Advertisement

ಗುಣಮಟ್ಟದ ಹಾಲಿನ ಉತ್ಪಾದನೆಯೊಂದಿಗೆ ರೈತರ ಆರ್ಥಿಕ ಅಭಿವೃದ್ಧಿ ಉದ್ದೇಶ

12:54 AM Feb 20, 2020 | Sriram |

ಹೈನುಗಾರಿಕೆಯೊಂದಿಗೆ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯ ಉದ್ದೇಶದೊಂದಿಗೆ ಸ್ಥಾಪಿತವಾದ ಚೇರ್ಕಾಡಿ ಹಾಲು ಉತ್ಪಾದಕರ ಸಂಘ ಇಂದಿನ ದಿನದಲ್ಲಿ ಏರಿದ ಎತ್ತರ ಇತರ ಸಂಘಗಳಿಗೆ ಮಾದರಿಯಾಗಿದ್ದು , ಹೈನುಗಾರರಿಗೆ ಪ್ರೇರಣೆಯೂ ಆಗಿದೆ.

Advertisement

ಬ್ರಹ್ಮಾವರ: ಗ್ರಾಮೀಣ ಆರ್ಥಿಕತೆಗೆ ಪೂರಕವಾಗಿ ಸಣ್ಣ ಪ್ರಮಾಣದ ಚಟುವಟಿಕೆಯೊಂದಿಗೆ ಪ್ರಾರಂಭಗೊಂಡ ಪೇತ್ರಿಯ ಚೇರ್ಕಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಇಂದು ಬೃಹದಾಕಾರವಾಗಿ ಬೆಳೆದಿದೆ.

ಹತ್ತು ಹಲವು ಚಟುವಟಿಕೆ ಮೂಲಕ ಪರಿಸರದಲ್ಲಿ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ.ಹಿರಿಯರ ಶ್ರಮ, ಮುತುವರ್ಜಿಯಿಂದ 1975ರ ಜೂ.21ರಂದು ಕೆನರಾ ಮಿಲ್ಕ್ ಯೂನಿಯನ್‌ ಅಧೀನದಲ್ಲಿ ಸ್ಥಾಪನೆಗೊಂಡಿತು.

ಪ್ರಾರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿದ್ದು 50 ಜನ ಸದಸ್ಯರಿಂದ 70 ಲೀ. ಹಾಲು ಶೇಖರಣೆಯಾಗುತ್ತಿತ್ತು. ಸುಮಾರು 10ರಿಂದ 12ಕಿ.ಮೀ. ವ್ಯಾಪ್ತಿಯ ಹೈನುಗಾರರಿಗೆ ಇದುವೇ ಖರೀದಿ ಕೇಂದ್ರವಾಗಿತ್ತು. ಪ್ರಸ್ತುತ 265 ಸದಸ್ಯರಲ್ಲಿ 180 ಮಂದಿ ಸಕ್ರೀಯರಾಗಿದ್ದು, ಸರಾಸರಿ 1,250ಲೀ. ಹಾಲು ಸಂಗ್ರಹವಾಗುತ್ತಿದೆ.

ಕೋಟಿಗೂ ಮಿಕ್ಕಿ ವ್ಯವಹಾರ
ಸಂಘವು 1.10 ಕೋಟಿ ರೂ.ಗೂ ಹೆಚ್ಚು ವಾರ್ಷಿಕ ಅರ್ಥಿಕ ವಹಿವಾಟು ನಡೆಸಿ, ವಾರ್ಷಿಕ 7 ಲಕ್ಷ ನಿವ್ವಳ ಲಾಭ ಗಳಿಸಿದೆ. 4.5 ಲಕ್ಷ ರೂ. ಬೋನಸ್‌(ಲಾಭ) ವಿತರಣೆ ಮಾಡುತ್ತಿದೆ. ಪ್ರತಿ ಹೈನುಗಾರರಿಗೆ ಪ್ರೋತ್ಸಾಹಕ ಬಹುಮಾನ ನೀಡುತ್ತಿದೆ.

Advertisement

ದೊಡ್ಡ ರೈತರು ಸೇರಿದಂತೆ ಕನಿಷ್ಠ ಪ್ರದೇಶದಲ್ಲಿ ಹೈನುಗಾರಿಕೆ ನಡೆಸುವವರೂ ಸಂಘಕ್ಕೆ ಹಾಲು ಮಾರಾಟ ಮಾಡುವುದರಿಂದ ದಿನ ನಿತ್ಯ ಖರ್ಚು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುತ್ತಿದೆ.

