Advertisement

ಚಿಕ್ಕಬಳ್ಳಾಪುರ: ದಾಖಲೆ ಪ್ರಮಾಣದ ರಾಗಿ ಖರೀದಿ

03:29 PM Apr 05, 2021 | Team Udayavani |

ಚಿಕ್ಕಬಳ್ಳಾಪುರ: ರೇಷ್ಮೆ, ಹೈನುಗಾರಿಕೆ, ತರಕಾರಿ, ದ್ರಾಕ್ಷಿಹಾಗೂ ನಂದಿಗಿರಿಧಾಮ ಅದರ ಜೊತೆಗೆ ಬರಪೀಡಿತ ಜಿಲ್ಲೆ ಎಂದು ಅಪಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ಸ್ವಲ್ಪ ಪ್ರಮಾಣದಲ್ಲಿ ರಾಗಿ ರೈತರ ಕೈಹಿಡಿದಿದೆ.

Advertisement

ಮಳೆ ನೀರು ಆಶ್ರಯಿಸಿಕೊಂಡು ರಾಗಿ ಬೆಳೆಯುವರೈತರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಅದರ ಜೊತೆಗೆ ಸರ್ಕಾರ ರಾಗಿಯನ್ನು ಬೆಂಬಲ ಬೆಲೆ ನೀಡಿ,ರಾಗಿ ಖರೀದಿ ಮಾಡಿದ್ದರಿಂದ ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರೈತರು ಮೂರುಪಟ್ಟು ಹೆಚ್ಚು ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡುವ ದಾಖಲೆ ನಿರ್ಮಿಸಿದ್ದಾರೆ. ರೈತರ ಕೈಹಿಡಿಯುವ ಸಲುವಾಗಿ ಸರ್ಕಾರ ರಾಗಿಗೆ ಬೆಂಬಲಬೆಲೆ ನೀಡಿದರಿಂದ ರೈತರಿಗೆ ಅನುಕೂಲವಾಗಿದ್ದು,ಜಿಲ್ಲೆಯಲ್ಲಿ ಅತಿ ಹೆಚ್ಚು ರಾಗಿಯನ್ನು ಖರೀದಿಸಲಾಗಿದೆ.

ಅವಧಿ ವಿಸ್ತರಣೆ: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ಜಿಲ್ಲಾದ್ಯಂತ 7834 ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಮಾರ್ಚ್‌ 31ರೊಳಗೆ 7332 ರೈತರು 139894.38 ಕ್ವಿಂಟಾಲ್‌ ರಾಗಿ ಪೂರೈಕೆ ಮಾಡಿದ್ದಾರೆ. ಇನ್ನೂಳಿದ 502 ರೈತರು ರಾಗಿ ಸರಬರಾಜು ಮಾಡಿಲ್ಲ. ಸರ್ಕಾರ ಮೊದಲು ರಾಗಿಖರೀದಿ ಮಾಡಲು ಮಾ.31 ಕೊನೆಯ ದಿನವೆಂದುಘೋಷಣೆ ಮಾಡಿತ್ತು. ನಂತರ ಅವಧಿಯನ್ನುವಿಸ್ತರಿಸಿದ್ದು, ರೈತರಿಗೆ ವರದಾನವಾಗಿದೆ.

ಕ್ವಿಂಟಾಲ್‌ ರಾಗಿ 3295 ಬೆಲೆ ನಿಗದಿ: ಕೋವಿಡ್ ಸೋಂಕಿನ ಪ್ರಭಾವದಿಂದ ಹೂಡಿದ್ದ ಬಂಡವಾಳಕೈಗಟುಕದೆ ರೈತರು ಸಂಕಷ್ಟಕ್ಕೆ ಸಿಲುಕಿ ಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ, ಈ ಬಾರಿ ರಾಗಿ ಇಳುವರಿ ಅಧಿಕವಾಗಿ ಬಂದಿದ್ದರಿಂದ ಜೊತೆಗೆ ಸರ್ಕಾರ ಕ್ವಿಂಟಾಲ್‌ ರಾಗಿ 3295 ದರವನ್ನು ನಿಗದಿಮಾಡಿದ್ದರಿಂದ ಸಹಜವಾಗಿ ರೈತರು ತಮ್ಮ ಬಳಿಯಿದ್ದರಾಗಿಯನ್ನು ಮಾರಾಟ ಮಾಡಿದ್ದಾರೆ. ಇದರಿಂದಕೋವಿಡ್‌ ಸಂಕಷ್ಟದಲ್ಲಿ ಸಂದರ್ಭದಲ್ಲಿ ರೈತರಿಗೆ ಸ್ವಲ್ಪಪ್ರಮಾಣದಲ್ಲಿ ಅನುಕೂಲವಾಗಿದೆ ಎಂದರೆ ತಪ್ಪಾಗಲಾರದು.

