ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ.ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಿ ರಾಷ್ಟ್ರೀಯಹೆದ್ದಾರಿಯಾಗಿ ಪರಿವರ್ತಿಸಲು ಪ್ರಯತ್ನನಡೆಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಹಾಗೂರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾಕರಂದ್ಲಾಜೆ ಹೇಳಿದರು.
ಕೊಟ್ಟಿಗೆಹಾರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಚಾರ್ಮಾಡಿಘಾಟಿಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಮಳೆಗೆ ಮಣ್ಣುಕುಸಿಯುವುದು ಹಾಗೂ ಗುಡ್ಡ ಕುಸಿಯುವುದರಿಂದಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಚಾರ್ಮಾಡಿಚತುಷ್ಪಥ ರÓಯನಾ ೆ¤ °ಗಿ ಮಾಡಲು ಅಪೇಕ್ಷೆಯಿದೆ.
ಇದಕ್ಕೆ ಅರಣ್ಯ ಇಲಾಖೆ ಆಕ್ಷೇಪಣೆಯೂ ಸದ್ಯದಲ್ಲೇಬರಬಹುದು. ಅರಣ್ಯ ಇಲಾಖೆಯ ಜೊತೆ ಮಾತುಕತೆನಡೆಸಿ ಸಮಸ್ಯೆ ನಿವಾರಿಸಿ ಚಾರ್ಮಾಡಿ ರಸ್ತೆ ರಾಷ್ಟ್ರೀಯಹೆದ್ದಾರಿಯನ್ನಾಗಿ ಮಾರ್ಪಡಿಸಿ ಚತುಷ್ಪಥ ರಸ್ತೆ ಮಾಡಲುಪ್ರಯತ್ನ ನಡೆದಿದೆ. ಮೂಲ ಸೌಲಭ್ಯಕ್ಕೆ ಯಾವುದೇಅರಣ್ಯದ ಕಾಯ್ದೆ ಅಡಚಣೆಯಾಗದಂತೆಸಡಿಲಗೊಳಿಸಲು ಕೇಂದ್ರ ಪರಿಸರ ಮಂತ್ರಿಗಳಜೊತೆಈಬಗ್ಗೆ ಚರ್ಚೆ ನಡೆಸಿದ್ದೇವೆ. ಈಗಾಗಲೇಕೊಟ್ಟಿಗೆಹಾರದಿಂದ ಮೂಡಿಗೆರೆ- ಬೇಲೂರುರಸ್ತೆ ಕಾಮಗಾರಿ ñರಿತಗ Ì ತಿಯಲ್ಲಿ ಸಾಗುತ್ತಿದ್ದುಶೀಘ್ರದಲ್ಲಿ ಸಂಚಾರಕ್ಕೆ ಮುಕ್ತ ಗೊಳಿಸಲಾಗುತ್ತದೆಎಂದರು.ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರಜಾರಿಗೆ ತಂದಿದೆ.
ಅದರಲ್ಲಿರುವ ಎಲ್ಲಾ ಕಾನೂನುಗಳನ್ನುಬಲವಾಗಿ ಜಾರಿಗೊಳಿಸಲು ನಮ್ಮ ಅಪೇಕ್ಷೆಯಿದೆ.ಕಾಂಗ್ರೆಸ್ ಸರ್ಕಾರ ಇದನ್ನು ವಿರೋಧಿಸುತ್ತಿದೆ. ಬೇರೆಧರ್ಮದವರನ್ನು ಮತಕ್ಕಾಗಿ ಓಲೈಕೆ ಮಾಡಿಕೊಂಡುತಮ್ಮ ಬೇಳೆ ಬೇಯಿಸಿಕೊಂಡು ಕುರ್ಚಿ ಗಟ್ಟಿ ಮಾಡುವಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮತಾಂತರ ಎನ್ನುವುದುಸಮಾಜಕ್ಕೆ ಮಾರಕವಾಗಿದೆ. ಅನಾರೋಗ್ಯ, ಬಡತನ,ಪ್ರೀತಿಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯವಸ್ಥಿತಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಇದು ರಾಜ್ಯದಲ್ಲೂನಡೆಯುತ್ತಿದೆ.
ಲವ್ ಜಿಹಾದ್ ಹೆಸರಿನಲ್ಲಿ ಸಾವಿರಾರು ಹೆಣ್ಣು ಮಕ್ಕಳು ಮತಾಂತರ ಆಗುತ್ತಿದ್ದಾರೆ. ಅವರಿಗೆ ನೆಲೆಇಲ್ಲದ ಪರಿಸ್ಥಿತಿಯನ್ನು ನಾವು ಹಲವಾರು ಪ್ರದೇಶದಲ್ಲಿನೋಡುತ್ತಿದ್ದೇವೆ. ಇಂತಹ ಕೆಟ್ಟ ವ್ಯವಸ್ಥೆಗಳು ಸಮಾಜದಲ್ಲಿಇರಬಾರದು. ಅದಕ್ಕಾಗಿ ಇದನ್ನು ನಿಷೇಧ ಮಾಡಬೇಕುಎಂಬ ನಮ್ಮ ಪ್ರಯತ್ನ ನಡೆಯುತ್ತಿದೆ. ಯಾವುದೇಧರ್ಮದವರು ಅದೇ ಧರ್ಮದಲ್ಲಿ ಮುಂದುವರಿದರೆಯಾರ ಅಭ್ಯಂತರವೂ ಇಲ್ಲ ಎಂದರು. ಬಿಜೆಪಿಮುಖಂಡರಾದ ಬಿ.ಎಂ. ಭರತ್, ಟಿ.ಎಂ. ಗಜೇಂದ್ರ,ನರೇಂದ್ರ ಗೌಡ, ಪರೀಕ್ಷಿತ್ ಜಾವಳಿ ಇದ್ದರು