ಬಂಜೆತನ ನಿವಾರಣಾ ಶಿಬಿರ, ಕಾಲುಬಾಯಿ ಲಸಿಕಾ ಶಿಬಿರ, ಶುದ್ಧಹಾಲು ಉತ್ಪಾದನೆ ಮಾಹಿತಿ ಕಾರ್ಯಾಗಾರ, ಪಶು ಸಂಗೋಪನ ಇಲಾಖೆ ಜಂಟಿ ಆಶ್ರಯದಲ್ಲಿ ರೈತರಿಗೆ ಉಪಯುಕ್ತ ಮಾಹಿತಿ ಶಿಬಿರಗಳನ್ನು ಸಂಘವು ಆಯೋಜಿಸುತ್ತಿದೆ.

ಸ್ವಾವಲಂಬಿ
ಪ್ರಸ್ತುತ ಸ್ವಂತ ಸ್ಥಳದಲ್ಲಿ ಸುಸಜ್ಜಿತ ಕಟ್ಟಡ, ಹಿಂಡಿ ಗೋದಾಮ, ಮೀಟಿಂಗ್‌ ಹಾಲ್‌ನ ವ್ಯವಸ್ಥೆ ಹೊಂದಿದೆ. ಪ್ರತಿ ವರ್ಷ ಹೈನುಗಾರರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಪ್ರತಿ ವರ್ಷ ಹಾಲು ದಿನಾಚರಣೆ, ಸಹಕಾರಿ ಸಪ್ತಾಹದ ಆಚರಣೆ, ಉತ್ತಮ ಗುಣಮಟ್ಟದ ಹಾಲಿಗಾಗಿ ಹೈನುಗಾರಿಗೆ ಶಿಬಿರಗಳನ್ನು ಆಯೋಜಿಸುತ್ತಿದೆ. ಪಾರದರ್ಶಕ ವ್ಯವಹಾರಕ್ಕೆ ಸಿ.ಸಿ. ಟಿವಿ ಆಳವಡಿಸಲಾಗಿದೆ.

ಪ್ರಶಸ್ತಿ -ಪುರಸ್ಕಾರ
ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ 2018-19ರಲ್ಲಿ ಡಿ.ಸಿ.ಸಿ. ಬ್ಯಾಂಕ್‌ನಿಂದ ಜಿಲ್ಲಾ ಸಾಧನಾ ಪ್ರಶಸ್ತಿ ದೊರೆತಿದೆ.

ಸದಸ್ಯರಿಂದ ಉತ್ತಮ ಶುದ್ಧ ಮತ್ತು ಗುಣಮಟ್ಟದ ಹಾಲನ್ನು ಯೋಗ್ಯ ದರದಲ್ಲಿ ಖರೀದಿಸಿ ಅದನ್ನು ಒಕ್ಕೂಟಕ್ಕೆ ಮಾರಾಟ ಮಾಡಿ ತನ್ಮೂಲಕ ರೈತರು ಉತ್ಪಾದಿಸುವ ಹಾಲಿಗೆ ವರ್ಷವಿಡೀ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಿ, ಪಾರದರ್ಶಕ ವ್ಯವಹಾರ ನಡೆಸಿ, ರೈತರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದು ನಮ್ಮ ಉದ್ದೇಶ.
ಕನ್ನಾರು ಕಮಲಾಕ್ಷ ಹೆಬ್ಟಾರ್‌
ಅಧ್ಯಕ್ಷರು

ಅಧ್ಯಕ್ಷರು
ಪಾಂಡುರಂಗ ಹೆಗ್ಡೆ, ಶಿವರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಮಂಜುನಾಥ ಹೆಬ್ಟಾರ್‌, ವಿಠಲ್‌ ಹೆಗ್ಡೆ, ಕೃಷ್ಣಮೂರ್ತಿ ಮಂಜ, ಶ್ಯಾಮ ಪ್ರಸಾದ್‌ ಭಟ್‌, ಕಮಲಾಕ್ಷ ಹೆಬ್ಟಾರ್‌(ಹಾಲಿ)
ಕಾರ್ಯದರ್ಶಿಗಳು
ದಯಾನಂದ ಪೈ, ಚಂದ್ರಶೇಖರ ಕಾರಂತ
( ಹಾಲಿ )

 - ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next