ಜಿಲ್ಲೆಯಲ್ಲಿ 7834 ರೈತರು ಹೆಸರುಗಳನ್ನುನೋಂದಾಯಿಸಿಕೊಂಡು 7332 ರೈತರು139894.38 ಕ್ವಿಂಟಾಲ್‌ ರಾಗಿ ಪೂರೈಕೆ ಮಾಡಿದ್ದಾರೆ. 460951982.10 ರೂ.ಗಳು ಪಾವತಿಸಬೇಕಾಗಿದೆ.ಅದರಲ್ಲಿ ಫೆ.23 ರೊಳಗೆ 11 ಕೋಟಿ ರೂಗಳುಪಾವತಿಯಾಗಿದೆ. ಹೆಸರು ನೋಂದಾಯಿಸಿಕೊಂಡರೈತರ ಪೈಕಿ ಇನ್ನೂ 502 ರೈತರು ರಾಗಿ ಸರಬರಾಜು ಮಾಡಿಲ್ಲ.

Advertisement

ಖರೀದಿ ಅವಧಿ ವಿಸ್ತರಣೆ: ಸರ್ಕಾರದಆದೇಶದನ್ವಯ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ/ರಾಗಿ ಖರೀದಿ ಕೇಂದ್ರಗಳನ್ನು ತೆರೆದು ನಿಯಮಾನುಸಾರ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿರುವರೈತರಿಂದ ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಸರ್ಕಾರದ ಪರಿಷ್ಕೃತ ಆದೇಶದಂತೆ ಸದರಿಯೋಜನೆಯಡಿ ನೋಂದಣಿ ಅವಧಿಯನ್ನುಏ.5ರವರೆಗೆ ವಿಸ್ತರಿಸಲಾಗಿದೆ ಮತ್ತು ರಾಗಿ ಖರೀದಿ ಅವಧಿಯನ್ನು ಏ.30ರವರೆಗೆ ವಿಸ್ತರಿಸಲಾಗಿರುತ್ತದೆ.ರಾಗಿ ಮಾರಾಟ ಮಾಡಲು ಈವರೆಗೆ ನೋಂದಣಿ ಮಾಡಿಕೊಳ್ಳದ ರೈತರು ಏ.5ರೊಳಗಾಗಿ ನೋಂದಣಿ ಮಾಡಿಕೊಂಡು ರಾಗಿಯನ್ನು ಮಾರಾಟ ಮಾಡಬಹುದಾಗಿದೆ. ಅಲ್ಲದೆ, ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರು ನೋಂದಾಯಿಸಿರುವ ರಾಗಿ ಪ್ರಮಾಣಕ್ಕನುಗುಣವಾಗಿ ಏ.30ರೊಳಗಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.

ಅರ್ಹ ರೈತರು ಯೋಜನೆಯ ಸದುಪಯೋಗವನ್ನುಪಡೆದುಕೊಳ್ಳಬಹುದು ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಸವಿತಾ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡಿದ್ದರಿಂದ ರೈತರಿಂದ ಉತ್ತಮಸ್ಪಂದನೆ ಸಿಕ್ಕಿದೆ. ಕಳೆದಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿದಾಖಲೆ ಪ್ರಮಾಣದಲ್ಲಿ ರಾಗಿ ಖರೀದಿಸಲಾಗಿದೆ. ಜೊತೆಗೆ ರೈತರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.ಬೆಂಬಲ ಬೆಲೆ ಯೋಜನೆಯಿಂದ ರೈತರಿಗೆಅನುಕೂಲವಾಗಿದೆ. ● ಪಿ.ಸವಿತಾ, ಉಪನಿರ್ದೇಶಕಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಚಿಕ್ಕಬಳ್ಳಾಪುರ

ರಾಗಿಯನ್ನು ಬೆಂಬಲ ಬೆಲೆ ನೀಡಿಖರೀದಿ ಮಾಡಿರುವುದುಒಳ್ಳೆಯ ಬೆಳವಣಿಗೆ. ರೈತರು ಬೆಳೆದಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು.ರಾಗಿ ಮಾದರಿಯಲ್ಲಿ ಇನ್ನಿತರೆಬೆಳೆಗಳಿಗೂ ಬೆಂಬಲ ಬೆಲೆಯನ್ನುಸರ್ಕಾರ ನಿಗದಿಪಡಿಸಬೇಕು.ಇದರಿಂದ ರೈತರಿಗೆಅನುಕೂಲವಾಗುತ್ತದೆ. ನೋಂದಣಿಮಾಡಿಕೊಂಡಿರುವ ರೈತರ ಹೆಸರುಗ್ರಾಪಂನಲ್ಲಿ ದಾಖಲಾಗಬೇಕು. ●ಭಕ್ತರಹಳ್ಳಿ ಬೈರೇಗೌಡ,ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತಸಂಘ ಹಾಗೂ ಹಸಿರುಸೇನೆ (ಕೋಡಿಹಳ್ಳಿ ಚಂದ್ರಶೇಖರ್‌ ಬಣ)

Advertisement

Udayavani is now on Telegram. Click here to join our channel and stay updated with the latest news.

Next