Advertisement

ವಿಷಯಾಧಾರಿತ ಬೆಂಬಲಕ್ಕೆ ಸೈ, ವಿಲೀನಕ್ಕೆ ವಿರೋಧ

03:01 PM Dec 22, 2020 | Suhan S |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಬಿಜೆಪಿಯಲ್ಲಿ ವಿಲೀನವಾಗುತ್ತಿದೆ ಮತ್ತು ಮೈತ್ರಿ ಮಾಡಿಕೊಳ್ಳಲು ವೇದಿಕೆ ಸಜ್ಜಾಗುತ್ತಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

Advertisement

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ (ಚಿಂತಾಮಣಿ) ಜೆಡಿಎಸ್‌ ಗೆಲುವು ಸಾಧಿಸಿದ್ದು, ಇನ್ನುಳಿದಂತೆಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಒಂದುಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ದಿಗ್ಭ್ರಮೆ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಮೋದನೆ ವಿಚಾರ ಮತ್ತು ಸಭಾಪತಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪರ ಮತ್ತುವಿರೋಧ ಚರ್ಚೆಗಳ ಮಧ್ಯೆ ಜೆಡಿಎಸ್‌, ಬಿಜೆಪಿ ಪಕ್ಷದಲ್ಲಿ ವಿಲೀನವಾಗುತ್ತಿದೆ ಎಂಬ ಸುದ್ಧಿಯಿಂದಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ವಿಲೀನ ಅನುಮಾನ: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಎದುರಾಳಿ ಪಕ್ಷವಾಗಿರುವ ಜೆಡಿಎಸ್‌, ಇತ್ತೀಚೆಗೆ ಕೆಲವೊಂದು ಬೆಳವಣಿಗೆಗಳಿಂದ ಮುಂದಿನ ದಿನಗಳಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದೆಯೇ? ಅಥವಾ ಬಿಜೆಪಿಯೊಂದಿಗೆವಿಲೀನವಾಗುತ್ತಿದೆ? ಎಂಬ ಅನುಮಾನ ಸಹಜವಾಗಿ ಮೂಡಿದೆ.

ಗೊಂದಲ ನಿವಾರಣೆಗೆ ಟ್ವೀಟ್‌: ವಿಧಾನ ಪರಿಷತ್‌ ಸಭಾಪತಿ ವಿಚಾರದಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ಮತ್ತೂಂದೆಡೆ ಗೋಹತ್ಯೆ ಕಾಯ್ದೆ ವಿಚಾರದಲ್ಲಿ ವಿರೋಧ ಮಾಡುತ್ತಿರುವ ಜೆಡಿಎಸ್‌ ನಡೆಯಿಂದ ಸಹಜವಾಗಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ರಾಜ್ಯ ರಾಜಕಾರಣದಲ್ಲಿ ಸುನಾಮಿ ಅಲೆ ಸೃಷ್ಟಿಸಿರುವ “ವಿಲೀನ’ ವಿಚಾರದಲ್ಲಿಅಲ್ಲೋಲ ಕಲ್ಲೋಲ ವಾತಾವರಣ ನೋಡಿ ಸ್ವತಃ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ ಕಾರ್ಯಕರ್ತರು ಮತ್ತುಮುಖಂಡರಲ್ಲಿ ಭುಗಿಲೆದ್ದಿರುವ ಅನುಮಾನ ಮತ್ತು ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಟ್ವೀಟ್‌ ಮಾಡಿದ್ದಾರೆ.

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಬಿಜೆಪಿಯಬಿ ಟೀಂಎಂದುಪ್ರತಿಬಿಂಬಿಸಿದ ಪರಿಣಾಮ ಸುಮಾರು 25 ರಿಂದ 30 ಕ್ಷೇತ್ರಗಳಲ್ಲಿಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವಂತಹ ವಾತಾವರಣ ನಿರ್ಮಾಣವಾಗಿದ್ದನ್ನು ಸ್ಮರಿಸಬಹುದು.

