Advertisement

ಶಾಲೆಗಳಲ್ಲಿ ಚೆಸ್‌ ಕಲಿಕೆ ಕಡ್ಡಾಯವಾಗಲಿ

02:17 AM Apr 11, 2019 | sudhir |

ಉಡುಪಿ: ತಮಿಳುನಾಡು ಮತ್ತು ಗುಜರಾತಿನ ಶಾಲೆಗಳಲ್ಲಿ ಚೆಸ್‌ ಆಟವನ್ನು ಪಠ್ಯದ ಒಂದು ಭಾಗವಾಗಿ ಆಯ್ಕೆ ಮಾಡಿಕೊಂಡು ಕಡ್ಡಾಯಗೊಳಿಸಲಾಗಿದೆ.

Advertisement

ಅದರಂತೆ ನಮ್ಮ ರಾಜ್ಯದಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸಬೇಕಾದ ಆವಶ್ಯಕತೆ ಎಂದು ರಾಜ್ಯದ ಪ್ರಥಮ ಹಾಗೂ ದೇಶದ 50ನೇ ಗ್ರ್ಯಾನ್‌ ಮಾಸ್ಟರ್‌ ಮೈಸೂರಿನ ತೇಜ್‌ಕುಮಾರ್‌ ಎಂ.ಎಸ್‌. ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಉಡುಪಿಯಲ್ಲಿ ಚೆಸ್‌ ಪಂದ್ಯಾಟವೊಂದರ ಟ್ರೋಫಿ ಅನಾವರಣಕ್ಕೆ ಆಗಮಿಸಿದ್ದ ತೇಜ್‌ಕುಮಾರ್‌ “ಉದಯವಾಣಿ’ ಜತೆ ಮಾತನಾಡಿ ಕರ್ನಾಟಕದಲ್ಲಿ ಚೆಸ್‌ ಆಟಗಾರರ ಸಂಖ್ಯೆ ಕಡಿಮೆಯಿದೆ. ರಾಜ್ಯದಲ್ಲಿ ಚೆಸ್‌ ಆಟಗಾರರ ಸಂಖ್ಯೆ ಹೆಚ್ಚಾಗಬೇಕಾದ ಶಾಲೆಗಳಲ್ಲಿ ಕ್ರೀಡೆಯನ್ನು ಕಡ್ಡಾಯಗೊಳಿಸಬೇಕು ಎಂದರು.

– ಶಾಲೆಗಳಲ್ಲಿ ಚೆಸ್‌ ಬೆಳೆಸುವುದು ಹೇಗೆ?
ಗುಜರಾತ್‌ ಮತ್ತು ತಮಿಳುನಾಡು ಸರಕಾರ ಅನುಸರಿಸಿರುವ ಮಾದರಿ ರಾಜ್ಯದಲ್ಲೂ ಜಾರಿಗೊಳಿಸಬೇಕು. ಬೆಂಗಳೂರು ಮತ್ತು ಮೈಸೂರಿನಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳ ಬೇಡಿಕೆಯಂತೆ ಚೆಸ್‌ಗೆ ವಿಶೇಷ ಗಮನ ನೀಡಲಾಗುತ್ತಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ ಚೆಸ್‌ಗೆ ಅಂತಹ ಪ್ರೋತ್ಸಾಹ ಸಿಗುತ್ತಿಲ್ಲ.

ಮೈಸೂರಿನಲ್ಲಿ ಕೆಲವು ಶಾಲೆಯವರು ಚೆಸ್‌ ತರಬೇತಿಗಾಗಿ ನನ್ನ ಸಲಹೆ ಕೇಳುತ್ತಿದ್ದಾರೆ. ನಾನು ಖುದ್ದಾಗಿ ಹೋಗಿ ಚೆಸ್‌ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ. ಕೆಲವು ತರಬೇತುದಾರರನ್ನು ತಯಾರು ಮಾಡಿ ಅವರ ಮೂಲಕ ಶಾಲೆಗಳಲ್ಲಿ ಚೆಸ್‌ ತರಬೇತಿ ನೀಡುವ ಯೋಜನೆ ಹಾಕಿಕೊಂಡಿದ್ದೇನೆ. ನಾಲ್ಕನೇ ವರ್ಷದಿಂದಲೇ ಮಕ್ಕಳಿಗೆ ಚೆಸ್‌ ಕಲಿಸಬಹುದು.

