Advertisement

ಚಿಕ್ಕಮಗಳೂರು: ಮಳೆಯಲ್ಲಿ ನೆಂದ ಪುಸ್ತಕವನ್ನ ಬಿಸಿಲಲ್ಲಿ ಒಣಗಿಸುವ ಪುಟ್ಟ-ಪುಟ್ಟ ಮಕ್ಕಳು

11:53 AM Jun 03, 2022 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ವಿವಾದ ರಾಜ್ಯದಲ್ಲಿ ದಿನನಿತ್ಯ ದೊಡ್ಡ ಚರ್ಚೆ ನಡೆಯುತ್ತಿದೆ. ಇದರ ನಡುವೆ ಮಲೆನಾಡಿನ ಶಾಲೆಯೊಂದು ಮಳೆ ಬಂದರೆ ಸೋರುತ್ತಿದ್ದು, ಪಠ್ಯ ಪುಸ್ತಕಗಳು ಮಳೆ ನೀರಿನಲ್ಲಿ ನೆನೆದು ಬಿಸಿಲಿನಲ್ಲಿ ಒಣಗಿಸಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕು ತನೋಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದಾಗಿದೆ. ಇಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೂ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಜೋರು ಮಳೆ ಬಂದರೆ ನೀರು ಶಾಲೆ ಕಟ್ಟಡದದೊಳಗೆ ನುಗ್ಗುತ್ತಿದೆ.

ಇದನ್ನೂ ಓದಿ:ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿ ಕಾಲಿಗೆ ಗುಂಡೇಟು

ಇತ್ತೀಚೆಗೆ ಸುರಿದ ಮಳೆಯಿಂದ ಶಾಲಾ ಕಟ್ಟಡದೊಳಗೆ ನೀರು ನುಗ್ಗಿ ಮಕ್ಕಳ ಪಠ್ಯ ಪುಸ್ತಕಗಳು ಒದ್ದೆಯಾಗಿದ್ದು, ಬಿಸಿಲಿನಲ್ಲಿ ಒಣಗಿಸಿ ಓದಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಿದ್ಯಾರ್ಥಿಗಳು ಶಾಲೆ ತೊರೆಯುತ್ತಿದ್ದಾರೆ.

Advertisement

ಸರ್ಕಾರಿ ಶಾಲೆ ಎಂದರೇ ದೂರ ನಿಲ್ಲುವ ಪೋಷಕರ ನಡುವೆ ಸರ್ಕಾರಿ ಶಾಲೆ ಉಳಿಸಬೇಕಿದೆ. ಶಾಲಾ ಕಟ್ಟಡ ದುರಸ್ಥಿಗೆ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next