ನವದೆಹಲಿ: ಕಲ್ಲಿದ್ದಲು ಸುಂಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದೆ ಬೆಂಗಳೂರು, ಛತ್ತೀಸಗಢ ಮತ್ತು ಜಾರ್ಖಂಡ್‌ನಲ್ಲಿ ಇ.ಡಿ. ದಾಳಿ ನಡೆಸಿದೆ. ಕರ್ನಾಟಕದ ಬೆಂಗಳೂರು, ಛತ್ತೀಸಗಢದ ರಾಯಪುರ, ಕೊರಬಾ, ದುರ್ಗ್ ಮತ್ತು ಜಾರ್ಖಂಡ್‌ನ ರಾಂಚಿಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದರಲ್ಲಿ ಛತ್ತೀಸಗಢ ರಾಜ್ಯ ಸರ್ಕಾರದ ನೀರು ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಅನ್ಬಳಗನ್ ಪಿ. ಸೇರಿದಂತೆ ಪ್ರಮುಖರ ಮನೆಗಳ ಮೇಲೆ ದಾಳಿ ನಡೆದಿದೆ.
ಅನ್ಬಳಗನ್ ಅವರ ಪತ್ನಿ ಅಲಾರ್‌ವೆುಲ್ಮಂಗೈ ಡಿ. ಕೂಡ ಐಎಎಎಸ್ ಅಧಿಕಾರಿಯಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದರು. ಹಗರಣಕ್ಕೆ ಸಂಬಂಧಿಸಿದಂತೆ ಉಪ ಕಾರ್ಯದರ್ಶಿ ಸೌಮ್ಯಾ ಚಾರಾಸಿಯಾ, ವಿಷ್ಣೋಯಿ, ಕಲ್ಲಿದ್ದಲು ವ್ಯಾಪಾರಿ ಸೂರ್ಯಕಾಂತ್ ತಿವಾರಿ, ಲಕ್ಷ್ಮೀಕಾಂತ್ ತಿವಾರಿ ಮತ್ತು ಉದ್ಯಮಿ ಸುನಿಲ್ ಅಗರವಾಲ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.