Advertisement
ಇಲ್ಲಿನ ಮುರುಘಾ ಮಠದ ಬಸವ ಕೇಂದ್ರ, ಎಸ್.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಅನುಭವ ಮಂಟಪದಲ್ಲಿ ಬುಧವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.
Related Articles
Advertisement
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಈ ಕಲ್ಯಾಣ ಮಹೋತ್ಸವದಲ್ಲಿ ಪರಿಸರ ದಿನಾಚರಣೆಯನ್ನೂ ಆಚರಿಸುತ್ತಿರುವುದು ವಿಶೇಷ. ಮಾನವ ಭೂಮಿ ಮೇಲೆ ಜೀವಿಸಿ ಪರಿಸರದಿಂದ ಲಾಭ ಪಡೆದು ಪರಿಸರದಲ್ಲಿ ಅನೇಕ ಮಾಲಿನ್ಯಗಳನ್ನು ಮಾಡುತ್ತಿದ್ದಾನೆ. ಆ ಮಾಲಿನ್ಯ ನಿವಾರಣೆ ಸರ್ಕಾರದ ಕೆಲಸ ಎಂದು ಜನ ಬೊಟ್ಟು ಮಾಡುತ್ತಾರೆ. ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಡಬೇಕು. ಪ್ರತಿ ನಿತ್ಯ, ಪ್ರತಿ ಕ್ಷಣ ನಾವು ಇಂಗಾಲದ ಡೈ ಆಕ್ಸೈಡ್ ಬಿಡುತ್ತೇವೆ. ಅದರ ಶುದ್ಧೀಕರಣಕ್ಕಾದರೂ ನಾವೆಲ್ಲರೂ ತಪ್ಪದೇ 10 ಸಸಿಗಳನ್ನಾದರೂ ನೆಟ್ಟು ಮರವಾಗಿ ಬೆಳೆಸಿ ಮಾಡಿದ ಮಾಲಿನ್ಯದ ತಪ್ಪಿಗೆ ಪ್ರಾಯಶ್ಚಿತ್ತ ಪಡೋಣ ಎಂದರು.
ಇದೇ ಸಂದರ್ಭದಲ್ಲಿ ಕೃಪಾಸಾಗರ್ ನಿರ್ದೇಶನದ ‘ಸಾರ್ವಜನಿಕರಲ್ಲಿ ವಿನಂತಿ’ ಕನ್ನಡ ಚಲನಚಿತ್ರದ ಪೋಸ್ಟರ್ ಅನ್ನು ಡಾ| ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಎಚ್.ಎಂ. ಭರತೇಶ್, ಕೆ.ವಿ. ಶಿವಕುಮಾರ್, ಸಾಹಿತಿ ಕುಂ.ವೀರಭದ್ರಪ್ಪ ದಂಪತಿ, ಕೆಪಿಟಿಸಿಎಲ್ ಅಧಿಕಾರಿ ಗುರುಮಲ್ಲಯ್ಯ, ಬೈರಮಂಗಲದ ರಾಮೇಗೌಡ, ಪ್ರಕಾಶ್ ಕಂಬತ್ತಳ್ಳಿ, ಕೃಷ್ಣಮೂರ್ತಿ, ಕೊಟ್ರೇಶ್ ತಳಸ್ಥೆ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಎ.ಜೆ. ಪರಮಶಿವಯ್ಯ, ಎಂ.ಜಿ. ದೊರೆಸ್ವಾಮಿ,ಎನ್. ತಿಪ್ಪಣ್ಣ ಭಾಗವಹಿಸಿದ್ದರು.
ಪಿಆರ್‌ಒ ಪ್ರದೀಪ್‌ಕುಮಾರ್ ಸ್ವಾಗತಿಸಿದರು. ಪ್ರೊ| ಸಿ.ವಿ. ಸಾಲಿಮಠ ನಿರೂಪಿಸಿದರು. ಜ್ಞಾನಮೂರ್ತಿ ವಂದಿಸಿದರು.
ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಆರು ಅಂತರ್ಜಾತಿ ವಿವಾಹಗಳೂ ಜರುಗಿವೆ. ಒಟ್ಟು 45 ಜೋಡಿ ವಧು-ವರರು ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಸಾಮಾಜಿಕ ಸಾಮರಸ್ಯ, ಸಮಾನತೆ, ಮಾನವೀಯ ಕಾರ್ಯ ಶ್ರೀಮಠದ ಮುಖ್ಯ ಧ್ಯೇಯ.•ಡಾ| ಶಿವಮೂರ್ತಿ ಮುರುಘಾ ಶರಣರು.