ನವ ದೆಹಲಿ : ದೇಶದ ದೊಡ್ಡ ನಾಗರಿಕ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಇತ್ತೀಚೆಗೊಂದು ಹೊಸ ಅಧಿಸೂಚನೆಯನ್ನು ಹೊರಡಿಸಿದೆ.
ಬ್ಯಾಂಕ್ ಆಫ್ ಬರೋಡಾ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮುಂದಿನ ತಿಂಗಳ ಆರಂಭದಿಂದ ಚೆಕ್ ಪಾವತಿಯ ನಿಯಮಗಳು ಬದಲಾಗಲಿವೆ ಎಂದು ತಿಳಿಸಿದೆ.
ಇದನ್ನೂ ಓದಿ : ಸನ್ನಿಗೆ ಡ್ರೆಸ್ ತೊಡಿಸಲು ಹರಸಾಹಸ : ವಿಡಿಯೋ ಹಂಚಿಕೊಂಡ ಮೋಹಕ ಚೆಲುವೆ
ಈ ಕುರಿತಂತೆ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ತನ್ನ ಗ್ರಾಹಕರಿಗೆ ಮಾಃಇತಿ ನೀಡಿದ ಬ್ಯಾಂಕ್ ಆಫ್ ಬರೋಡಾ, ‘ಜೂನ್ 1 ರಿಂದ ಬ್ಯಾಂಕ್ ಪಾಸಿಟಿವ್ ಪೇ ದೃಢೀಕರಣವನ್ನು ಕಡ್ಡಾಯಗೊಳಿಸಲಿದೆ. ಇದರ ಅಡಿಯಲ್ಲಿ, 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಚೆಕ್ ಮೂಲಕ ಪಾವತಿಸಿದರೆ, ಗ್ರಾಹಕರು ಮತ್ತೆ ದೃಢೀಕರಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಂಡಾಗ ಮಾತ್ರ ವ್ಯವಹಾರ ಪೂರ್ಣಗೊಳ್ಳುತ್ತದೆ. ಇಲ್ಲದಿದ್ದರೆ ಚೆಕ್ ರದ್ದುಗೊಳ್ಳುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಇನ್ನು, 8422009988 ಗೆ ನಂಬರ್ ಗೆ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಬ್ರಾಂಚ್ ಫೋನ್ ಅಥವಾ ಎಸ್ ಎಂ ಎಸ್ ಮೂಲಕ ದೃಢೀಕರಿಸಬಹುದಾಗಿದ್ದು, ಇದಕ್ಕಾಗಿ, ಫಲಾನುಭವಿಯ ಹೆಸರು, ಮೊತ್ತ, ಚೆಕ್ ದಿನಾಂಕ, ಮೊತ್ತ ಸಂಖ್ಯೆಯ ರೂಪದಲ್ಲಿ, ಖಾತೆ ಸಂಖ್ಯೆ ಮತ್ತು ಚೆಕ್ ಸಂಖ್ಯೆಯನ್ನು ಹಂಚಿಕೊಳ್ಳುವುದು ಅಗತ್ಯವಾಗಿದೆ.
ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಯ ಆದೇಶದಂತೆ, ಚೆಕ್ ಪಾವತಿಗಳ ಸಮಯದಲ್ಲಿ ವಂಚನೆಯನ್ನು ತಡೆಯಲು ಬ್ಯಾಂಕ್ ಆ್ಯಫ್ ಬರೋಡಾ ಕೇಂದ್ರೀಕೃತ ಪಾಸಿಟಿವ್ ಪೇ ವ್ಯವಸ್ಥೆಯನ್ನು ಪರಿಚಯಿಸಿದೆ.
ಇದನ್ನೂ ಓದಿ : ಕಪ್ಪು, ಬಿಳಿ ಆಯ್ತು..ಈಗ ಹಳದಿ ಫಂಗಸ್! ದೆಹಲಿಯಲ್ಲಿ ಮೊದಲ ಪ್ರಕರಣ