Advertisement

ಶಿಕಾಗೋ ಬೆಂಕಿ ದುರಂತ

10:15 AM Oct 04, 2019 | Team Udayavani |

ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗುತ್ತೆ ಎನ್ನುವುದಕ್ಕೆ ನಿದರ್ಶನದಂತಿದೆ “ಶಿಕಾಗೊ ಬೆಂಕಿ ದುರಂತ’. ಅದು ಇತಿಹಾಸದಲ್ಲಿ “ಗ್ರೇಟ್‌ ಶಿಕಾಗೊ ಫೈಯರ್‌’ ಎಂದೆ ಕುಖ್ಯಾತಿ ಪಡೆದಿದೆ. ಸಾಮಾನ್ಯವಾಗಿ ಬೆಂಕಿ ದುರಂತಗಳಲ್ಲಿ ಒಂದು ಮನೆ ಅಥವಾ ಅದರ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹಬ್ಬಿ, ಹಾನಿ ಸಂಭವಿಸುತ್ತದೆ. ಆದರೆ 1871ರಲ್ಲಿ ನಡೆದ ಶಿಕಾಗೊ ಬೆಂಕಿ ದುರಂತದಲ್ಲಿ ಅರ್ಧಕ್ಕೂ ಹೆಚ್ಚು ನಗರ ಬೆಂಕಿಗೆ ಆಹುತಿಯಾಗಿತ್ತು. 300 ಮಂದಿ ಅಸುನೀಗಿದ್ದರು. ಒಂದು ಲಕ್ಷ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದರು. ನಗರವನ್ನೇ ಬಲಿಪಡೆದ ಬೆಂಕಿ ಮೊದಲಿಗೆ ಶುರುವಾಗಿದ್ದು ಎಲ್ಲಿ ಎಂಬುದರ ಕುರಿತಾಗಿ ಅನೇಕ ಕಥೆಗಳಿವೆ. ಶ್ರೀಮತಿ ಓಲೇರಿ ಎಂಬ ಮಹಿಳೆ ಕೊಟ್ಟಿಗೆಯಲ್ಲಿ ಹಸುವೊಂದನ್ನು ಕಟ್ಟಿಹಾಕಿದ್ದಳು. ಅದು ತನ್ನ ಕಾಲ ಬಳಿಯಿದ್ದ ಸೀಮೆಎಣ್ಣೆ ಬುಡ್ಡಿಯನ್ನು ಒದ್ದಾಗ ಹುಲ್ಲಿನ ಮೆದೆಗಳಿಗೆ ಬೆಂಕಿ ತಗುಲಿ ಅಕ್ಕಪಕ್ಕ ಹಬ್ಬಿತು ಎನ್ನುವುದು ಅಂಥ ಕಥೆಗಳಲ್ಲೊಂದು! ಅದೇನೇ ಇದ್ದರೂ ಬೆಂಕಿ ಊರನ್ನೇ ಬಲಿ ಪಡೆಯುವುದಕ್ಕೆ ಅನೇಕ ಕಾರಣಗಳಿದ್ದವು. ಆ ವರ್ಷ ಶಿಕಾಗೋ ನಗರ ಮಳೆಯನ್ನೇ ಕಂಡಿರಲಿಲ್ಲ. ಬರದ ವಾತಾವರಣವಿತ್ತು. ಅಲ್ಲದೆ ಅದೇ ಸಮಯದಲ್ಲಿ ಉತ್ತರಾಭಿಮುಖವಾಗಿ ಬೀಸಿದ ಗಾಳಿ, ಬೆಂಕಿ ಬಹಳ ಬೇಗ ಹರಡಲು ಕಾರಣವಾಯಿತು. ಇನ್ನೊಂದು ಮುಖ್ಯವಾದ ಅಂಶವೊಂದಿದೆ. ಆಗಿನ ಕಾಲದಲ್ಲಿ ಶಿಕಾಗೋನಲ್ಲಿ ಮರಮುಟ್ಟುಗಳ ಬಳಕೆ ಅತ್ಯಧಿಕವಾಗಿತ್ತು. ಮನೆ ಕಟ್ಟಲು ಮರವನ್ನು ಉಪಯೋಗಿಸುತ್ತಿದ್ದರು, ಛಾವಣಿಗೆ ಡಾಂಬರಿನಿಂದ ರೂಪಿತವಾದ ಶೀಟುಗಳನ್ನು ಹೊದ್ದಿರುತ್ತಿದ್ದರು, ರಸ್ತೆಗಳು, ಪಾದಚಾರಿ ಮಾರ್ಗಗಳು ಮರದಿಂದಲೇ ನಿರ್ಮಿತವಾಗಿದ್ದವು. ಹೀಗಾಗಿ ಬೆಂಕಿ ಹತ್ತಿಕೊಳ್ಳುವುದು ಸುಲಭವಾಯಿತು.

Advertisement

ಹವನ

Advertisement

Udayavani is now on Telegram. Click here to join our channel and stay updated with the latest news.

Next