Advertisement
– ಸೋಮವಾರ, ಎ. 11ರಂದು ಉದಯವಾಣಿಯ ಮಣಿಪಾಲ ಕೇಂದ್ರ ಕಚೇರಿಗೆ ಭೇಟಿ ನೀಡಿ ಅತಿಥಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಬಳಿಕ ನಡೆದ ಸಂವಾದದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಾವಳಿಯ ಅಭಿವೃದ್ಧಿಯ ಬಗ್ಗೆ ಹೊಂದಿರುವ ಯೋಜನೆಗಳ ಬಗ್ಗೆ ಹೇಳಿದ್ದಿದು.ಕೆಲಸ ಮಾಡದ ಮಾತ ನಾ ಡುವ ಸಿಎಂಗಿಂತ ಮಿತಭಾಷಿ ಸಿಎಂ ಉತ್ತ ಮ. ನಾವು ಗಟ್ಟಿ ಧ್ವನಿಯ ಹಲವು ಸಿಎಂ, ರಾಜಕಾರಣಿಗಳನ್ನು ನೋಡಿದ್ದೇವೆ. ಆದರೆ ಅಂತಿಮ ಫಲಿತಾಂಶ ಏನೂ ಸಿಕ್ಕಿಲ್ಲ. ಜನರ ಭಾವನೆ ಅರ್ಥಮಾಡಿಕೊಂಡು ಸೂಕ್ಷ್ಮತೆಯಿಂದ, ಸಮಸ್ಯೆಯ ಭಾಗವಾಗದೆ ಪರಿಹಾರದ ಭಾಗವಾದಾಗ ಸಮಚಿತ್ತದಿಂದ ಮುನ್ನಡೆಯಬಹುದು. ನಾವು ಹೆಚ್ಚು ಮಾತಾಡಬಾರದು, ನಮ್ಮ ಕೆಲಸವೇ ಮಾತಾಡಬೇಕು ಎಂದು ತನ್ನ ಕಾರ್ಯ ವೈಖರಿಯನ್ನು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು. ಸಮಯ ಬಂದಾಗ ಅತ್ಯಂತ ಕಠಿನ ಕ್ರಮಗಳನ್ನು ಕೂಡ ತೆಗೆದುಕೊಂಡಿದ್ದೇವೆ. ಕರ್ನಾಟಕ ವೈಶಿಷ್ಟéಪೂರ್ಣವಾದ ರಾಜ್ಯವಾಗಿದೆ ಮತ್ತು ಅಪಾರ ನೈಸರ್ಗಿಕ ಸಂಪತ್ತಿದೆ. ಜನರಿಗೆ ಅವಕಾಶ ನೀಡಿದರೆ ಪ್ರಬಲವಾದ ಸಮರ್ಥ ಆರ್ಥಿಕ ಬೆಳವಣಿಗೆ ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಯ ಸಂಬಂಧ ಸ್ಪಷ್ಟ ಕಲ್ಪನೆ ನನ್ನಲ್ಲಿ ಇರುವುದರಿಂದ ಯಾವುದೇ ಹೇಳಿಕೆಗಳಿಗೂ ವಿಚಲಿತನಾಗದೆ ಗುರಿ ಸಾಧನೆಗೆ ಕೆಲಸ ಮಾಡುತ್ತೇನೆ. ಕೂಲ್, ಸಾಫ್ಟ್ ಏನೇ ಹೇಳಿ; ಆದರೆ ಸಮಯ ಬಂದಾಗ ಕಠಿನ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ.
ಖಾರ್‌ಲ್ಯಾಂಡ್ ಯೋಜನೆ ಅನುಷ್ಠಾನ
ಪಶ್ಚಿಮ ವಾಹಿನಿ ಯೋಜನೆಗೆ 500 ಕೋಟಿ ರೂ. ಮೀಸಲಿಟ್ಟಿದ್ದೇವೆ. ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವ ಜತೆಗೆ ಖಾರ್‌ಲ್ಯಾಂಡ್ ಯೋಜನೆಯನ್ನು ಉಡುಪಿ, ದಕಿಣ ಕನ್ನಡಕ್ಕೂ ವಿಸ್ತರಣೆ ಮಾಡಿದ್ದೇವೆ. ಉ.ಕ. ಜಿಲ್ಲೆಯಲ್ಲಿ ಈಗಾಗಲೇ 300 ಕೋಟಿ ರೂ.ಗಳ ಕಾರ್ಯ ಆರಂಭವಾಗಿದೆ. ಈ ಯೋಜನೆಯಿಂದ ನದಿಯ ಸಿಹಿ ನೀರು ಉಪ್ಪಾಗುವುದನ್ನು ತಡೆಯಲು ಸಾಧ್ಯವಿದೆ ಮತ್ತು ಕೃಷಿ ಭೂಮಿಗೆ ಉಪ್ಪು ನೀರು ಹರಿಯುವುದನ್ನು ತಡೆಯಬಹುದಾಗಿದೆ. ಉಡುಪಿ, ದ.ಕ.ದಲ್ಲೂ ಯೋಜನೆ ಶೀಘ್ರ ಆರಂಭಿಸಲಿದ್ದೇವೆ.
