Advertisement
ಇವು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಇಲವಾಲ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ರೋಡ್ ಶೋ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಂದಿನ ಶೈಲಿಯಲ್ಲಿ ಗ್ರಾಮಸ್ಥರನ್ನು ಹೆಸರಿಡಿದು ಮಾತನಾಡಿಸಿ ಅವರ ಯೋಗಕ್ಷೇಮ ವಿಚಾರಿಸಿದ ಪರಿ.
Related Articles
Advertisement
ಬೇಡಿಕೆಗೆ ಪುರಸ್ಕಾರ:ಆನಂದೂರಿನಲ್ಲಿ ಹಾಕಲಾಗಿದ್ದ ಶಾಮಿಯಾನದಡಿ ಸ್ಥಳೀಯ ಮುಖಂಡರೊಂದಿಗೆ ಕುಳಿತು ಮಾತನಾಡುವಾಗ, ಈ ಮಧ್ಯೆ ಗ್ರಾಮಸ್ಥರೊಬ್ಬರು “ಸಾರ್ ರಾಮೇಗೌಡ್ರು ನಿಮ್ ಪರವಾಗಿ ಹೋರಾಟ ಮಾಡ್ತಾ ಬಂದವೆ, ಅವರಿಗೇನಾರ ಮಾಡಿಕೊಡಿ’ ಎಂದು ಬೇಡಿಕೆ ಇಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ರಾಮೇಗೌಡಂಗೆ ಅದೃಷ್ಟ ಬರೋವಂಗೆ ಈ ಸಾರಿ ಏನಾರ ಮಾಡನಾ ಬುಡು’ ಅಂದರು, ಅಷ್ಟರಲ್ಲಿ ಅವರಿಗೆ ವಯಸ್ಸಾಗೋಗಿರ್ತದೆ, ಎಂದು ಹೇಳಿದಾಗ, “ರಾಮಗೌಡಂಗೆ ಎಂಥಾ ವಯಸ್ಸಾದದು, ನನಗಿಂತ ಚಿಕ್ಕವನು ಮುಂದೆ ವಿಶೇಷ ಗಮನ ಕೊಡ್ತೀನಿ ಬುಡು’ ಅಂದರು. ಮತಯಾಚನೆ: “ಈ ಕಾಮನಕೆರೆ ಹುಂಡಿ ನರೇಂದ್ರ ಅವನೆಲ್ಲಿ ಹೋದಾನು, ಈ ಝಡ್‌ಪಿ ಮೆಂಬರು ಅರುಣ್ ಕುಮಾರ ಇವರೆಲ್ಲ ನನ್ನ ಪರ ಓಡಾಡ್ತಾರೆ, 12ನೇ ತಾರೀಖು ಎಲ್ಲರೂ ಮತಗಟ್ಟೆಗೆ ಹೋಗಿ ಹಸ್ತದ ಗುರುತಿಗೆ ಮತಹಾಕಿ ನನ್ನನ್ನು ಗೆಲ್ಲಿಸಿಕೊಡಿ’ ಎಂದು ಮನವಿ ಮಾಡಿದರು. ಉಪಕಾರ ಸ್ಮರಿಸಿದ ಸಿದ್ದು
ಆನಂದೂರಿನಲ್ಲಿ ಹಾಕಲಾಗಿದ್ದ ಶಾಮಿಯಾನದಡಿ ಸ್ಥಳೀಯ ಮುಖಂಡರೊಂದಿಗೆ ಕುಳಿತು ಗ್ರಾಮದ ಹಿರಿಯರಾದ ಬೋರೆಗೌಡರನ್ನು ಉದ್ದೇಶಿಸಿ, “ನಮಸ್ಕಾರ ಬೋರೇಗೌಡ್ರೆ, ಹಿಂದೆಲ್ಲಾ ನನ್ನ ನೋಡಿದ್ದೀರಿ, ಏನಾರ ಬದಲಾಗಿದ್ದೀನಾ, ಆನಂದೂರಿಗೆ ಅನೇಕ ಸಾರಿ ಬಂದಿದ್ದೇನೆ. ಈಗ್ಗೆ ಕೆಲ ವರ್ಷಗಳಿಂದ ಬರಲಾಗಿಲ್ಲ. ನಮ್ಮ ರಾಮೇಗೌಡ ಮೊದಲಿಂದು ನಮ್ಮ ಜತೆ ಹೋರಾಟ ಮಾಡ್ತಾ ಅವೆ, ಬಾಳ ಜನ ಹಳಬ್ರು ನಮ್ ಜತೆ ಇಲ್ಲಾ, ಆದ್ರೂ ಕೆಲವ್ರ ಗುರುತು ಸಿಗುತ್ತೆ, ಏನಾ ಮಗ ನಿಮ್ಮಪ್ಪಗಂಗಣ್ಣ ಎಲೆಕ್ಷನ್ ಬಂದ್ರೆ ಸಾಕು ಮೋಟಾರ್ ಬೈಕ್ ಹಾಕ್ಕೊಂಡು ಊರೂರು ಸುತ್ತೋನು, ಈ ಚಿಕ್ಕೇಗೌಡ ಅವರಲ್ಲ 1983ರ ನನ್ನ ಮೊದಲನೆ ಎಲೆಕ್ಷನ್ ತಕ್ಕಡಿ ಗುರುತಿಂದ ನಿಂತಿದ್ನಲ್ಲ ಆಗ, 1985ರ ಎಲೆಕ್ಷನ್‌ನಲ್ಲೂ ಸಹಾಯ ಮಾಡವೆÅ, ಉಪಕಾರ ಮಾಡಿರೋವ್ರನ್ನ ಸ್ಮರಿಸದೆ ಇರೋಕಾಗುತ್ತಾ’ ಎಂದರು. ಸಿದ್ರಾಮಯ್ಯ ಎಂದ ಮಗು
ಚಿಕ್ಕನಹಳ್ಳಿಯಲ್ಲಿ ಅಜ್ಜಿಯ ಸೊಂಟದ ಮೇಲಿದ್ದ ಪುಟ್ಟ ಬಾಲಕನನ್ನು ಕೈಹಿಡಿದು ನಾನ್ಯಾರಾÉ ಎಂದು ಮುಖ್ಯಮಂತ್ರಿ ಕೇಳಿದರು. ಆ ಮಗು ಥಟ್ಟನೆ ಸಿದ್ರಾಮಯ್ಯ ಎಂದಾಗ ಖುಷಿಯಿಂದ ಕೆನ್ನೆ ಸವರಿ ಮುನ್ನಡೆದರು. – ಗಿರೀಶ್ ಹುಣಸೂರು