ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಒತ್ತುವರಿ ಮಾಡಲಾಗಿರುವ ರಾಜಕಾಲುವೆಯನ್ನು ಒಂದು ವಾರದೊಳಗಾಗಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರಿಗಳಿಗೆ ಸೂಚಿಸಿದರು.
ಭಾನುವಾರ ಮುಂಜಾನೆ ಬೋದಗೂರು ಗ್ರಾಮದಲ್ಲಿ ಸಂಚರಿಸಿ, ಆಶ್ರಯ ಯೋಜನೆಯಡಿಮಂಜೂರಾದ ನಿವೇಶನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತದ ನಂತರ ರಾಜ ಕಾಲುವೆಗಳಒತ್ತುವರಿ ವೀಕ್ಷಿಸಿ ವಾರದೊಳಗಾಗಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆಗಡುವು ನೀಡಿದರು.
ಸ್ವಚ್ಛತೆಗೆ ಆದ್ಯತೆ ನೀಡಿ: ಬೆಳ್ಳಂಬೆಳಗ್ಗೆ ಗ್ರಾಮದ ಕೆಲ ನಾಗರಿಕರು ತಮ್ಮ ಮನೆಗಳ ಮುಂದಿರುವ ಸಮಸ್ಯೆಗಳ ಕುರಿತು ಮನವಿ ಮಾಡಿದಾಗ, ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಬಗೆಹರಿಸಿದರು. ಮನೆಗಳ ಮುಂದೆ ಕಸಹಾಕದಂತೆ, ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಿ, ಚರಂಡಿಯನ್ನು ಸ್ವಚ್ಚಗೊಳಿಸಲು ಕ್ರಮ ವಹಿಸಬೇಕು. ಒಗ್ಗಟ್ಟಿನಿಂದ ಹಳ್ಳಿಯ ಸ್ವತ್ಛತೆಯ ಕಡೆಯೂ ಜನರು ಗಮನ ಹರಿಸಬೇಕು ಎಂದರು.
ಕಮಲಮ್ಮ ಭೇಟಿ: ಆರೋಗ್ಯ ಕೇಂದ್ರ ಮತ್ತು ಡೇರಿ, ನರೇಗಾ ಯೋಜನೆಯಡಿನಿರ್ಮಿಸಲಾಗಿರುವ ಹಸು ಮತ್ತು ಕುರಿ ರೆಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತದ ನಂತರ ರೇಷ್ಮೆ ಕೃಷಿಯಲ್ಲಿ ಉತ್ತಮ ಸಾಧನೆಗಾಗಿ 2019-20ನೇಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಸಮಿತಿಯಜಿಲ್ಲಾ ಮಟ್ಟದ ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ ª ಬೋದಗೂರು ಗ್ರಾಮದ 65 ವಯಸ್ಸಿನ ಕಮಲಮ್ಮ ಅವರನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿಗಳು, ರೇಷ್ಮೆ ಕೃಷಿಯಲ್ಲಿನ ಕಮಲಮ್ಮನವರ ಅನುಭವ ಆಲಿಸಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಆಸಕ್ತಿಯಿಂದ ಪಾಠ ಆಲಿಸಿದರೆ ಪರೀಕ್ಷೆಯಲ್ಲಿ ತೇರ್ಗಡೆ ಸುಲಭ ಎಂದು ಧೈರ್ಯ ತುಂಬಿದರು. ಡಿಡಿಪಿಐ ಜಯರಾಂರೆಡ್ಡಿ, ಕೃಷಿ ಇಲಾಖೆಯಜಂಟಿ ನಿರ್ದೇಶಕಿ ರೂಪಾ, ಡಿಹೆಚ್‌ಐ ಇಂದಿರಾ ಆರ್.ಕಬಾಡೆ, ತಹಶೀಲ್ದಾರ್ ರಾಜೀವ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪಾ, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಇಂದಿರಾ ಕಬಾಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ಸೇರಿದಂತೆ ಇತರೆ ಅಧಿಕಾರಿ ಸಿಬ್ಬಂದಿ ಇದ್ದರು.
ಸ್ತ್ರೀಶಕ್ತಿ ಭವನದಲ್ಲಿ ವಾಸ್ತವ್ಯ: ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಿ ಪ್ರೀತಿ ವಾತ್ಸಲ್ಯ ತೋರಿಸಿದ ಬೋದಗೂರು ಗ್ರಾಮಸ್ಥರ ಪ್ರೀತಿಗೆಜಿಲ್ಲಾಧಿಕಾರಿ ಆರ್.ಲತಾ ಮನಸೋತರು. ಗ್ರಾಮದ ಸ್ತ್ರೀಶಕ್ತಿ ಭವನದಲ್ಲಿ ವಾಸ್ತವ್ಯ ಮಾಡಿದ್ದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಮಹಿಳಾ ಅಧಿಕಾರಿಗಳು ಸಾಥ್ ನೀಡಿದರು.