Advertisement
ಖಾನಾಪುರದ ಮಲಪರಭಾ ಮೈದಾನದಲ್ಲಿ ಬುಧವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಶ್ರೀರಾಮನ ಸಹೋದರನ ಹೆಸರು ಲಕ್ಷ್ಮಣ. ನಿಮ್ಮ ಸಹೋದರನ ಹೆಸರೂ ಲಕ್ಷ್ಮಣ ಇದೆ. ಇದು ಹಿಂದೂ ಹೆಸರು ಎಂಬುದು ನಿಮಗೆ ಗೊತ್ತಾಗಲಿಲ್ಲವೇ? ವಾಲ್ಮೀಕಿ ಮತ್ತು ರಾಮಾಯಣ ಬಗ್ಗೆ ಸತೀಶರಿಗೆ ನಂಬಿಕೆ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದರು.
ಹೀಗಾಗಿ ಇಂಥ ಮನಸ್ಥಿತಿ ಇರುವ ಪಕ್ಷಕ್ಕೆ ಇನ್ನು ಮುಂದೆ ಅಧಿ ಕಾರ ನೀಡಬಾರದು ಎಂಬ ಸಂಕಲ್ಪ ಮಾಡಬೇಕಿದೆ ಎಂದು ಕರೆ ನೀಡಿದರು.
Related Articles
Advertisement
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ಮರಾಠಾ ಸಮಾಜದ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾಜಿ ಶಾಸಕ ಮಾರುತಿ ಮೋರೆ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಟಿಕೆಟ್ ಆಕಾಂಕ್ಷಿಗಳಿಂದಪ್ರತಿಜ್ಞೆ ಮಾಡಿಸಿದ ಸಿಎಂ
ಖಾನಾಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹಲವಾರು ಆಕಾಂಕ್ಷಿಗಳು ಇದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಕಮಲ ಅರಳಿಸಬೇಕು. ವಿಧಾಸಭೆಯಲ್ಲಿ ನಮ್ಮ ತಪ್ಪಿನಿಂದ ಬಿಜೆಪಿ ಸೋತಿದೆ. ಈ ಬಾರಿ ಬಿಜೆಪಿ ಗೆಲ್ಲಿಸಲು ಒಟ್ಟಾಗಬೇಕು ಎಂದು ಮುಖ್ಯಮಂತ್ರಿಗಳು, ಎಲ್ಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳನ್ನು ಕರೆಸಿ ಸಾಲಾಗಿ ನಿಲ್ಲಿಸಿ ಅವರಿಂದ ಒಗ್ಗಟ್ಟಿನ ಪ್ರತಿಜ್ಞೆ ಮಾಡಿಸಿದರು.