Advertisement

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

01:24 AM Oct 14, 2024 | Team Udayavani |

ಬ್ರಹ್ಮಾವರ: ಪರಿಪೂರ್ಣ ಶಿಕ್ಷಣದ ಗುರಿಯೊಂದಿಗೆ ರಾಷ್ಟ್ರೋತ್ಥಾನ ಪರಿಷತ್‌ನಿಂದ ಉಡುಪಿ ಜಿಲ್ಲೆಯ ಚೇರ್ಕಾಡಿಯಲ್ಲಿ ರಾಷ್ಟ್ರೋತ್ಥಾನ ಪ.ಪೂ. ಕಾಲೇಜು ಆರಂಭವಾಗುತ್ತಿದೆ. ಸುಸಜ್ಜಿತ ಕಟ್ಟಡ, ಅತ್ಯಾಧುನಿತ ಸೌಲಭ್ಯ, ಸಮಗ್ರ ಅಭಿವೃದ್ಧಿಯ ಕಲಿಕೆಯೊಂದಿಗೆ 2025-26ರ ಶೆಕ್ಷಣಿಕ ವರ್ಷದಲ್ಲಿ ಕಾಲೇಜು ಆರಂಭಗೊಳ್ಳಲಿದೆ.

Advertisement

ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ./ ಪಿ.ಸಿ.ಎಂ.ಸಿ., ವಾಣಿಜ್ಯ ವಿಭಾಗದಲ್ಲಿ ಎ.ಬಿ.ಇ.ಸಿ. ಆಯ್ಕೆಗಳಿವೆ. ಜತೆಗೆ ನೀಟ್‌, ಜೆಇಇ, ಕೆಸಿಇಟಿ, ಸಿ.ಎ, ಸಿ.ಎಸ್‌. ಮತ್ತು ಕ್ಲಾಟ್‌ ಪರೀಕ್ಷೆಗಳಿಗೆ ವಿಶೇಷ ತರಬೇತಿ ದೊರೆಯಲಿದೆ.

ಸ್ಪರ್ಧಾತ್ಮಕ ಪರೀಕ್ಷೆ
ವಿದ್ಯಾರ್ಥಿಗಳನ್ನು ಪೋಷಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಪ ಡಿಸುವುದು ಸಂಸ್ಥೆಯ ಗುರಿ. ವಿಜ್ಞಾನ ಮತ್ತು ಗಣಿತದ ಬಗ್ಗೆ ಉತ್ಸಾಹ ಹುಟ್ಟು ಹಾಕುವುದು, ನಾವೀನ್ಯಗಳಲ್ಲಿ ಭವಿಷ್ಯದ ನಾಯಕರಾಗಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು. ನವೀನ ಬೋಧನಾ ವಿಧಾನಗಳ ಮೂಲಕ ಪರಿಣಾಮಕಾರಿ ಸಂವಹನವನ್ನು ಬೆಳೆಸುವುದು ಜತೆಗೆ ಸಾಂಸ್ಕೃತಿಕ ಜಾಗೃತಿ ಮೂಡಿಸುವುದು ಸಂಸ್ಥೆಯ ಉದ್ದೇಶ.

ಫೌಂಡೇಶನ್‌ ಕೋರ್ಸ್‌
ಪರೀಕ್ಷೆಯ ಒಳನೋಟ, ವಿವರವಾದ ಕಲಿಕಾ ಸಾಮಗ್ರಿ, ಪವಿತ್ರ ಪರಿಸರ, ವೈಯಕ್ತಿಕ ಮಾರ್ಗದರ್ಶನ, ನಿಯಮಿತ ಮೌಲ್ಯಮಾಪನ, ಮುಂಚಿತ ತಯಾರಿ, ವೃತ್ತಿ ಮಾರ್ಗದರ್ಶನ, ಮಾಸಿಕ ಪರೀಕ್ಷೆ, ಅನುಭವಿ ಅಧ್ಯಾಪಕರಿಂದ ಮಾಹಿತಿ, ಸಮಸ್ಯೆ ಪರಿಹರಿಸುವ ಕೌಶಲಗಳಿಗೆ ಸಂಸ್ಥೆಯ ಫೌಂಡೇಶನ್‌ ಕೋರ್ಸ್‌ ಸಹಕಾರಿಯಾಗಲಿದೆ. ವೈದ್ಯಕೀಯ ಆಕಾಂಕ್ಷಿಗಳಿಗೆ ದೀರ್ಘಾವ ಧಿಯ ತರಬೇತಿ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಫೌಂಡೇಶನ್‌ ಕೋರ್ಸ್‌ ನಡೆಯಲಿದೆ. ಸ್ಕಾಲರ್‌ಶಿಪ್‌ ಪರೀಕ್ಷೆಯು ಅ.20ರಂದು ನಡೆಯಲಿದೆ.

