Advertisement
ಎಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ವಾರ್ವಿಕ್‌ಶೈರ್ 6 ವಿಕೆಟಿಗೆ 310 ರನ್ ಗಳಿಸಿದ್ದರೆ ಸಸೆಕ್ಸ್ ತಂಡವು 7 ವಿಕೆಟಿಗೆ 306 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ವಾರ್ವಿಕ್‌ಶೈರ್ ಗೆಲುವು ಸಾಧಿಸುವಲ್ಲಿ ಸ್ಪಿನ್ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. 51 ರನ್ನಿಗೆ 3 ವಿಕೆಟ್ ಪಡೆಯುವ ಮೂಲಕ ಅವರು ಸಸೆಕ್ಸ್‌ಗೆ ಪ್ರಬಲ ಹೊಡೆತ ನೀಡಿದ್ದರು. ಅಲಿ ಆರ್ರ (81), ಟಾಮ್ ಕ್ಲಾರ್ಕ್ (30) ಮತ್ತು ಡೆಲ್‌ರೇ ರಾಲಿನ್ಸ್ (11) ಅವರ ವಿಕೆಟನ್ನು ಪಾಂಡ್ಯ ಉರುಳಿಸಿದ್ದರು.
ಪೂಜಾರ ಕ್ರೀಸ್‌ನಲ್ಲಿದ್ದಾಗ ಸಸೆಕ್ಸ್‌ಗೆ ಗೆಲುವಿನ ನಿರೀಕ್ಷೆಯಿತ್ತು. ಆದರೆ 49ನೇ ಓವರಿನ ಮೊದಲ ಎಸೆತದಲ್ಲಿ 107 ರನ್ ಗಳಿಸಿದ ಪೂಜಾರ ಔಟಾಗುತ್ತಲೇ ಸಸೆಕ್ಸ್‌ನ ಸೋಲು ಖಚಿತವಾಯಿತು. ಪೂಚಾರ 79 ಎಸೆತಗಳಿಂದ 7 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ್ದರು. 45ನೇ ಓವರಿನಲ್ಲಿ ಅವರು ಲಿಯಮ್ ನಾರ್ವೆಲ್ ಓವರಿನಲ್ಲಿ ಮೂರು ಬೌಂಡರಿ ಮತ್ತು 1 ಸಿಕ್ಸರ್ ಸಹಿತ 22 ರನ್ ಸಿಡಿಸಿದ್ದರು.