Advertisement

ಲಡಾಕ್‌ಗೆ ಅಂಬರೀಶ್‌ ಬೈಕ್‌ಯಾನ

03:45 PM Jul 02, 2023 | Team Udayavani |

ಚಿಕ್ಕಬಳ್ಳಾಪುರ: ಬೈಕ್‌ ರೈಡಿಂಗ್‌ ಇತ್ತೀಚಿನ ದಿನಗಳಲ್ಲಿ ಒಂದು ಪ್ಯಾಷನ್‌ ಆಗುತ್ತಿದ್ದು ಅದರಲ್ಲೂ ವೀಕೆಂಡ್‌ ವೇಳೆ ಐಟಿ-ಬಿಟಿ ಉದ್ಯೋಗಿಗಳಲ್ಲಿ ಹವ್ಯಾಸವಾಗಿದೆ.

Advertisement

ಅಭಿಲಾಷೆ ಹೊಂದಿದ್ದರು: ಪ್ರವಾಸಿಗರ ಪಾಲಿನ ಸ್ವರ್ಗ ಲಡಾಕ್‌ಗೆ ಯಾನ ಮಾಡುವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು ಇದೀಗ ಚಿಕ್ಕಬಳ್ಳಾಪುರ ಕೆ.ಅಂಬರೀಶ್‌ ಎಂಬವರು ತಮ್ಮ ಬೈಕ್‌ ಮೂಲಕ ಬರೋಬ್ಬರಿ 6500-7000 ಕಿ.ಮೀ ದೂರದ ಲಡಾಕ್‌ಗೆ ಜು.26ರಿಂದಲೇ ಪ್ರಯಾಣ ಬೆಳೆಸಿದ್ದಾರೆ. 4-5 ವರ್ಷ ದಿಂದ ಲಡಾಕ್‌ ಗೆ ಬೈಕ್‌ಯಾನ ಮಾಡಬೇಕೆಂಬ ಅಭಿ ಲಾಷೆ ಹೊಂದಿದ್ದ ಅಂಬರೀಶ್‌, ಈ ಮಧ್ಯೆ ಕೊರೊನಾ ಅಡ್ಡಿಯಾಗಿತ್ತು.

ನಾಳೆ ತಲುಪುತ್ತೇನೆ: ಈ ವರ್ಷ ಹೊಸ ಬೈಕ್‌ ಖರೀದಿಸಿ ಬೈಕ್‌ ಯಾನಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳೊಂದಿಗೆ ತೆರಳಿದ್ದಾರೆ. ಸದ್ಯ ಆಗ್ರಾದಲ್ಲಿದ್ದ ಅಂಬರೀಶ್‌ “ಉದಯವಾಣಿ’ಯೊಂದಿಗೆ ಮಾತನಾಡಿ, ಜು.3ರಂದು ಲಡಾಕ್‌ಗೆ ಭೇಟಿ ನೀಡುತ್ತಿರುವುದಾಗಿ ವಿವರಿಸಿದರು.

ಈ ಮಧ್ಯೆ, ಸುಮಾರು 9 ಸಾವಿರ ಕಿ.ಮೀ ಸಂಚರಿಸುವ ಗುರಿ ಹೊಂದಿದ್ದಾರೆ. ಚಿಕ್ಕಬಳ್ಳಾಪುರದ ಪ್ರಶಾಂತ್‌ ನಗರದ ನಿವಾಸಿ ಆಗಿರುವ ವೃತ್ತಿಯಲ್ಲಿ ಫೋಟೋ ಸ್ಟುಡಿಯೋ ಮಾಲೀಕರಾಗಿರುವ ಅಂಬರೀಶ್‌, ಸದ್ಯ ಚಿಕ್ಕಬಳ್ಳಾಪುರದಿಂದ ಲಡಾಕ್‌ಗೆ ಬೈಕ್‌ ಯಾನ ಆರಂಭಿಸಿರುವ ಮೊದಲ ವ್ಯಕ್ತಿಯಾಗಿದ್ದಾರೆ.

ಸುಮಾರು 4, 5 ವರ್ಷದಿಂದ ಲಡಾಕ್‌ಗೆ ಬೈಕ್‌ಯಾನ ಮಾಡಬೇಕೆಂಬ ಇಚ್ಛೆ ಇತ್ತು. ಆದರೆ, ಕೊರೊನಾ ಮತ್ತಿತರ ಕಾರಣದಿಂದ ಸಾಧ್ಯವಾಗಿರಲಿಲ್ಲ. ಈ ವರ್ಷ ಫೇಸ್‌ಬುಕ್‌ ಮೂಲಕ ಪರಿಚಿತರಾದ ಕ್ರಿಸ್‌ ಎಂಬ ಸ್ನೇಹಿತನ ಜತೆ ಲಡಾಕ್‌ಗೆ ಬೈಕ್‌ ಮೂಲಕ ತೆರಳುತ್ತಿದ್ದೇನೆ. ಸುಮಾರು 9000 ಕಿ.ಮೀ.ದೂರವನ್ನು ತಿಂಗಳ ಕಾಲ ಸುತ್ತಿ ಬರಲಿದ್ದೇನೆ. ● ಕೆ.ಅಂಬರೀಶ್‌, ಲಡಾಕ್‌ ಪ್ರವಾಸಿ, ಬೈಕ್‌ ರೈಡರ್‌.

Advertisement

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next