ಹಾಸ್ಟೆಲ್‌ ವ್ಯವಸ್ಥೆ
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ. 24/7 ಭದ್ರತೆ, ವಿಶಾಲವಾದ ಕೊಠಡಿ, ಪೌಷ್ಟಿಕ ಊಟ ಮತ್ತು ಲಾಂಡ್ರಿ ವ್ಯವಸ್ಥೆ ಇದೆ. ಮಾಹಿತಿಗೆ ಬ್ರಹ್ಮಾವರ ಮಧುವನ ಕಾಂಪ್ಲೆಕ್ಸ್‌ನಲ್ಲಿರುವ ಕಾರ್ಯಾಲಯ ಅಥವಾ ಇ-ಮೇಲ್‌: info.udupi@rpuc.in, , ವೆಬ್‌ಸೈಟ್‌: udupi.rpuc.in ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

ಶ್ರೇಷ್ಠತೆ, ಸಾಧನೆ
ರಾಷ್ಟ್ರೋತ್ಥಾನ ಪರಿಷತ್‌ 1965ರಿಂದ ಆರೋಗ್ಯ ಮತ್ತು ಸುಸ್ಥಿರ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿರುವ ಸಂಸ್ಥೆ. ಶಿಕ್ಷಣ, ಆರೋಗ್ಯ, ಸಾಹಿತ್ಯ ಮತ್ತು ಸೇವೆಯ ಮೇಲೆ ಕೇಂದ್ರೀಕರಿಸಿದೆ. ರಾಷ್ಟ್ರೀಯ ಪ್ರಗತಿಗೆ ಪ್ರೇರಕವಾಗಿ ಜ್ಞಾನ, ಶ್ರೇಷ್ಠತೆ ಮತ್ತು ಸಮಗ್ರತೆಯ

ರಾಷ್ಟ್ರ ನಿರ್ಮಾಣ ಆಶಯ
ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎನ್ನುವ ಆಶಯದೊಂದಿಗೆ ವಿದ್ಯಾರ್ಥಿಗಳನ್ನು ಸಮರ್ಥ, ಸುಯೋಗ್ಯ ನಾಗರಿಕನ್ನಾಗಿ ರೂಪಿಸುವುದೇ ರಾಷ್ಟ್ರೋತ್ಥಾನ ಶೈಕ್ಷಣಿಕ ಚಟುವಟಿಕೆಗಳ ಉದ್ದೇಶ. ಇಂತಹ ಶಿಕ್ಷಣದ ಮೂಲಕ ಸಮಾಜವನ್ನು ಜಾಗೃತಗೊಳಿಸುವ, ದೇಶವನ್ನು ಕಟ್ಟುವ ಕೆಲಸವನ್ನು ರಾಷ್ಟ್ರೋತ್ಥಾನ ಪರಿಷತ್‌ ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದೆ.
-ನಾ. ದಿನೇಶ್‌ ಹೆಗಡೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೋತ್ಥಾನ ಪರಿಷತ್‌

ಸುಶಿಕ್ಷಿತ ಸಮಾಜ
ಸುಶಿಕ್ಷಿತ ಸಮಾಜದ ನಿರ್ಮಾಣವೆಂಬ ಧ್ಯೇಯದೊಂದಿಗೆ ಮಗುವಿನ ಸಮಗ್ರ ಸಮತೋಲಿತ ಬೆಳವಣಿಗೆಯತ್ತ ಗಮನ ಹರಿಸಿ, ಮಗುವಿನ ಪ್ರಗತಿಯಲ್ಲಿ ಯಶಸ್ಸು ಕಾಣುವ ಗುರಿಯೊಂದಿಗೆ ನಮ್ಮ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರ, ಮೌಲ್ಯ, ಚಿಂತನೆಗಳೊಂದಿಗೆ ಮಗುವಿನ ಪೂರ್ಣ ಅಭಿವೃದ್ಧಿಯನ್ನು ಬಯಸುವ ಶಿಕ್ಷಣ ನಮ್ಮ ಸಂಸ್ಥೆಯ ಧ್ಯೇಯ.
-ಭಾಗ್ಯಶ್ರೀ ಐತಾಳ್‌ ಕರಂಬಳ್ಳಿ
ಪ್ರಾಂಶುಪಾಲರು, ರಾಷ್ಟ್ರೋತ್ಥಾನ ಪ.ಪೂ. ಕಾಲೇಜು

Advertisement

Udayavani is now on Telegram. Click here to join our channel and stay updated with the latest news.

Next