Advertisement
ಛೋಟಾ ರಾಜನ್ ಹಾಗೂ ಮೂವರು ಮಾಜಿ ಅಧಿಕಾರಿಗಳನ್ನು ದೋಷಿ ಎಂದು ನವದೆಹಲಿಯ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿತ್ತು.
ಮೂವರು ಅಧಿಕಾರಿಗಳ ನೆರವು ಪಡೆದು, ಪಾತಕಿ ರಾಜನ್ 1998-99ರಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದುಕೊಂಡಿದ್ದ. “107/ಬಿ, ಹಳೇ ಎಂ.ಸಿ.ರಸ್ತೆ, ಆಜಾದ್ ನಗರ, ಮಂಡ್ಯ, ಕರ್ನಾಟಕ’ ಎಂಬ ವಿಳಾಸವನ್ನು ನೀಡಿ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್ ಮಾಡಿಕೊಂಡಿದ್ದ.
Related Articles
ಕುಮಾರ್ ಎಂಬ ವ್ಯಕ್ತಿಯಾಗಲೀ, ಆ ವಿಳಾಸವಾಗಲೀ ಇಲ್ಲ ಎಂಬುದು ದೃಢವಾಗಿತ್ತು.
ಜತೆಗೆ, ಅಂಚೆ ನೌಕರರೂ ಎಂಸಿ ರೋಡ್ ಮತ್ತು ಆಜಾದ್ ನಗರದಲ್ಲಿ 107/ಬಿ ಸಂಖ್ಯೆಯ ಮನೆ ಅಸ್ತಿತ್ವದಲ್ಲೇ ಇಲ್ಲ ಎಂದಿದ್ದರು. ಇದಲ್ಲದೆ, ಪ್ರಯಾಣ ದಾಖಲೆ ಪಡೆಯಲು ರಾಜನ್ ನಕಲಿ ಮತದಾರರ ಗುರುತಿನ ಚೀಟಿ ಮತ್ತು ನಕಲಿ ಪಡಿತರ ಕಾರ್ಡ್ ಅನ್ನೂ ಮಾಡಿಸಿಕೊಂಡಿರುವುದು ತನಿಖೆ ವೇಳೆ ಪತ್ತೆಯಾಗಿತ್ತು.
Advertisement