ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ಒಂದರಿಂದ ಎಲ್ಲಾ ಕುಟುಂಬಗಳನ್ನು “ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ’ಗೆ
(ಯೂನಿವರ್ಸಲ್ ಹೆಲ್ತ್ ಕವರೇಜ್) ತರುವ ಯೋಜನೆ ಜಾರಿಯಾಗಲಿದ್ದು ನಂತರ ಮುಖ್ಯಮಂತ್ರಿಗಳ ಪರಿಹಾರ
ನಿಧಿ ರದ್ದುಗೊಳ್ಳುವ ಸಾಧ್ಯತೆ ಇದೆ.
ಯೂನಿವರ್ಸಲ್ ಹೆಲ್ತ್ ಕವರೇಜ್ ನಡಿ ನೀಡುವ ಕಾರ್ಡ್ ಹೊಂದಿರುವವರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ.
ಹೀಗಿರುವಾಗ ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಯಾರಿಗೂ ನೆರವು ನೀಡಬೇಕಾದ ಅಗತ್ಯ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ರದ್ದಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿ ಯಡಿ ಈ ಹಿಂದೆ ಪ್ರತಿ ವರ್ಷ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರ ಚಿಕಿತ್ಸೆಗಾಗಿ 30ರಿಂದ 40 ಕೋಟಿ ರೂ. ಪರಿಹಾರ ನೀಡಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಮೊತ್ತ ಹೆಚ್ಚಾಗಿದ್ದು, ವಾರ್ಷಿಕ 60ರಿಂದ 70 ಕೋಟಿ ರೂ. ಭರಿಸಲಾಗುತ್ತಿದೆ.
ಯೂನಿವರ್ಸಲ್ ಹೆಲ್ತ್‌ಕಾರ್ಡ್ ಜಾರಿಗೆ ಬಂದ ಮೇಲೆ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಸಿಗುವಾಗ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಏಕೆ ಕೊಡಬೇಕು? ಹೀಗಾಗಿ ಆ ಪರಿಹಾರ ನಿಧಿ ಇರಬಾರದು.
– ಕೆ.ಆರ್.ರಮೇಶ್
ಕುಮಾರ್, ಆರೋಗ್ಯ ಸಚಿವ