Advertisement

ಗಾಂಧೀವಾದಿ ಮೀರಾತಾಯಿ ಕೊಪ್ಪೀಕರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

07:24 PM Aug 19, 2022 | Team Udayavani |

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ್ತಿ, ಗಾಂಧೀವಾದಿ ಮೀರಾತಾಯಿ ಕೊಪ್ಪಿಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಗಾಂಧೀಜಿಯವರ ತತ್ವಾದರ್ಶಗಳನ್ನು ಇಂದಿಗೂ ಪಾಲಿಸುತ್ತ ಬದುಕಿದ ಮೀರಾತಾಯಿ ಕೊಪ್ಪಿಕರ್ ಅವರು ವಿನೋಬಾ ಭಾವೆಯವರ ಅನುಯಾಯಿಯಾಗಿದ್ದರು. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ವಾತ್ಸಲ್ಯ ಧಾಮವನ್ನು ಕಟ್ಟಿಕೊಂಡಿದ್ದ ಮೀರಾತಾಯಿ ಅವರು ಸರಳ ಜೀವನ, ಶ್ರಮದಾನ, ಹೈನುಗಾರಿಕೆ ಹಾಗೂ ಸಾವಯವ ಕೃಷಿಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ನೀಡಿದ್ದ ನಗದು ಬಹುಮಾನವನ್ನು ಬಡವರಿಗಾಗಿ ಬಳಸಿದ ನಿಸ್ವಾರ್ಥ ವ್ಯಕ್ತಿತ್ವ ಮೀರಾತಾಯಿ ಅವರದ್ದು.  ಮೀರಾತಾಯಿ ಕೊಪ್ಪಿಕರ್ ಅವರ ನಿಧನದಿಂದ  ಒಬ್ಬ ಶ್ರೇಷ್ಠ ಗಾಂಧೀವಾದಿಯನ್ನು ನಾಡು ಕಳೆಕೊಂಡಿದೆ. ದಯಾಮಯಿ ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ” ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next