Advertisement

ಚಲಾವಣೆ 9.02 ಲಕ್ಷ, ಕೈಗೆ 3.48 ಲಕ್ಷ ಮತ!

02:44 PM May 15, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭಾ ಚುನಾವಣೆಯ ಫ‌ಲಿತಾಂಶ ಹೊರ ಬಿದ್ದಿದೆ. ಆದರೆ, ಜಿಲ್ಲೆಯ 5 ಕ್ಷೇತ್ರಗಳ ಪೈಕಿ 3 ಸ್ಥಾನ ಗೆದ್ದಿರುವ ಕಾಂಗ್ರೆಸ್‌ ಜಿಲ್ಲಾದ್ಯಂತ ಸಾರ್ವತ್ರಿಕ ಚುನಾವಣೆಯಲ್ಲಿ ಚಲಾವಣೆಗೊಂಡ ಒಟ್ಟು 9,02,896 ಮತಗಳ ಪೈಕಿ ಅತ್ಯಧಿಕ 3,48,384 ಮತಗಳನ್ನು ಪಡೆದು ಜಿಲ್ಲೆಯಲ್ಲಿ ಅತೀ ಹೆಚ್ಚು ಶೇಕಡವಾರು ಮತ ಪಡೆದ ಖ್ಯಾತಿ ಗಳಿಸಿದೆ.

Advertisement

ಹೌದು, ಜಿಲ್ಲೆಯಲ್ಲಿ ಪಕ್ಷಗಳು ಗಳಿಸಿ ರುವ ಮತಗಳಿಕೆಯ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್‌ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಖಾತೆ ತೆರೆಯುವಲ್ಲಿ ಸಾಧ್ಯವಾಗದೆ ಎಡವಿರುವ ಬಿಜೆಪಿ ಬರೋಬ್ಬರಿ 1,83,820 ಮತ ಗಳ ನ್ನು ಪಡೆದು ಎರಡನೇ ಪಕ್ಷವಾಗಿ ಹೊರವೊಮ್ಮಿದರೆ, 1 ಸ್ಥಾನ ಗೆದ್ದಿರುವ ಜೆಡಿಎಸ್‌ ಮೂರನೇ ಸ್ಥಾನಕ್ಕೆ ಕುಸಿದಿದೆ.

ಕ್ಷೇತ್ರವಾರು ಮತ ಗಳಿಕೆ: ಗೌರಿಬಿದನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಇವಿಎಂ ಹಾಗೂ ಅಂಚೆ ಮತ ಸೇರಿ ಒಟ್ಟು 46,551 ಮತ ಪಡೆದರೆ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 86,224 ಮತ ಗಳಿಸಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ 82,128 ಮತ, ಚಿಂತಾಮಣಿಯಲ್ಲಿ ಜಿಲ್ಲೆಯಲ್ಲೇ ಅತ್ಯಧಿಕವಾಗಿ ಒಟ್ಟು 97,324 ಮತ ಪಡೆದುಕೊಂಡಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಇವಿಎಂ ಹಾಗೂ ಅಂಚೆ ಮತ ಸೇರಿ ಒಟ್ಟು 36,157 ಮತಗಳನ್ನು ಪಡೆದು ಜಿಲ್ಲಾದ್ಯಂತ 3,48,384 ಮತಗಳನ್ನು ಗಳಿಸಿ ದೊಡ್ಡ ಪಕ್ಷವಾಗಿದೆ. ಎರಡನೇ ಸ್ಥಾನದಲ್ಲಿರುವ ಬಿಜೆಪಿ ಗೌರಿಬಿದನೂರಲ್ಲಿ 8,132, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 75,582, ಬಾಗೇಪಲ್ಲಿ 62,949, ಚಿಂತಾಮಣಿ 21,711, ಶಿಡ್ಲಘಟ್ಟ ಕ್ಷೇತ್ರದಲ್ಲಿ 15,446 ಮತಗಳು ಸೇರಿ ಒಟ್ಟು 1,83,820 ಮತಗಳನ್ನು ಪಡೆದುಕೊಂಡಿದೆ.