Advertisement

– ಪಠ್ಯಕ್ಕೆ ತೊಂದರೆಯಾಗದೆ?
ತರಗತಿಯ ವಿಷಯಗಳ ಕಲಿಕೆಯ ಜತೆಗೆ ಚೆಸ್‌ನಲ್ಲಿ ತೊಡಗಿಸಿಕೊಂಡರೆ ಅಂಕಗಳಿಕೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗದು. ಚೆಸ್‌ನಿಂದ ಏಕಾಗ್ರತೆ ಬೆಳೆಯುತ್ತದೆ ಮತ್ತು ಇತರೆ ವಿಷಯಗಳಿಗೂ ಬುದ್ಧಿ ಚುರುಕಾಗುತ್ತದೆ. ನಮ್ಮಲ್ಲಿಯೂ ಪ್ರತಿಭಾವಂತರಿದ್ದಾರೆ. ಆದರೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ.

ನಿಮಗೆ ಸ್ಫೂರ್ತಿ…
ವಿಶ್ವನಾಥನ್‌ ಆನಂದ್‌ ಅವರೇ ಸ್ಫೂರ್ತಿ. ಅವರೇ ನನ್ನ ಐಕಾನ್‌. ನಾನು ರಾಜ್ಯದ ಮೊದಲ ಗ್ರ್ಯಾನ್‌ ಮಾಸ್ಟರ್‌ ಆಗಿರುವುದಕ್ಕೆ ಹೆಮ್ಮೆಯಿದೆ. ಚೆಸ್‌ ಕೋಚ್‌ನ ಮಾರ್ಗದರ್ಶನವಿಲ್ಲದೆ 36ನೇ ವಯಸ್ಸಿನಲ್ಲಿ ನಾನು ಗ್ರ್ಯಾನ್‌ ಮಾಸ್ಟರ್‌ ಆಗಿದ್ದೆ. ಅನಂತರ ಕಳೆದ ವರ್ಷ ಶಿವಮೊಗ್ಗದ ಸ್ಟಾನಿ ಅವರು ಗ್ರ್ಯಾನ್‌ ಮಾಸ್ಟರ್‌ ಆಗಿದ್ದಾರೆ. ತಮಿಳುನಾಡಿನಲ್ಲಿ 20ಕ್ಕೂ ಅಧಿಕ ಗ್ರ್ಯಾನ್‌ ಮಾಸ್ಟರ್‌ಗಳಿದ್ದಾರೆ.

– ಹೇಗಿದೆ ಪ್ರೋತ್ಸಾಹ?
ಚೆಸ್‌ ಕ್ರೀಡೆ ಆಯ್ದುಕೊಂಡ ನನಗೆ ಉತ್ತಮ ಪ್ರೋತ್ಸಾಹ ದೊರೆಕಿದೆ.ಇತರ ಹಲವು ಕ್ರೀಡೆಗಳಂತೆ ಚೆಸ್‌ ಸಾಧಕರಿಗೂ ನ್ಪೋರ್ಟ್ಸ್ ಕೋಟಾ ದಡಿ ಉತ್ತಮ ಅವಕಾಶವಿದೆ. ನಾನು ಚೆಸ್‌ನಿಂದಾಗಿಯೇ ಇಂದು ಭಾರತೀಯ ರೈಲ್ವೆಯ ವಿಭಾಗೀಯ ಅಧಿಕಾರಿಯಾಗಿ ಸೇವೆ ಸಲ್ಲಿಸುವಂತಾಗಿದೆ.

– ಮುಂದಿನ ಗುರಿ?
2017ರಲ್ಲಿ ಗ್ರ್ಯಾನ್‌ ಮಾಸ್ಟರ್‌ ಆದೆ. ಹಲವು ಬಾರಿ ರಾಷ್ಟ್ರಮಟ್ಟದ ವಿವಿಧ ಚಾಂಪಿಯನ್‌ಶಿಪ್‌ಗ್ಳಲ್ಲಿ ಗೆದ್ದಿದ್ದೇನೆ. 2011ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಸನಿಹಕ್ಕೆ ಹೋಗಿದ್ದೆ. ಮುಂದಿನ ಕಾಮನ್ವೆಲ್‌ Õನ ಲ್ಲಿ ಪದಕ ಗೆಲ್ಲಲೇಬೇಕೆಂಬ ಕನಸಿದೆ. ಇದಕ್ಕಾಗಿ ಕಳೆದೆರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next