ವಿಷಯಾಧಾರಿತ ಬೆಂಬಲ: ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್‌ ಎಂದಿಗೂ ವಿಲೀನದ ಆಲೋಚನೆಮಾಡುವುದಿಲ್ಲ. ಅಗತ್ಯವಿದ್ದಾಗ ವಿಷಯ ಆಧಾರಿ ತವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ವಿಶ್ವಾಸ ಪೂರಕವಾಗಿ ನಡೆಯಬಹುದಷ್ಟೆ. ವಿಲೀನದಂತಹ ಕಪೋಲಕಲ್ಪಿತ ಸುದ್ದಿಗಳಿಗೆ ಯಾವುದೇಪ್ರಾಮುಖ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್‌ಡಿಕೆ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಜೊತೆ ವಿಲೀನ ಮತ್ತು ಮೈತ್ರಿ ಮಾಡಿಕೊಳ್ಳುವ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಕಾರ್ಯಕರ್ತರು,ಮುಖಂಡರು ಗೊಂದಲ್ಲಕ್ಕೀಡಾಗಬಾರದು.- ಸೈಯದ್‌ ಜಾಮೀನ್‌ ರಜಾ, ರಾಜ್ಯ ಜೆಡಿಎಸ್‌  ಮುಖಂಡರು, ಅಲೀಪರ

ರಾಜ್ಯದಲ್ಲಿ ಬಿಜೆಪಿ ಪಕ್ಷದೊಂದಿಗೆ ವಿಲೀನ ಅಥವಾ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಯಾವುದೇ ತೀರ್ಮಾನ ವಾಗಿಲ್ಲ. ಸಂಕ್ರಾಂತಿ ನಂತರ ರಾಜ್ಯ ಜೆಡಿಎಸ್‌ ಸಮಿತಿ ಪುನರ್‌ ರಚಿಸಿ ಪಕ್ಷ ಸಂಘಟನೆಗೆ ತೀರ್ಮಾನ ಮಾಡಿದ್ದೇವೆ. ಸೈಯದ್‌ ರೋಷನ್‌ ಅಬ್ಟಾಸ್‌, ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ

ರಾಜ್ಯದಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ವಿಲೀನ ಆಗುವುದಿಲ್ಲ. ಜೆಡಿಎಸ್‌ ಬೆಳವಣಿಗೆ ಸಹಿಸದೆ ಅಪ ಪ್ರಚಾರ ಮಾಡಲಾಗುತ್ತಿದೆ. ಕಾರ್ಯಕರ್ತರುಗೊಂದಲಗಳಿಗೆ ಸಿಲುಕದೇಗ್ರಾಪಂ ಚುನಾವಣೆ ಬಗ್ಗೆ ಗಮನ ಹರಿಸಲಿ. – ವೆಂಕಟೇಶ್‌, ಅಧ್ಯಕ್ಷರು, ಶಿಡ್ಲಘಟ್ಟ ತಾಲೂಕು ಜೆಡಿಎಸ್‌

ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಗೆ ಕೆಲವೆಡೆ ಸ್ಥಳೀಯ ಮುಖಂಡರ ಅಭಿಪ್ರಾಯದಂತೆಕಾಂಗ್ರೆಸ್‌ಜತೆ ಮೈತ್ರಿಮಾಡಿಕೊಂಡಿದ್ದೇವೆ.ಜೆಡಿಎಸ್‌, ಬಿಜೆಪಿಯೊಂದಿಗೆ ವಿಲೀನವಾಗುತ್ತಿದೆಎಂಬ ಬಗ್ಗೆ ಮಾಹಿತಿ ಇಲ್ಲ. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ಮುನೇಗೌಡ,ಅಧ್ಯಕ್ಷರು,ಜಿಲ್ಲಾ ಜೆಡಿಎಸ್‌

 

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next