Advertisement

ಛತ್ತೀಸ್ ಗಢದಲ್ಲಿ 15 ವರ್ಷಗಳ BJP ಅಧಿಕಾರ ಅಂತ್ಯ, “ಕೈ”ಗೆ ಗದ್ದುಗೆ

11:23 AM Dec 11, 2018 | Sharanya Alva |

ನವದೆಹಲಿ: ಬುಡಕಟ್ಟು ರಾಜಯ ಛತ್ತೀಸ್ ಗಢದ 90 ಸದಸ್ಯ ಬಲ ಹೊಂದಿದ್ದ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ 64 ಸ್ಥಾನ ಪಡೆಯುವ ಮೂಲಕ ಅಧಿಕಾರದ ಗದ್ದುಗೆಗೆ ಏರುವ ಮೂಲಕ  ಕಳೆದ 15 ವರ್ಷಗಳಿಂದ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಕೇವಲ 18 ಸ್ಥಾನ ಪಡೆಯುವುದರ ಜೊತೆಗೆ ಅಧಿಕಾರ ಕಳೆದುಕೊಂಡಿದೆ.

Advertisement

ಪ್ರತಿಬಾರಿಯೂ ಛತ್ತೀಸ್ ಗಢದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆಯೇ ತೀವ್ರ ಪೈಪೋಟಿ ನಡೆದು ಕುತೂಹಲಕಾರಿ ಫಲಿತಾಂಶಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತು. ಈ ಬಾರಿಯೂ ಕೂಡಾ ಪೈಪೋಟಿಯಲ್ಲಿ ಬಿಜೆಪಿ 18 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ 64 ಸ್ಥಾನ, ಜೆಸಿಸಿ 08 ಸ್ಥಾನಗಳಲ್ಲಿ  ಜಯ ಸಾಧಿಸಿದೆ.

ಕಳೆದ ಬಾರಿ 90 ವಿಧಾನಸಭಾ ಸ್ಥಾನಗಳ ಛತ್ತೀಸ್ ಗಢದಲ್ಲಿ ಬಿಜೆಪಿ 49 ಸ್ಥಾನ ಪಡೆದು ಅಧಿಕಾರಕ್ಕೇರಿತ್ತು. ಕಾಂಗ್ರೆಸ್ 39 ಸ್ಥಾನ ಪಡೆದು ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಈ ಬಾರಿ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್ ಛತ್ತೀಸ್ ಗಢ(ಜೆ) ಮತ್ತು ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ, ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಂಡಿದ್ದವು. ಈ ಮೈತ್ರಿ ಕೂಟ ಗೆಲುವು ಸಾಧಿಸುವುದು ಕಷ್ಟ ಎಂಬ ಸಮೀಕ್ಷೆಗಳ ಲೆಕ್ಕಾಚಾರ ತಲೆಕೆಳಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next