ಮೈಸೂರು: ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ 3 ತಿಂಗಳು ನಡೆಯುವ ದಸರಾ ವಸ್ತು ಪ್ರದರ್ಶನವನ್ನು ಪರಿಸರ ಸ್ನೇಹಿ ವಸ್ತು ಪ್ರದರ್ಶನವನ್ನಾಾಗಿ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ವಸ್ತುಪ್ರದರ್ಶನ ಆವರಣದಲ್ಲಿ ದಸರಾ ವಸ್ತುಪ್ರದರ್ಶನ ಉದ್ಘಾಾಟಿಸಿ ಮಾತನಾಡಿದ ಅವರು, ಈ ಬಾರಿ ನಾಡಹಬ್ಬ ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ತಾಯಿ ಚಾಮುಮಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾಕ್ಕೆೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ ಎಂದರು.
1880 ರಲ್ಲಿ 10ನೇ ಚಾಮರಾಜ ಒಡೆಯರ್ ಅವರು ಗೃಹಕೈಗಾರಿಕೆಯನ್ನು ಪ್ರೋತ್ಸಾಹಿಸಲು ಹಾಗೂ ಅಂದಿನ ಸಮಯದಲ್ಲಿ ಕೈಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆೆ ಸೌಲಭ್ಯ ಕಲ್ಪಿಿಸಲು ಈ ವಸ್ತು ಪ್ರದರ್ಶನ ಪ್ರಾರಂಭಿಸಿದರು. ಇಂದು ಸರ್ಕಾರದ ನಾನಾ ಇಲಾಖೆಗಳ ಯೋಜನೆ ಮತ್ತು ಸೌಲಭ್ಯ, ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸಲು ಇದು ಸಹಕಾರಿಯಾಗಿದೆ ಎಂದರು.
ಈ ಬಾರಿಯ ವಸ್ತುಪ್ರದರ್ಶನದಲ್ಲಿ 150 ವಾಣಿಜ್ಯ, 100 ಹೆಚ್ಚು ಆಹಾರ ಮಳಿಗೆ ತೆರೆಯಲಾಗಿದ್ದು, ಮಹಿಳಾ ಸ್ವಸಹಾಯ ಸಂಘಗಳು ಉತ್ಪಾಾದನೆ ಮಾಡಿದ ವಸ್ತುಗಳ ಮಾರಾಟಕ್ಕೆೆ ಅನುವು ಮಾಡಿಕೊಡಲಾಗಿದೆ. ಮಳಿಗೆದಾರರು ಹಾಗೂ ಸಾರ್ವಜನಿಕರು ಪ್ಲಾಾಸ್ಟಿಿಕ್ ಬಳಕೆಯನ್ನು ನಿಲ್ಲಿಸಿ ಸ್ವಚ್ಛತೆಗೆ ಆದ್ಯತೆ ನಿಡಬೇಕು. ವಸ್ತುಪ್ರದರ್ಶನಕ್ಕೆೆ ಬರುವವರು ಮನೆಯಿಂದಲೇ ಕೈ ಚೀಲ ತರಬೇಕು ಎಂದ ಅವರು, 3 ತಿಂಗಳು ನಡೆಯುವ ವಸ್ತು ಪ್ರದರ್ಶನ ಪರಿಸರ ಸ್ನೇಹಿಯಾಗಿ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಮತ್ತಿಿತರರು ಇದ್ದರು.