Advertisement

Chikkaballapur: ಗಂಡನಿಗಾಗಿ ಅಹೋರಾತ್ರಿ ಧರಣಿ ನಡೆಸಿದ ಪತ್ನಿ

10:02 AM Sep 20, 2023 | Team Udayavani |

ಚಿಕ್ಕಬಳ್ಳಾಪುರ: ವಿವಾಹಿತ ಮಹಿಳೆಯೊಬ್ಬರು ತನ್ನ ಗಂಡನಿಗಾಗಿ ಅತ್ತೆ ಮನೆ ಎದುರು ಸತತ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿರುವ ಘಟನೆ ಜಿಲ್ಲಾ ಕೇಂದ್ರದ ಮುನಿಸಿಪಾಲ್‌ ಬಡಾವಣೆಯಲ್ಲಿ ನಡೆದಿದ್ದು ಪ್ರಕರಣ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಗಂಡನಿಗಾಗಿ ಧರಣಿ ನಡೆಸುತ್ತಿರುವ ಮಹಿಳೆಯನ್ನು ಜಬೀನಾ ತಾಜ್‌ ಕೋಂ ಮುಕ್ತಿಯಾರ್‌ ಅಹಮದ್‌ ಎಂದು ಗುರುತಿಸಲಾಗಿದೆ. 9 ವರ್ಷದ ಹಿಂದೆ ಜಬೀಜಾನ್‌ ತಾಜ್‌ ಹಾಗೂ ಮುಕ್ತಿಯಾರ್‌ ಅಹಮ್ಮದ್‌ ವಿವಾಹ ಆಗಿದ್ದರು.

ಮಕ್ಕಳಾಗಲಿಲ್ಲ ಅಂತ ಅತ್ತೆ ಜಗಳ: ಮದುವೆಯಾಗಿ 9 ವರ್ಷ ಆದರೂ ಮಗನಿಗೆ ಮಕ್ಕಳು ಆಗಲಿಲ್ಲ ಅಂತ. ಇದಕ್ಕೆ ಸೊಸೆಯೆ ಕಾರಣ ಎಂದು ಹೇಳಿ ಮುಕ್ತಿಯಾರ್‌ ಅಹಮ್ಮದ್‌ ರವರ ತಾಯಿ ಸೊಸೆ ಜಾಬೀನಾ ತಾಜ್‌ರೊಂದಿಗೆ ಜಗಳ ತೆಗೆದು ಮನೆಯಿಂದ ಹೊರ ಹಾಕಿದ್ದಳಂತೆ.

ಇದರಿಂದ ಆಕ್ರೋಶಗೊಂಡ ಜಬೀನಾ ತಾಜ್‌ ನನಗೆ ನನ್ನ ಗಂಡ ಬೇಕೆಂದು ಹೇಳಿ ಅತ್ತೆ ಮನೆ ಎದುರು ಮೂರು ದಿನದಿಂದ ಒಂಟಿಯಾಗಿ ಲಗೇಜ್‌ ಸಮೇತ ಮನೆಯ ಮುಂದೆಯೆ ಧರಣಿ ನಡೆಸುತ್ತಿದ್ದಾಳೆ. ಹಲವು ಬಾರಿ ಮಕ್ಕಳು ಆಗಲಿಲ್ಲ ಎಂಬ ವಿಚಾರಕ್ಕೆ ಮನೆಯಲ್ಲಿ ಯಾವಾಗಲೂ ಜಗಳ ನಡೆಯುತ್ತಿಂತೆ, ಹಲವು ಬಾರಿ ವಿಷಯ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರೂ ಸಮಸ್ಯೆ ಬಗೆಹರಿರಲಿಲ್ಲ.

ಹಲವು ಬಾರಿ ಸೊತ್ತೆ, ಅತ್ತೆ ನಡುವೆ ಜಗಳ ನಡೆದಿದೆ. ಕೊನೆಗೂ ಮುಕ್ತಿಯಾರ್‌ ಅಹಮದ್‌ ತನ್ನ ಹೆಂಡತಿ ಜಬೀನಾ ತಾಜ್‌ಳನ್ನು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಗ್ರಾಮದಲ್ಲಿ ಮನೆಯೊಂದು ಮಾಡಿ ಅಲ್ಲಿ ಬಿಟ್ಟಿದ್ದನಂತೆ. ಆದರೆ ಗಂಡ ಮೊದ ಮೊದಲು ಚೆನ್ನಾಗಿ ನೋಡಿಕೊಂಡು ಬಳಿಕ ಮನೆ ಕಡೆ ಬರುವುದನ್ನು ನಿಲ್ಲಿಸಿದ್ದನಂತೆ. ಹೀಗಾಗಿ ಜಬೀನಾ ತಾಜ್‌ ತನಗೆ ಗಂಡ ಬೇಕೆಂದು ಹೇಳಿ ಗಂಡನ ಮನೆ ಇರುವ ಮುನಿಸಿಪಾಲ್‌ ಬಡಾವಣೆಗೆ ಆಗಮಿಸಿ ಧರಣಿ ನಡೆಸುತ್ತಿದ್ದಾಳೆ.

Advertisement

ರಾತ್ರೋರಾತ್ರಿ ಮನೆ ಖಾಲಿ
ಮಾಡಿದ ಅತ್ತೆ ಮನೆಯವರು ಅತ್ತ ಸೊಸೆ ಮನೆ ಮುಂದೆ ಆಹೋರಾತ್ರಿ ಧರಣಿ ನಡೆಸುತ್ತಿದ್ದಂತ ಇತ್ತ ಅತ್ತೆ ಹಾಗೂ ಮಕ್ಕಳು ರಾತ್ರೋರಾತ್ರಿ ಮನೆಗೆ ಬೀಗ ಹಾಕಿಕೊಂಡು ಮನೆ ಖಾಲಿ ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಮುಕ್ತಿಯಾರ್‌ ಅಹಮ್ಮದ್‌ ಈಗಾಗಲೇ ಜಬೀನಾ ತಾಜ್‌ ವಿರುದ್ಧ ಕೋರ್ಟ್‌ ಮೆಟ್ಟಿಲೇರಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಇದರ ನಡುವೆಯು ವಿವಾಹಿತ ಮಹಿಳೆಯೊಬ್ಬರು ಆಹೋರಾತ್ರಿ ಗಂಡನಿಗಾಗಿ ಧರಣಿ ನಡೆಸುತ್ತಿದ್ದರೂ, ಮಹಿಳೆಗೆ ಆಗಿರುವ ಆನ್ಯಾಯದ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೆರವಿಗೆ ಧಾವಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next