Advertisement

ಅರಣ್ಯಾಧಿಕಾರಿ ಅಜೂರಗೆ ಮುಖ್ಯಮಂತ್ರಿ ಪದಕ ಪ್ರದಾನ

06:43 PM Nov 24, 2020 | Suhan S |

ಮುದ್ದೇಬಿಹಾಳ: ಅರಣ್ಯ ಇಲಾಖೆಯ ನೆಡುತೋಪು ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿ ತೋರಿಸಿದ ಹಿನ್ನೆಲೆ ಮುದ್ದೇಬಿಹಾಳ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಅಜೂರ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಚಿನ್ನದ ಪದಕ ವಿತರಿಸಿ ಪುರಸ್ಕರಿಸಿದರು.

Advertisement

2017-2019 ಅವಧಿಯಲ್ಲಿನ ನೆಡುತೋಪು ಸಾಧನೆಗಾಗಿ ಈ ಪದಕ ವಿತರಿಸಲಾಗಿದೆ. ಸೋಮವಾರ ವಿಧಾನಸಭೆಯ ಬಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಆನಂದ ಸಿಂಗ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್‌ ಮೋಹನ್‌, ಅರಣ್ಯ ಇಲಾಖೆಯ ಅಪರ ಮುಖ್ಯ ಪ್ರಧಾನ ಕಾರ್ಯದರ್ಶಿ ಸಂದೀಪ ದವೆ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಬಿಎಸ್ಸಿ ಪದವೀಧರರಾಗಿರುವ ಸಂತೋಷ ಅವರು 2007ರಲ್ಲಿ ಅರಣ್ಯಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಗೆ ಸೇರಿದರು. ಬೆಳಗಾವಿ ಜಿಲ್ಲೆ ಗೋಕಾಕ, ವಿಜಯಪುರ ಜಿಲ್ಲೆ ಇಂಡಿ ಭಾಗದಲ್ಲಿ ಸೇವೆ ಸಲ್ಲಿಸಿ 2017ರಿಂದ ಮುದ್ದೇಬಿಹಾಳ ತಾಲೂಕಿನ ವಲಯ ಅರಣ್ಯಾ ಧಿಕಾರಿಯಾಗಿ ಸೇವೆಯಲ್ಲಿದ್ದಾರೆ. ತಮ್ಮ ಅವ ಧಿಯಲ್ಲಿ ಒಂದು ಲಕ್ಷ ಸಸಿಗಳನ್ನು ನೆಟ್ಟು ಅವುಚಿಗುರಿ ಗಿಡವಾಗಿ, ಮರವಾಗಿಬೆಳೆಯುವಂತೆ ಮಾಡುವಲ್ಲಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ. ಮೀಸಲು ಅರಣ್ಯ ಪ್ರದೇಶದ ಜಮೀನು ಅತಿಕ್ರಮಣ, ಒತ್ತುವರಿ ತೆರವುಗೊಳಿಸಿಅದನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡು ಅಲ್ಲಿ ನೆಡುತೋಪು ಬೆಳೆಸುವಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿದೆ.

ಪದಕ ಸ್ವೀಕರಿಸಿದ ನಂತರ ಬೆಂಗಳೂರಿ ನಿಂದಲೇ ಉದಯವಾಣಿಯೊಂದಿಗೆಮಾತನಾಡಿದ ಅವರು, ನಾನು ನೇರವಾಗಿ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. 2017ರಿಂದ ಚಿನ್ನದ ಪದಕ ಕೊಟ್ಟು ಪ್ರೋತ್ಸಾಹಿಸುವಸಂಪ್ರದಾಯ ಜಾರಿಗೊಳಿಸಲಾಗಿತ್ತು.ಅರಣ್ಯ ಸಚಿವರಾದ ಆನಂದಸಿಂಗ್‌ ಅವರ ಪ್ರಯತ್ನದ ಫಲವಾಗಿ 2017, 2018, 2019ನೇ ಸಾಲಿನ ಸಾಧಕರಿಗೆ ಈಗ ಪುರಸ್ಕಾರ ನೀಡಲಾಗಿದೆ. ಪ್ರತಿ ವರ್ಷ ಮೂವರು ಆರ್‌ಎಫ್‌ಒಗಳನ್ನು ಆಯ್ಕೆ ಮಾಡಲಾಗುತ್ತದೆ. 2019ನೇ ಸಾಲಿನಲ್ಲಿ ರಾಜ್ಯದ ಮೂವರು ಆರ್‌ಎಫ್‌ ಒಗಳ ಪೈಕಿ ನಾನೂ ಒಬ್ಬನಾಗಿ ಪದಕಸ್ವೀಕರಿಸಿರುವುದು ಸಂತಸ ತಂದಿದೆ. ನನ್ನ ಜೊತೆಗೆ ವಿವಿಧ ವಿಭಾಗಗಳಲ್ಲಿ ಒಟ್ಟು 75ಸಾಧಕರು ಪದಕ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಚಿನ್ನದ ಪದಕ ನನಗೆ ಸಂದಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಅಜೂರ ಅವರಿಗೆ ಪದಕ ದೊರೆತ ಹಿನ್ನೆಲೆ ಹರ್ಷ ವ್ಯಕ್ತಪಡಿಸಿರುವಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ, ಪರಿಸರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಸಿರು ತೋರಣಬಳಗ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಮುದ್ದೇಬಿಹಾಳ ತಾಲೂಕು ಸ್ಥಳೀಯಸಂಸ್ಥೆ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಜೂರ ಅವರನ್ನು ಅಭಿನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next