Advertisement
ಮಂಗಳವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಈ ಕುರಿತಂತೆ ಎದ್ದಿರುವ ಆತಂಕದ ಬಗ್ಗೆ ಮುಖ್ಯಮಂತ್ರಿ ಬಳಿ ಪ್ರಸ್ತಾವಿಸಿದರು. ಆಗ ಸಿಎಂ, ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮಗಳಿಗೆ ತಿದ್ದುಪಡಿ ತರುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ತಿಳಿ ಸಿರು ವು ದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
2022ರ ಆ.19ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 10ಕ್ಕೂ ಹೆಚ್ಚು ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಕಟ್ಟಡಗಳಿಗೆ ಪರವಾನಿಗೆ, ಕಾರ್ಖಾನೆ, ಹೊಟೇಲ್ ಮತ್ತು ಅಂಗಡಿಗಳ ಸ್ಥಾಪನೆಗೆ ಪರವಾನಿಗೆ ನೀಡಲು ಗ್ರಾಮ ಪಂಚಾಯತ್‌ಗಳಿಗಿದ್ದ ಅಧಿಕಾರವನ್ನು ಪಿಡಿಒಗಳಿಗೆ ನೀಡಲು ನಿರ್ಣಯಿಸಲಾಗಿತ್ತು. ಅದೇ ರೀತಿ ಗ್ರಾಪಂ ಅಧ್ಯಕ್ಷರಿಗಿದ್ದ ಆರ್ಥಿಕ ನಿರ್ವಹಣೆ ಅಧಿಕಾರವನ್ನು ಪಿಡಿಒಗಳಿಗೆ ನೀಡಲಾಗಿತ್ತು.