Advertisement

ರೆಸಿಪಿ ಓದಿ…ಸುಲಭದಲ್ಲಿ ಮನೆಯಲ್ಲೇ ಚಿಕನ್ ಬಿರಿಯಾನಿ ಮಾಡಿ

09:54 AM Jan 24, 2020 | Sriram |

ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್‌ ನಲ್ಲಿ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿದ್ದಾರೆ. ಚಾಟ್ಸ್ ಐಟಮ್‌ ಗಳಿರಬಹುದು
, ಚೈನೀಸ್ ಫ‌ುಡ್‌ ಗಳಿರಬಹುದು, ತರೇವಾರಿ ನಾನ್ ವೆಜ್ ಐಟಮ್‌ ಗಳಿರಬಹುದು ಹೀಗೆ ಜನರ ಫ‌ುಡ್‌ ಹ್ಯಾಬಿಟ್‌ ವಿಭಿನ್ನ ವಿಶಿಷ್ಟ. ಈ ಸಾಲಿಗೆ ಸೇರುವಂತದ್ದು ವೈವಿಧ್ಯಮಯ ರೈಸ್ ಐಟಮ್‌ ಗಳು. ಚಿಕನ್ ಬಿರಿಯಾನಿ , ಎಗ್ ಬಿರಿಯಾನಿ, ಮಟನ್ ಬಿರಿಯಾನಿ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಹೀಗೆ ರೈಸ್ ಐಟಮ್‌ ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು ಚಿಕನ್ ಬಿರಿಯಾನಿ. ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ಚಿಕನ್ ಬಿರಿಯಾನಿ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಇದನ್ನು ತಯಾರಿಸಿ ಸವಿಯಿರಿ…

Advertisement

ಬೇಕಾಗುವ ಪದಾರ್ಥಗಳು:ಚಿಕನ್ 500 ಗ್ರಾಂ, ಬಾಸುಮತಿ ಅಕ್ಕಿ 1ಕೆ.ಜಿ., ಈರುಳ್ಳಿ 3, ಮೊಸರು 1/2 ಕಪ್, ಜೀರಿಗೆ 1 ಚಮಚ, ಹಸಿ ಮೆಣಸಿನಕಾಯಿ 8 ರಿಂದ 10, ಮೆಣಸಿನ ಪುಡಿ 2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನಾ ಸೊಪ್ಪು ಸ್ವಲ್ಪ, ಅರಿಶಿನ ಪುಡಿ 1 ಚಮಚ, ಶುಂಠಿ  ಬೆಳ್ಳುಳ್ಳಿ ಪೇಸ್ಟ್ 3 ಚಮಚ, ಗರಂ ಮಸಾಲಾ ಪುಡಿ 1 ಚಮಚ, ಎಣ್ಣೆ 3 ಚಮಚ, ತುಪ್ಪ 4ಚಮಚ, ಬಾದಾಮಿ 6, ಗೇರು ಬೀಜ 8, ಒಣ ದ್ರಾಕ್ಷಿ 10 , ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ:
ಚಿಕನ್ ಅನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು. ಅರ್ಧ ಗಂಟೆಗಳ ಕಾಲ ಅಕ್ಕಿಯನ್ನು ನೆನೆಸಿರಬೇಕು. ಚಿಕನ್ ಗೆ ಉಪ್ಪು, ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಶುಂಠಿ  ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಮತ್ತು ಮೊಸರನ್ನು ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.. ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು ಹಸಿಮೆಣಸಿನಕಾಯಿಯನ್ನು ಪೇಸ್ಟ್ ಮಾಡಿಕೊಂಡು ಮಸಾಲೆ ಮಿಶ್ರಣಕ್ಕೆ ಬೆರಸಬೇಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯನ್ನು ಕೆಂಪಾಗಾಗುವವರೆಗೆ ಹುರಿದುಕೊಂಡು ಚಿಕನ್ ಗೆ ಬೆರೆಸಿ ಒಂದು ಗಂಟೆ ಕಾಲ ಹಾಗೆಯೇ ಬಿಡಬೇಕು. ಮೇಲೆ ಹೇಳಿದ ಮಸಾಲೆ ಮಿಶ್ರಣವನ್ನು ಬೆರೆಸಬೇಕು.

ನಂತರ ಪಾತ್ರೆಯಲ್ಲಿ ನೆನೆಸಿದ ಅಕ್ಕಿಗೆ ಸ್ವಲ್ಪ ಅರಿಶಿನ, ಸ್ವಲ್ಪ ಗರಂ ಮಸಾಲೆ ಮತ್ತು ಬೇಯುವುದಕ್ಕೆ ಅಗತ್ಯದಷ್ಟು ನೀರು ಹಾಕಿ ಬೇಯಲು ಬಿಡಬೇಕು. ಅದೇ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಸ್ವಲ್ಪ ಚಿಕನ್ ಮಿಶ್ರಣ ಮತ್ತು ಸ್ವಲ್ಪ ಅನ್ನ ಹೀಗೆ ಒಂದಾದರೊಂದಂತೆ ತುಂಬತ್ತಾ ಬರಬೇಕು. ಬೇಕಾದರೆ ಕೇಸರಿಯನ್ನು ಒಂದು ನಿಮಿಷ ನೆನೆಸಿ ಅನ್ನದ ಮೇಲೆ ಹಾಕಬೇಕು. ಒಣ ದ್ರಾಕ್ಷಿ,ಚೂರು ಮಾಡಿದ ಗೇರು ಬೀಜ ಮತ್ತು ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹುರಿಯಿರಿ.

ಈಗ ಪಾತ್ರೆಗೆ ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷ ಹಬೆ ಬರುವ ತನಕ ಬೇಯಿಸಿ.ನಂತರ ಹುರಿದಿಟ್ಟ ಒಣ ದ್ರಾಕ್ಷಿ,ಗೇರು ಬೀಜ, ಬಾದಾಮಿ ಬೀಜಗಳನ್ನು ಬಿರಿಯಾನಿಗೆ ಬೆರೆಸಿರಿ. ಈಗ ಬಿಸಿ-ಬಿಸಿ ಚಿಕನ್ ತಿನ್ನಲು ಸಿದ್ದವಾಗಿರುತ್ತದೆ. ಚಿಕನ್ ಬಿರಿಯಾನಿಯನ್ನು ಸಲಾಡ್ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

ಸಲಾಡ್‌

ಬೇಕಾಗುವ ಪದಾರ್ಥಗಳು
ಈರುಳ್ಳಿ 4, ಹಸಿಮೆಣಸು 4 ಮೊಸರು 200 ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು.

Advertisement

ತಯಾರಿಸುವ ವಿಧಾನ
ನುಣ್ಣಗೆ ಉದ್ದಕ್ಕೆ ಈರುಳ್ಳಿಯನ್ನು ಕತ್ತರಿಸಿರಿ. ಅದಕ್ಕೆ ಹಸಿಮೆಣಸಿನಕಾಯಿ, ಮೊಸರು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ.

Advertisement

Udayavani is now on Telegram. Click here to join our channel and stay updated with the latest news.

Next