Advertisement

ಜಾಲಪ್ಪನವರ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ

11:25 AM Sep 13, 2017 | Team Udayavani |

ಯಲಹಂಕ: ಕಳೆದ ಮೂರು ದಿನಗಳಿಂದ ಹೆಬ್ಟಾಳದ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಆರ್‌.ಎಲ್‌ ಜಾಲಪ್ಪ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಜಾಲಪ್ಪ ಅವರ ಆರೋಗ್ಯ ವಿಚಾರಿಸಿದ್ದಾರೆ.  ಮಂಗಳವಾರ ಭೇಟಿ ನೀಡಿದ್ದ ಸಿಎಂ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಕುಟುಂಬಸ್ಥರು ಮತ್ತು ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆದರು. 

Advertisement

ಜಾಲಪ್ಪ ಅವರ ಅರೋಗ್ಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆಸ್ಪತ್ರೆಯ ಯುರೋಲಾಜಿಸ್ಟ್‌, ಕಸಿ ಮತ್ತು ರೋಬೋಟಿಕ್‌ ತಜ್ಞರಾದ ಡಾ.ರವೀಶ್‌ “ಮೂತ್ರ ವಿಸರ್ಜನೆಯ ತೊಂದರೆ, ನೋವಿನಿಂದ ಆಸ್ವತ್ರೆಗೆ ಮೂರು ದಿನಗಳ ಹಿಂದೆ ಜಾಲಪ್ಪ ಅವರನ್ನು ದಾಖಲಿಸಲಾಗಿದೆ. ನೋವಿಲ್ಲದ ರೊಬೊಟಿಕ್‌ ಶಸ್ತ್ರಚಿಕಿತ್ಸೆಯನ್ನು ಅವರಿಗೆ ನೀಡಲಾಗುತ್ತಿದೆ.

ಜಾಲಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಮಾಮೂಲಿಯಂತೆ ಓಡಾಡುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಡಿಸಾcರ್ಜ್‌ ಮಾಡಲಾಗುವುದು, ‘ ಎಂದು ಸ್ಪಷ್ಟಪಡಿಸಿದರು. ಸಮಾಜ ಕಲ್ಯಾಣ ಸಚಿವರಾದ ಆಂಜಿನೇಯ, ವಿಧಾನಪರಿಷತ್‌ ಸದಸ್ಯ ಉಗ್ರಪ್ಪ, ಮತ್ತಿತರರು ಜಾಲಪ್ಪ ರವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next