Advertisement
ತಾಣ, ಚೆನ್ನೈನಿಂದ 58 ಕಿ.ಮೀ. ದೂರದ ಮಾಮಲ್ಲಪುರಂ. ಕಳೆದ ಕೆಲವು ವರ್ಷಗಳಿಂದ ಚದುರಂಗದಲ್ಲಿ ಗಮನಾರ್ಹ ಸಾಧನೆಯೊಂದಿಗೆ ಮಿಂಚುತ್ತಿರುವ ಭಾರತದ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿಯಾಗಿದೆ.
Related Articles
Advertisement
ಭಾರತ “ಬಿ’ ತಂಡ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದೆ. ಡಿ.ಗುಕೇಶ್, ಆರ್.ಪ್ರಜ್ಞಾನಂದ, ನಿಖೀಲ್ ಸರಿನ್, ರೌನಕ್ ಸಾಧ್ವನಿ, ಬಿ.ಅಧಿಬನ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ ಎಂದು ಕೋಚ್ ರಮೇಶ್ ಹೇಳಿದ್ದಾರೆ.
ಭಾರತದ ಸಿ ತಂಡ ಅಗ್ರ ಶ್ರೇಯಾಂಕಿತರನ್ನು ಹಾಗೂ ಯುವ ಆಟಗಾರರನ್ನು ಹೊಂದಿದೆ. ಸೂರ್ಯಶೇಖರ್ ಗಂಗೂಲಿ ಇಲ್ಲಿನ ನೆಚ್ಚಿನ ಆಟಗಾರ. ಎಸ್.ಪಿ.ಸೇತುರಾಮನ್, ಅಭಿಜಿತ್ ಗುಪ್ತ, ಕಾರ್ತಿಕೇಯನ್ ಮುರಳಿ, ಅಭಿಮನ್ಯು ಪುರಾಣಿಕ್ ಉಳಿದ ಆಟಗಾರರು. ಆದರೆ ಶ್ರೇಯಾಂಕದಲ್ಲಿ ಸಿ ತಂಡ 17ರಷ್ಟು ಕೆಳ ಸ್ಥಾನದಲ್ಲಿದೆ.
ಅಮೆರಿಕವನ್ನು ಈ ಕೂಟದ ನೆಚ್ಚಿನ ತಂಡವೆಂದು ಬಣ್ಣಿಸಲಾಗುತ್ತಿದೆ. ಫ್ಯಾಬಿಯೊ ಕ್ಯಾರುವಾನ, ವೆಸ್ಲಿ ಸೋ, ಲೆವನ್ ಅರೋನಿಯನ್, ಸ್ಯಾಮ್ ಶಂಕ್‌ಲ್ಯಾಂಡ್, ಲೀನಿಯರ್ ಡೊಮಿನಿಗ್ವೆಝ್ ಅವರೆಲ್ಲ ಅಮೆರಿಕದ ಪ್ರಮುಖ ಸ್ಪರ್ಧಿಗಳು.
ವನಿತಾ ವಿಭಾಗ: ವನಿತೆಯರ ಎ ವಿಭಾಗಕ್ಕೆ ಅಗ್ರಶ್ರೇಯಾಂಕ ಲಭಿಸಿದೆ. ಕೊನೇರು ಹಂಪಿ, ಡಿ.ಹರಿಕಾ, ಆರ್.ವೈಶಾಲಿ, ತನಿಯಾ ಸಚೆªàವ್, ಭಕ್ತಿ ಕುಲಕರ್ಣಿ ಅವರೆಲ್ಲ ಇಲ್ಲಿನ ಪ್ರಮುಖ ಆಟಗಾರ್ತಿಯರು. ಬಿ ವಿಭಾಗದಲ್ಲಿ ವಂತಿಕಾ ಅಗರ್ವಾಲ್, ಸೌಮ್ಯಾ ಸ್ವಾಮಿನಾಥನ್, ಮೇರಿ ಆ್ಯನ್ ಗೋಮ್ಸ್, ಪದ್ಮಿನಿ ರಾವತ್, ದಿವ್ಯಾ ದೇಶ್‌ಮುಖ್; ಸಿ ವಿಭಾಗದಲ್ಲಿ ಇಶಾ ಕರ್ವಡೆ, ಸಾಹಿತಿ ವರ್ಷಿಣಿ, ಪ್ರತ್ಯೂಷಾ ಬೊಡ್ಡ, ಪಿ.ವಿ.ನಂದಿತಾ, ವಿಶ್ವಾ ವಸ್ನಾವಾಲ ಇದ್ದಾರೆ.