ಕಳೆದ ಬಾರಿ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟಾರೆ ಮತಗಳಿಕೆಯಲ್ಲಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್‌ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಒಟ್ಟು 1,68,444 ಮತಗಳನ್ನು ಮಾತ್ರ ಪಡೆದುಕೊಂಡಿದೆ. ಆ ಪೈಕಿ ಇವಿಎಂ ಹಾಗೂ ಅಂಚೆ ಮತ ಸೇರಿ ಗೌರಿಬಿದನೂರಲ್ಲಿ 11,125, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 19,815, ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ ಕಣದಲ್ಲಿ ಇರಲಿಲ್ಲ. ಚಿಂತಾಮಣಿ ಕ್ಷೇತ್ರದಲ್ಲಿ ಒಟ್ಟು 68,272 ಮತ ಗಳಿಸಿದರೆ ಶಿಡ್ಲಘಟ್ಟ ಕ್ಷೇತ್ರದಲ್ಲಿ 68,389 ಮತಗಳನ್ನು ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಬಲಗೊಳ್ಳುತ್ತಿದೆ ಬಿಜೆಪಿ!: ಈ ಬಾರಿ ವಿಧಾನಸಭಾ ಚುನಾವಣೆಯ ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಖಾತೆ ತೆರೆಯುವಲ್ಲಿ ವಿಫ‌ಲವಾಗಿರುವ ಬಿಜೆಪಿ ಮಾತ್ರ ಜಿಲ್ಲೆಯಲ್ಲಿ ಎರಡನೇ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು, ಜೆಡಿಎಸ್‌ ಸ್ಥಾನವನ್ನು ಬಿಜೆಪಿ ಆಕ್ರಮಿಸಿದರೆ, ಎರಡನೇ ಸ್ಥಾನ ದಲ್ಲಿದ್ದ ಜೆಡಿಎಸ್‌ ಮೂರನೇ ಸ್ಥಾನಕ್ಕೆ ಕುಸಿದಿದೆ. ಬಿಜೆಪಿ ಸಾರ್ವ ತ್ರಿಕ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಮತ ಗಳಿಕೆಯಲ್ಲಿ ತೀರಾ ಹಿಂದುಳಿಯು ತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಉತ್ತಮ ಮತಗಳನ್ನು ಪಡೆದು ಜೆಡಿಎಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣ ವಾಗಿದೆ. ಬಾಗೇಪಲ್ಲಿಯಲ್ಲಿ ಸಿಪಿಎಂ ಮತ ಬಿಜೆಪಿ ಕಸಿದಿದ್ದರೆ, ಚಿಂತಾಮಣಿಯಲ್ಲಿ ಜೆಡಿಎಸ್‌ ಮತ ಬಿಜೆಪಿ ಸೆಳೆದಿದೆ.

Advertisement

ಪಕ್ಷೇತರರು ಗಳಿಸಿದ ಒಟ್ಟು ಮತ 2.17 ಲಕ್ಷ : ಈ ಬಾರಿ ಕಣದಲ್ಲಿ ಅಖಾಡದಲ್ಲಿದ್ದ ಪಕ್ಷೇತರರು ಕೂಡ ಸಿಂಹಪಾಲು ಮತ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಗೌರಿಬಿದನೂರ ಕ್ಷೇತ್ರ ಒಂದರಲ್ಲಿಯೇ ಪಕ್ಷೇತರ ಅಭ್ಯರ್ಥಿ 83,837 ಮತ ಗಳಿಸಿದರೆ, ಶಿಡ್ಲಘಟ್ಟದಲ್ಲಿ ಪಕ್ಷೇತರ ಅಭ್ಯರ್ಥಿ 52,160 ಮತ ಗಳಿಸಿ ದಾಖಲೆ ಬರೆದಿದ್ದಾರೆ. ಜಿಲ್ಲಾದ್ಯಂತ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಹಾಗೂ ಬಿಎಸ್‌ಪಿ ಹೊರತುಪಡಿಸಿ ಕಣದಲ್ಲಿ ಕೆಆರ್‌ಎಸ್‌, ಆಮ್‌ ಆದ್ಮಿ ಪಕ್ಷ, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸೇರಿದಂತೆ ಪಕ್ಷೇತರರು ಒಟ್ಟು 2,00017 ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ.

-ಕಾಗತಿ ನಾಗರಾಜಪ್ಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next