Advertisement
ಜಿಲ್ಲೆಯ 5 ಕ್ಷೇತ್ರಗಳ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ವರ ಪಟ್ಟಿ ವಿಶೇಷ ಪರಿಷ್ಕರಣೆ ಬಳಿಕ ಅಂತಿಮ ಪಟ್ಟಿ ಯನ್ನು ಪ್ರಕಟಿಸಲಾಗಿದ್ದು, ಜಿಲ್ಲಾದ್ಯಂತ 10,49,896 ಮಂದಿ ಮತದಾರರು ಇದ್ದಾರೆ. ಆ ಪೈಕಿ 5,18,151 ಪುರುಷ ಮತದಾರರು ಇದ್ದರೆ ಮಹಿಳಾ ಮತದಾರರು ಬರೋಬ್ಬರಿ 5,31,642 ಮಂದಿ ಇದ್ದಾರೆ.
Related Articles
Advertisement
ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 11,978 ಮಂದಿ ಮತದಾರರಿಗೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ನಮೂನೆ-7ರಲ್ಲಿ ಮರಣ ಹೊಂದಿದೆ. ಹಾಗೂ ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರು ಹೊಂದಿದ ಕಾರಣಗಳಿಗೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಗೌರಿಬಿದನೂರಲ್ಲಿ 2,416, ಬಾಗೇಪಲ್ಲಿಯಲ್ಲಿ 2,508, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2,795, ಶಿಡ್ಲಘಟ್ಟ ಕ್ಷೇತ್ರದಲ್ಲಿ 1,566 ಹಾಗೂ ಚಿಂತಾಮಣಿ ಕ್ಷೇತ್ರದಲ್ಲಿ 2,693 ಮಂದಿಯನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 19.50 ಲಕ್ಷ ಮತದಾರರು :
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 19,50,443 ಮತದಾರರು ಇದ್ದಾರೆ. ಆ ಪೈಕಿ 9,80,641 ಮಹಿಳೆಯರು ಹಾಗೂ 9,69,538 ಪುರುಷರು ಹಾಗೂ ಇತರೇ 264 ಮಂದಿ ಸೇರಿ ಒಟ್ಟು 19,50,443 ಮಂದಿ ಮತದಾರರು ಇದ್ದಾರೆ. ಆ ಪೈಕಿ ಯಲಹಂಕ ಕ್ಷೇತ್ರದಲ್ಲಿ 4,45,861 ಮಂದಿ ಮತದಾರರು ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ 2,16,824, ದೇವನಹಳ್ಳಿ ಕ್ಷೇತ್ರದಲ್ಲಿ 2,13,408, ನೆಲಮಂಗಲದಲ್ಲಿ 2,18,929 ಹಾಗೂ ಹೊಸಕೋಟೆ ಕ್ಷೇತ್ರದಲ್ಲಿ 2,35,907, ಗೌರಿಬಿದನೂರು ಕ್ಷೇತ್ರದಲ್ಲಿ 2,09,531, ಬಾಗೇಪಲ್ಲಿ ಕ್ಷೇತ್ರದಲ್ಲಿ 2,01,555 ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2,08,428 ಮಂದಿ ಮತದಾರರು ಇದ್ದಾರೆ.
– ಕಾಗತಿ ನಾಗರಾಜಪ್ಪ