Advertisement
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಸೋಮವಾರ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ನರೇಗಾ ಹಬ್ಬ -2022 ಉದ್ಘಾಟಿಸಿ ಅವರು ಮಾತನಾಡಿದ ಅವರು, ನರೇಗಾ ಯೋಜನೆ ಬಡತನ ನಿರ್ಮೂಲನೆಯ ಪ್ರಬಲ ಅಸ್ತ್ರ. ನರೇಗಾ ಗ್ರಾಮೀಣ ಬದುಕಿನ ಭರವಸೆ. ದೇಶದ ಆರ್ಥಿಕತೆ ಮುನ್ನಡೆಸುವವರು ಬೆರಳೆಣಿಕೆ ಶ್ರೀಮಂತರಲ್ಲ. ನಿಜವಾದ ಆರ್ಥಿಕ ಬೆಳವಣಿಗೆ ದುಡಿಯುವ ವರ್ಗ, ರೈತರು, ಕೃಷಿ ಕೂಲಿಕಾರರಿಂದ ಆಗುತ್ತಿದೆ. ಆ ಅರ್ಥದಲ್ಲಿ ಆರ್ಥಿಕತೆಯನ್ನು ಮುನ್ನಡೆಸುತ್ತಿರುವವರು ನರೇಗಾ ಕೆಲಸಗಾರರು ಎಂದರು.
Related Articles
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ನರೇಗಾ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ರಾಜ್ಯಕ್ಕೆ ಒಳ್ಳೆಯ ಹೆಸರಿದೆ. ನರೇಗಾ ಎಂದರೆ ಬೇರೆ ರಾಜ್ಯಗಳು ಕರ್ನಾಟಕದತ್ತ ನೋಡುತ್ತಿವೆ. ಈ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ಜಾಸ್ತಿ ಮಾಡಲಾಗಿದೆ. ಸಣ್ಣ ರೈತರ ಆದಾಯದಲ್ಲಿ ಏರಿಕೆಯಾಗಿದೆ. ಒಟ್ಟು 16 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ವರ್ಷ 33.30 ಲಕ್ಷ ಕುಟುಂಬಗಳ 62.65 ಲಕ್ಷ ಜನರಿಗೆ ಯೋಜನೆಯಡಿ ಉದ್ಯೋಗ ನೀಡಲಾಗಿದೆ. ಈ ವರ್ಷದಲ್ಲಿ 4.92 ಲಕ್ಷ ಹೊಸ ಉದ್ಯೋಗ ಚೀಟಿ ಗಳನ್ನು ನೀಡುವ ಮೂಲಕ 11.90 ಲಕ್ಷ ಜನರನ್ನು ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಕೇಂದ್ರ ಸರಕಾರ ಮಹತ್ವಾಕಾಂಕ್ಷೆಯ ಜನಶಕ್ತಿ ಅಭಿಯಾನದಲ್ಲಿ ರಾಜ್ಯವು ಇಲ್ಲಿಯವರೆಗೆ 8.92 ಲಕ್ಷ ಕಾಮಗಾರಿಗಳನ್ನು ಕೈಗೊಂಡಿದ್ದು, 4.87 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಅಭಿಯಾನ ಅನುಷ್ಠಾನದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.
Advertisement