುಮಾರ್ ಮಾತನಾಡಿ, ಜಿಲ್ಲಾ ಕೇಂದ್ರದ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಅವಕಾಶ ನೀಡಿದ್ದರಿಂದಾಗಿ ಈ ಕಾಲೇಜಿನ ಶಕ್ತಿ ಸಾಮರ್ಥ್ಯಗಳು ಬೆಳಕಿಗೆ ಬರುವಂತಾಯಿತು.
ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಪಡೆದ ಆಸ್ಮಾ ರ್‍ಯಾಂಕ್ ಪರಂಪರೆಗೆ ನಾಂದಿ ಹಾಡಿದ್ದು, ಇದೀಗ ರಸಾಯನ ಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 8 ರ್‍ಯಾಂಕ್ ಬಂದಿರುವುದು ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೀರ್ತಿ ಪತಾಕೆಯನ್ನು ಬೆಂಗಳೂರು ಉತ್ತರ ವಿವಿ ವ್ಯಾಪ್ತಿಯಲ್ಲಿ ಎತ್ತಿ ನಿಲ್ಲಿಸಿದೆ ಎಂದರು.
Related Articles
ರಾಜ್ಯಶಾಸ್ತ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಂ.ನಾಗರಾಜ್ ಮಾತನಾಡಿ, ಇಂದಿನ ಮೌಲ್ಯ ಮಾಪನ ವ್ಯವಸ್ಥೆಯಲ್ಲಿ ಉಪನ್ಯಾಸಕರು ಅಸಡ್ಡೆ ಆತುರಗಳನ್ನು ಅಳವಡಿಸಿಕೊಳ್ಳು ತ್ತಿರುವು ದರಿಂದ ಸಾಧಾರಣ ಅಂಕಗಳಿಗೆ ವಿದ್ಯಾರ್ಥಿಗಳು ತೃಪ್ತಿ ಪಡುವಂತಾಗಿದೆ ಎಂದರು.
ಪ್ರಾಂಶುಪಾಲ ಡಾ.ಮುನಿರಾಜು ಮಾತನಾಡಿ, ಕಾಲೇಜಿನಲ್ಲಿ ಓದಿನ ವಾತಾವರಣ ನಿರ್ಮಿಸಲು ಎಲ್ಲ ಪ್ರಾಧ್ಯಾಪಕರು ಅತಿಥಿ ಉಪನ್ಯಾಸಕರು ಕೈ ಜೋಡಿಸುತ್ತಿದ್ದು ಉತ್ತಮ ಶೈಕ್ಷಣಿಕ ಪರಿಸರ ನಿರ್ಮಾಣವಾಗಿದೆ ಎಂದರು.
ಸಮಾರಂಭದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಆಸ್ಮಾ ( ಪ್ರಥಮ ರ್‍ಯಾಂಕ್ ), ಎಂಎಸ್ಸಿ ರಸಾಯನಶಾಸ್ತ ವಿಭಾಗದ ರಘು (ಪ್ರಥಮ
ರ್‍ಯಾಂಕ್), ಮಧು ಕೆ.(2ನೇ ರ್‍ಯಾಂಕ್) ಕೀರ್ತನ ಐ.ಎನ್. (4ನೇ ರ್‍ಯಾಂಕ್), ವೆಂಕಟೇಶ್ 5ನೇ ರ್‍ಯಾಂಕ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಕೃಷ್ಣಮೂರ್ತಿ ವಿ. ದ್ವಿತೀಯ, ಮುನೇಂದ್ರ ಕೆ.ವಿ. ತೃತೀಯ, ಶಿಲ್ಪಾ ಎಸ್. ಐದನೇ ರ್‍ಯಾಂಕ್ ಪಡೆದಿದ್ದುಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿಪ್ರಾಧ್ಯಾಪಕರಾದ ಡಾ. ನಾಗರಾಜ…, ಡಾ.ಸುನೀತಾ, ಡಾ.ಶ್ರೀನಿವಾಸ್, ಡಾ.ರಂಗಪ್ಪ, ಡಾ.ಷಫಿ ಅಹಮದ್, ಡಾ.ಜಗದೀಶ್ ಮತ್ತಿತರರಿದ್ದರು.