ಮೌಲ್ಯಾಧಾರಿತ ರಾಜಕಾರಣ,
ಮೌಲ್ಯದ ರಾಜಕಾರಣ…
ಸರಕಾರಕ್ಕೆ ಸವಾಲುಗಳು ಸದಾ ಇರುತ್ತವೆ. ಜನಸಂಖ್ಯೆ ಹೆಚ್ಚಾದಂತೆ ಸರಕಾರದ ಮೇಲೆ ನಿರೀಕ್ಷೆಗಳು, ಬೇಡಿಕೆಗಳು ಹೆಚ್ಚುತ್ತವೆ ಮತ್ತು ಆ ಮೂಲಕ ಸವಾಲು ಜಾಸ್ತಿಯಾಗುತ್ತವೆ. ರಾಜಕಾರಣ ಮೂಲಭೂತವಾಗಿ ಸಾಕಷ್ಟು ಬದಲಾಗಿದೆ ಎಂದರೂ “ಮೌಲ್ಯಾಧಾರಿತ’ ರಾಜಕಾರಣಕ್ಕಿಂತ “ಮೌಲ್ಯ’ದ ರಾಜಕಾರಣವೇ ಹೆಚ್ಚಿದೆ. ಮೌಲ್ಯಾಧಾರಿತವೇ ಅಥವಾ ಮೌಲ್ಯದ ರಾಜಕಾರಣ ಆಯ್ಕೆ -ಇವೆ ರಡು ನಮ್ಮ ಮುಂದಿವೆ. “ಪೀಪಲ್ ಪೊಲಿಟಿಕ್ಸ್’ ಮೂಲಕ “ಪವರ್ ಪೊಲಿಟಿಕ್ಸ್’ ಮಾಡಬೇಕೇ ಅಥವಾ ಕೇವಲ “ಪವರ್ ಪೊಲಿಟಿಕ್ಸ್’ ಮಾಡಬೇಕೇ? ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಈ ಸವಾಲಿತ್ತು, ಈಗಲೂ ಇದೆ. ನೀತಿಗಳು, ಮೌಲ್ಯಗಳು ಒಂದೇ ರೀತಿ ಇದೆ. ವ್ಯಕ್ತಿಯ ನಿಯತ್ತು ಮತ್ತು ಅದನ್ನು ನೋಡುವ ದೃಷ್ಟಿಯೂ ಬದಲಾಗಿದೆ.
Related Articles
ಜನರು ಮತ್ತು ನಿಸರ್ಗ ಒಟ್ಟಿಗೆ ಜೀವನ ನಡೆಸಿಕೊಂಡು ಸಾಗಿದಲ್ಲಿ ಮಾತ್ರ ಸುಸ್ಥಿರ ಪರಿಸರ ನಿರ್ಮಾಣ ಸಾಧ್ಯ. ಕರಾವಳಿ, ಮಲೆನಾಡಿನ ಅರಣ್ಯದಂಚಿನ ಜನರು, ಕಾಡಂಚಿನ ಗ್ರಾಮೀಣ ಭಾಗದವರು ಸಣ್ಣ ಕೃಷಿ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಹಿಂದಿನಿಂದಲೂ ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲದೆ ಹಸುರುಸ್ನೇಹಿ ಯೋಜನೆಗಳಿಗೆ ಪರಿಸರ ಬಜೆಟ್‌ನಲ್ಲಿ 100 ಕೋ. ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಕಸ್ತೂರಿರಂಗನ್ ವರದಿ ಜಾರಿ ಬಗ್ಗೆ ಅವಸರದ ತೀರ್ಮಾನ ಅಗತ್ಯವಿಲ್ಲ. ಜನರ ಬದುಕನ್ನು ತೊಂದರೆಗೆ ಸಿಲುಕಿಸುವ ಕೆಲಸವನ್ನು ಸರಕಾರ ಮಾಡುವುದಿಲ್ಲ . ನಾಡಿನ ಜನರು ಕಾಡಿನೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ.
ಮಂಗಳೂರು ಅಭಿವೃದ್ಧಿ ಹೊಂದು ತ್ತಿರುವ ನಗರ. ಇಲ್ಲಿಗೆ ಮೆಟ್ರೋ ವ್ಯವಸ್ಥೆ ಮಾಡುವ ಆಲೋಚನೆ ಇದೆಯೇ?
ಮಂಗಳೂರು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಾಗ ಮತ್ತಷ್ಟು ಅವಕಾಶ ಸಿಗಲಿದೆ. ಮೆಟ್ರೋ ನಿರ್ಮಾಣಕ್ಕೆ ಅದರದ್ದೇ ಆದ ನಿಯಮಗಳಿವೆ. ಜನಸಂಖ್ಯೆ ದಟ್ಟನೆಗಳನ್ನು ನೋಡಿಕೊಂಡು ಮಾಡ ಲಾಗುತ್ತದೆ. ಬೆಂಗಳೂರಿನಂತೆ ಮಂಗಳೂರಿನಲ್ಲಿ ಮೆಟ್ರೋ ನಿರ್ಮಾಣ ಮಾಡುವುದು ಸಂತೋಷದ ವಿಚಾರ.
Advertisement